ಮುಖ್ಯ ಮಂತ್ರಿ ಸಿದ್ದರಾಮಯ್ಯ ಕ್ಷೇಮೆ ಕೇಳಬೇಕು : ಶಾಸಕ ಯತ್ನಾಳ
ವಿಜಯಪುರ : ಕೇಂದ್ರ ವಿತ್ತ ಸಚಿವೆಗೆ ಏಕ ವಚನದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ವಿರುದ್ಧ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ X ಖಾತೆಯಲ್ಲಿ ಗುರುವಾರ 7 ಗಂಟೆಗೆ ಕಿಡಿಕಾರಿದ್ದಾರೆ. ಸಿಎಂ ಸಿದ್ದರಾಮಯ್ಯ ಕ್ಷಮೆ ಕೇಳುವಂತೆ ಆಗ್ರಹಿಸಿ ಶಾಸಕ ಯತ್ನಾಳ ಟ್ವಿಟ್ ಮಾಡಿದ್ದಾರೆ.
ಬಾಯ್ತಪ್ಪಿನಿಂದ, ಕಣ್ತಪ್ಪಿನಿಂದ, ಆ ಗಳಿಗೆಯಲ್ಲಿ ಹೀಗಾಯ್ತು, ನಾನು ಹಳ್ಳಿಯವ ಹಾಗೆ ಮಾತನಾಡಿದೆ ಎಂದು ಸಬೂಬು ಹೇಳಿ ಮುಚ್ಚಿ ಹಾಕುವ ಪ್ರಯತ್ನ ಮುಖ್ಯಮಂತ್ರಿಗಳು ಮಾಡಬಾರದು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಏಕವಚನದಲ್ಲಿ ಮಾತನಾಡಿದ್ದಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳು ಬೇಷರತ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.