ಇಂಡಿ : ಭೀಮೆಯಲ್ಲಿನ ಬಾರ್ ಅಂಗಡಿಯಲ್ಲಿ ಮದ್ಯದ ಬಾಟಲ್ನಲ್ಲೂ ಹಗಲು ದರೋಡೆ ಮಾಡುತ್ತಿರುವ ಆರೋಪಗಳು ಕೇಳಿ ಬರುತ್ತಿವೆ. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಲಸಂಗಿನಲ್ಲಿರುವ ಸರ್ವೇ ನಂಬರ 261/3ರಲ್ಲಿರುವ ಎಂಎಸ್ಐಎಲ್ ಮದ್ಯದ ಅಂಗಡಿಯಲ್ಲಿ ಒಂದು ಬಾಟಲ್ ಬಿಯರ್ ಹಾಗೂ ಒಂದು ಕ್ವಾಟರ್ ಮದ್ಯಕ್ಕೆ 20 ರಿಂದ 30 ರೂಪಾಯಿ ಹೆಚ್ಚಿಗೆ ವಸೂಲಿ ಮಾಡುತ್ತಿದ್ದು, ಇದೀಗ್ ಮದ್ಯ ಪ್ರಿಯರೊಬ್ಬರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಸೆರೆ ಹಿಡಿದು ವೈರಲ್ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಅದಕ್ಕಾಗಿ ಈ ಅಂಗಡಿ ವಿರುದ್ಧ ಅಬಕಾರಿ ಇಲಾಖೆಯವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮದ್ಯ ಪ್ರಿಯರು ಆಗ್ರಹಿಸಿದ್ದಾರೆ.