ಪಟ್ಟಣದ ಸಮಗ್ರ ಅಭಿವೃದ್ಧಿಗೆ ಎಲ್ಲಾ ಸದಸ್ಯರ ಸಹಕಾರ ನೀಡಬೇಕು: ಎಂ.ಆರ್. ಮಂಜುನಾಥ್
ಹನೂರು :ಪಟ್ಟಣದ ಸಮಗ್ರ ಅಭಿವೃದ್ಧಿಗೆ ಅಧಿಕಾರಿಗಳು ಮತ್ತು ಸದಸ್ಯರುಗಳ ಸಮನ್ವಯದೊಂದಿಗೆ ಹನೂರನ್ನು ಸ್ವಚ್ಚ ಸುಂದರ ಪಟ್ಟಣ ಆಗಿ ಪರಿವರ್ತಿಸಲು ಬದ್ದರಾಗಿರುವುದಾಗಿ ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳು ಸದಸ್ಯರುಗಳ ಜೊತೆ ನಡೆದ ಸುದೀರ್ಘ ಚರ್ಚೆಯಲ್ಲಿ ಅಬಿವೃದ್ಧಿಗೆ ಪೂರಕವಾದ ಮಾಹಿತಿ ಸಂಗ್ರಹಿಸಿ ಮಾತನಾಡಿದ ಅವರು ಪಟ್ಟಣ ವ್ಯಾಪ್ತಿಯ ಸಾರ್ವಜನಿಕರ ಅಹವಾಲುಗಳನ್ನು ಚಾಚು ತಪ್ಪದೇ ಅಧಿಕಾರಿಗಳು ತಮ್ಮಕರ್ತವ್ಯದಲ್ಲಿ ಲೋಪ ಆಗದಂತೆ ನಿರ್ವಹಿಸಬೇಕು. ಎಲ್ಲಾ ಸದಸ್ಯರುಗಳು ಅಧಿಕಾರಿಗಳ ಸಮನ್ವಯದಿಂದ ನನ್ನ ಜೊತೆ ಕೈಜೋಡಿಸುವ ನಿಟ್ಟಿನಲ್ಲಿ ಪಟ್ಟಣದ ಸಮಗ್ರ ಅಭಿವೃದ್ದಿಗೆ ಪರಸ್ವರ ಬದ್ದರಾಗಿ ನಿಲ್ಲುವುದಾಗಿ ತಿಳಿಸಿದರು.
ಪಟ್ಟಣದಲ್ಲಿ ಜನ ಸಾಮಾನ್ಯರಿಗೆ ನೀರಿನ ಅಭಾವ ಉಂಟಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಿದರಲ್ಲದೆ. ಪ್ರತಿ ಮನೆಗೂ ದಿನದ 24 ಗಂಟೆಯು ಕುಡಿಯುವ ನೀರು ತಲುಪುವಂತೆ ಮುಂಜಾಗ್ರತಾ ಕ್ರಮ ವಹಿಸಬೇಕು. ಅಲ್ಲದೆ ಪಟ್ಟಣ ಪ್ರತಿ ವಾರ್ಡ್ ನಲ್ಲೂ ಕೈಗೊಂಡಿರುವ ಸಿಸಿರಸ್ತೆ ಒಳಚರಂಡಿ ಸಮುದಾಯ ಭವನಗಳ ನಿರ್ಮಾಣ ಬಗ್ಗೆ ಮಾಹಿತಿ ಪಡೆದರು.
