ಜಿಲ್ಲಾ ಕೃಷಿ ಪ್ರಶಸ್ತಿಗೆ ಅರ್ಜಿ ಅಹ್ವಾನ
ಇಂಡಿ : ಧಾರವಾಡ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಪ್ರತಿ ವರ್ಷದಂತೆ ಈ ವÀರ್ಷವು ಕೃಷಿಯಲ್ಲಿ ವಿಶೇಷ ಸಾಧನೆ ಮಾಡಿದ ರೈತರನ್ನು ಗುರುತಿಸಿ ೨೦೨೪ನೇ ಸಾಲಿನಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡದ ಕೃಷಿ ಮೇಳದಲ್ಲಿ ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಲಾಗಿದ್ದು, ಅದರಂತೆ ಪ್ರತಿ ಜಿಲ್ಲೆಗೆ ಒಬ್ಬರಂತೆ ಅತ್ಯುತ್ತಮ ರೈತ ಹಾಗೂ ರೈತ ಮಹಿಳೆಯರನ್ನು ಗುರುತಿಸಿ ಕೃಷಿ ಮೇಳದಲ್ಲಿ “ಶ್ರೇಷ್ಠ ಕೃಷಿಕ” ಹಾಗೂ “ಶ್ರೇಷ್ಠ ಕೃಷಿ ಮಹಿಳೆ” ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ|| ಶಿವಶಂಕರ ಮೂರ್ತಿ ತಿಳಿಸಿದ್ದಾರೆ.
ಆಸಕ್ತ ರೈತ, ರೈತ ಮಹಿಳೆಯರು ನಿಗದಿತ ಅರ್ಜಿ ನಮೂನೆಯನ್ನು ಹಿರಿಯ ವಿಜ್ಞಾನಿ ಮತ್ತು ಮಖ್ಯಸ್ತರು, ಕೃಷಿ ವಿಜ್ಞಾನ ಕೇಂದ್ರ ಇಂಡಿ ಯಿಂದ ಪಡೆಯಬಹುದಾಗಿದೆ. ಭರ್ತಿಮಾಡಿದ ಅರ್ಜಿಯನ್ನು ತಾಲೂಕು ಮಟ್ಟದ ಕೃಷಿ ಅಧಿಕಾರಿಗಳ ಶಿಫಾರಸ್ಸಿನೊಂದಿಗೆ ಕೃಷಿ ವಿಜ್ಞಾನ ಕೇಂದ್ರ, ಇಂಡಿಯ ಕಚೇರಿಗೆ ದಿನಾಂಕ: ೩೧.೦೭.೨೦೨೪ ರ ಒಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ ಡಾ. ಪ್ರಕಾಶ ಜಿ. ವಿಜ್ಞಾನಿ (ಬೇಸಾಯಶಾಸ್ತç) ದೂ. ೯೧೧೩೬೭೦೧೯೦ ಅಥವಾ ಡಾ. ಹೀನಾ ಎಂ. ಎಸ್. ವಿಜ್ಞಾನಿ (ತೋಟಗಾರಿಕೆ) ದೂ. ೯೭೩೧೩೯೨೫೦೬ ಇವರಿಗೆ ಸಂಪರ್ಕಿಸಲು ಕೋರಲಾಗಿದೆ. ಅರ್ಜಿಯನ್ನು ಕೃಷಿ ವಿಜ್ಞಾನ ಕೇಂದ್ರ, ಇಂಡಿ ವೈಬಸೈಟನಿಂದ ಡೌನಲೋಡ ಮಾಡಿಕೊಳ್ಳಬಹುದು.
ಹಿರಿಯ ವಿಜ್ಞಾನಿ ಮತ್ತು ಮಖ್ಯಸ್ಥರು,
ಕೃಷಿ ವಿಜ್ಞಾನ ಕೇಂದ್ರ, ಇಂಡಿ
ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಇಂಡಿ


















