ಇಂಡಿ : ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಜಿಗಜೇವಣಗಿ ಗ್ರಾಮದಲ್ಲಿ ಪ್ರಸ್ತಾವಿತ 10 ಎಮ್ ವಿ ಎ 110/11 ಕೆವ್ಹಿ ವಿದ್ಯುತ್ ಉಪಕೇಂದ್ರವನ್ನು ನಿರ್ಮಿಸುವ ಕಾಮಗಾರಿ ಹಿನ್ನಲೆ ಝಳಕಿ-ಇಂಚಗೇರಿ ವಿದ್ಯುತ್ ಮಾರ್ಗದ ಗೋಪುರ ಸಂಖ್ಯೆ 66 ರಿಂದ 70 ಮೇಲೆ ಪ್ರಸ್ತಾವಿತ 110 ಕೆವ್ಹಿ ಇಂಚಗೇರಿ ವಿದ್ಯುತ್ ಮಾರ್ಗ ಎಳೆಯುವ ಕಾಮಗಾರಿ ಕೈಗೊಂಡಿರುವುದರಿಂದ ಅಕ್ಟೋಬರ್ 01 ರಂದು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ 110 ಕೆವ್ಹಿ ಇಂಚಗೇರಿ ವಿದ್ಯುತ್ ವಿತರಣಾ ಕೇಂದ್ರಕ್ಕೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಅದಕ್ಕಾಗಿ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ವಿಜಯಪುರ ಹೆಸ್ಕಾಂ ಕಾರ್ಯ ಮತ್ತು ಪಾಲನಾ ವಿಭಾಗ ಇಂಡಿಯ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.