ಅಮೃತ ನಗರೋತ್ಥಾನ ಯೋಜನೆಯಡಿ 67.63 ಲಕ್ಷ ರೂ.ಗಳ ವೆಚ್ಚದಲ್ಲಿ ಪಟ್ಟಣ ನೀರು ಸರಬರಾಜು ವ್ಯವಸ್ಥೆಯಡಿ ಸಿದ್ದಯ್ಯನಪುರ ಗ್ರಾಮದ ಬಳಿ ನೀರು ಶುದ್ದೀಕರಣ ಘಟಕ ದುರಸ್ತಿ ಹಾಗೂ ಪುಶ್ಚೇತನ ಪೈಪ್ ಲೈನ್ ಕಾಮಾಗಾರಿ ಪ್ರಗತಿಯಲ್ಲಿದೆ. ಮತ್ತು ಆನ್ಲೈನ್ ಮಾನಿಟರಿಂಗ್ ಮಾಡುವ ಮೂಲಕ ನೀರು ಎಷ್ಟು ಪ್ರಮಾಣ ಪಂಪ್ ಆಗುತ್ತಿದೆ,ಎಂಬುದನ್ನು ತಿಳಿಯುವ ಕೆಲಸ ಆಗಬೇಕುಎಂದು ಮಾಹಿತಿ ತಿಳಿಸಿದರು.
ಪಟ್ಟಣ ಪಂಚಾಯ್ತಿಯಲ್ಲಿ ಸಿಬ್ಬಂದಿಗಳ ಕೊರತೆ ಬಗ್ಗೆ ಈಗಾಗಲೇ ಸಂಬಂದ ಪಟ್ಟ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅದಕ್ಕೆ ಮುಂದಿನ ದಿನಗಳಲ್ಲಿ ಸಿಬ್ಬಂದಿಗಳ ಕೊರತೆ ನೀಗಿಸಲು ಕ್ರಮ ಕೈಗೊಳ್ಳಲಾಗುವುದು. ಇದಲ್ಲದೆ ಸರ್ಕಾರದ ಸುತ್ತೋಲೆ ಮಾನದಂಡಗಳನ್ನು ಅನುಸರಿಸಿ ಇ- ಸ್ವತ್ತುಗಳಿಗೆ ಸಂಬಂದಿಸಿದಂತೆ ಸರಿಯಾದ ರೀತಿಯಲ್ಲಿ ಕಾನೂನತ್ಮಕ ಕ್ರಮ ಕೈಗೊಳ್ಳಲು ಇ- ಸ್ವತ್ತು ಆಂದೋಲ ನಡೆಸಿ ಜನರಿಗೆ ದಾಖಲೆ ಒದಗಿಸುವ ಕೆಲಸ ಆಗಬೇಕು. ಹಾಗೆಯೇ ಆರ್.ಎಸ್. ದೊಡ್ಡಿ ಆಶ್ರಯ ಬಡವಣೆ ಸೈಟ್ಗಳ ಬಗ್ಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಭೆ ಕರೆದ ಸಮಸ್ಯೆ ಇತ್ಯರ್ಥ ಪಡಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಗುರುಪ್ರಸಾದ್,ಪಟ್ಟಣ ಪಂಚಾಯತಿ ಮುಖ್ಯಧಿಕಾರಿ ಆಶೋಕ್, ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಮುಮ್ತಾಜ್ ಬಾನು,ಪಟ್ಟಣ ಪಂಚಾಯಿತಿ ಉಪಾಧ್ಯರಾದ ಆನಂದ್ ಕುಮಾರ್,ಸದಸ್ಯರುಗಳಾದ ಗಿರೀಶ್ ,ಮಹೇಶ್ ನಾಯಕ್, ಸೋಮಣ್ಣ,ಪವಿತ್ರ ಪ್ರಸನ್ನ, ಮಂಜುಳಾ ಸತೀಶ್,ಹರೀಶ್,ಮಹೇಶ್,ಸುದೇಶ್, ಸಂಪತ್ ಕುಮಾರ್,ರೂಪಾ ಗೋವಿಂದ ಹಾಜರಿದ್ದರು.
ವರದಿ:ಚೇತನ್ ಕುಮಾರ್ ಎಲ್, ಚಾಮರಾಜನಗರ ಜಿಲ್ಲೆ