ಇಂಡಿ : ಅಕ್ರಮವಾಗಿ ಮದ್ಯ ಸಾಗಾಟ ಸಾಬೀತು ಹಿನ್ನೆಲೆ ಆರೋಪಿಗೆ ಒಂದು ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ವಿಜಯಪುರ ಜಿಲ್ಲೆಯ ಇಂಡಿ ಜೆಎಂಎಫ್ಸಿ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ.
ಸಂತೋಷ ರಾಮು ರಾಠೋಡ ಶಿಕ್ಷೆಗೊಳಗಾದವರು. ಇನ್ನು 27-07-2018 ರಂದು ಇಂಡಿ ತಾಲ್ಲೂಕಿನ ಹಂಜಗಿ ತಾಂಡಾದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ವೇಳೆ ಅಬಕಾರಿ ಉಪ ನಿರೀಕ್ಷಕರಾದ ಸುನೀಲ ಕಲ್ಲೂರ ನೇತೃತ್ವದ ತಂಡ ದಾಳಿಗೈದು ಕೋರ್ಟ್ಗೆ ದೋಷಾರೋಪಣೆ ಪಟ್ಟಿ ಸಲ್ಲಿಸಿದರು. ಇನ್ನೂ ವಾದ ವಿವಾದಗಳನ್ನು ಆಲಿಸಿದ ಜೆಎಂಎಫ್ಸಿ ನ್ಯಾಯಾಧೀಶರಾದ ಈಶ್ವರ ಎಸ್ಎಂ ಅವರು ಆರೋಪಿಗೆ ದಂಡ ಹಾಗೂ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಇಬ್ರಾಹಿಂ ಗಚ್ಚಿನಮಾಲ್ ವಾದ ಮಂಡಿಸಿದರು.