-
ಕಿರುತೆರೆ ಮತ್ತು ಸಿನಿಮಾದಲ್ಲಿ ನಟಿಸಿದ್ದ ರಾಕೇಶ್ ಪೂಜಾರಿ
-
ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಟಿಸಿದ್ದ ನಟ ರಾಕೇಶ್
-
ಕಾಮಿಡಿ ಕಿಲಾಡಿಗಳು ಸೀಸನ್ 3 ವಿನ್ನರ್ ಆಗಿದ್ದ ಹಾಸ್ಯ ನಟ
ಕಾಮಿಡಿ ಕಿಲಾಡಿಯ ಖ್ಯಾತಿಯ ನಟ ರಾಕೇಶ್ ಪೂಜಾರಿ ಇನ್ನಿಲ್ಲ..!
Voiceofjanata.in : DeSK news : ಬೆಂಗಳೂರು, ಮೇ 12: ಎಲ್ಲಾರನ್ನು ಯಾವಾಗಲೂ ನಕ್ಕು ನಗಿಸುತ್ತಾ ಇದ್ದವರು ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ರಾಕೇಶ್ ಪೂಜಾರಿ ಅವರು ಅಕಾಲಿಕವಾಗಿ ನಿಧನರಾಗಿದ್ದಾರೆ. ಹೃದಯಾಘಾತದಿಂದ ಅವರು ನಿಧನರಾದರು ಎಂದು ವರದಿಯಾಗಿದೆ. ತುಂಬಾ ಕಷ್ಟದ ಜೀವನ ನೋಡಿ, ನಂತರ ಹಾಸ್ಯದ ಮೂಲಕ ಎಲ್ಲರ ಮನ ಗೆದ್ದರು. ತುಂಬಾ ಅವಮಾನಗಳನ್ನು ಮೆಟ್ಟಿ ನಿಂತರು. ರಂಗಭೂಮಿ ಮತ್ತು ಕಿರುತೆರೆ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ರಾಕೇಶ್ ಪೂಜಾರಿ ಅವರು ತಮ್ಮ ಅದ್ಭುತ ಹಾಸ್ಯ ಪ್ರತಿಭೆಯಿಂದ ಅನೇಕರ ಮನ ಗೆದ್ದಿದ್ದು, ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನ ಗಳಿಸಿದ್ದರು.
ಆರೋಗ್ಯವಾಗಿದ್ದ ನಟ ರಾಕೇಶ್ ಪೂಜಾರಿ ಅವರು ಬಾಳಿ ಬದುಕ ಬೇಕಿದ್ದ ಅವರು ಕೊನೆಯುಸಿರು ಎಳೆದಿದ್ದಾರೆ. ಹೃದಯಾಘಾತದಿಂದ ಅವರು ನಿಧನ ಹೊಂದಿದ್ದಾರೆ ಎಂದು ಸದ್ಯ ತಿಳಿದು ಬಂದಿದ್ದು, ರಾಕೇಶ್ ಪೂಜಾರಿ ಸಾವಿನ ವಿಚಾರವನ್ನು ನಟ ಹಾಗೂ ಅವರ ಆಪ್ತ ಶಿವರಾಜ್ ಕೆಆರ್ ಪೇಟೆ ಅವರು ಖಚಿತಪಡಿಸಿದ್ದಾರೆ. ಸಾವಿಗೆ ಅವರ ಆಪ್ತ ಬಳಗ ಶಾಕ್ ಆಗಿದೆ. ರಾಕೇಶ್ ಪೂಜಾರಿ ಅವರ ಸಾವಿಗೆ ಅಭಿಮಾನಿಗಳು ಹಾಗೂ ಆಪ್ತರು ಕಂಬನಿ ಮಿಡಿಯುತ್ತಿದ್ದಾರೆ.