ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಗೆ ಕಾರ್ಯಕರ್ತರು ಸನ್ನದ್ಧವಾಗಿರಬೇಕು : ಜೆಡಿಎಸ್ ಉಪಾಧ್ಯಕ್ಷ ನಾನಾಗೌಡ
ಇಂಡಿ: ಜೆಡಿಎಸ್ ಪಕ್ಷ ವಿಜಯಪೂರ ಜಿಲ್ಲೆಗೆ ನೀರಾವರಿ ಯೋಜನೆಗಳನ್ನು ನೀಡಿದ ಪಕ್ಷವಾಗಿದೆ. ಮಾಜಿ ಪ್ರಧಾನಿ ದೇವೆಗೌಡರು ವಿಜಯಪೂರ ಜಿಲ್ಲೆಯ ಅಭಿವೃಧ್ಧಿಗಾಗಿ ಸಾಕಷ್ಟು ಅನುದಾನ ನೀಡಿದ್ದರು. ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಲಕ್ಷಾಂತರ ಕಾರ್ಯಕರ್ತರಿದ್ದು ಈಗ ಸದಸ್ಯತ್ವ ಅಭಿಯಾನ ಮಾಡುವ ಮೂಲಕ ಜೆಡಿಎಸ್ ಪಕ್ಷದ ಬಲವರ್ಧನೆಗೆ ಕಾರ್ಯಕರ್ತರು ಸಹಕರಿಸಬೇಕಿದೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ನಾನಾಗೌಡ ಬಿರಾದಾರ ಹೇಳಿದರು.
ಭಾನುವಾರ ಪಟ್ಟಣದಲ್ಲಿ ಜೆಡಿಎಸ್ ಪಕ್ಷದ ಸದಸ್ಯತ್ವ ಅಭಿಯಾನ ಹಾಗೂ ಬೂತ್ ಮಟ್ಟದ ಕಾರ್ಯಕರ್ತರ ಅಭಿಯಾನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮಾಜಿ ಪ್ರಧಾನಿ ದೇವೇಗೌಡರು ಆಲಮಟ್ಟಿ ಅಣೆಕಟ್ಟೆಯ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಜನತಾ ಪಕ್ಷದ ಬೇರು ಇನ್ನು ಗಟ್ಟಿಯಾಗಿವೆ ಎಂಬುವುದಕ್ಕೆ ೨೦೨೩ರ ವಿಧಾನ ಸಭಾ ಚುನಾವಣೆಯಲ್ಲಿ ಬಿ.ಡಿ. ಪಾಟೀಲರಿಗೆ ೬೨ ಸಾವಿರ ಮತಗಳು ಸಾಕ್ಷಿ. ಮುಂಬರುವ ಜಿಲ್ಲಾ ಪಂಚಾಯತ್ ಚುನಾವಣೆಗೆ ಕಾರ್ಯಕರ್ತರು ಸನ್ನದ್ಧವಾಗಿರಬೇಕು. ನಮ್ಮ ನಾಯಕ ಎಚ್.ಡಿ. ಕುಮಾರಸ್ವಾಮಿಯವರ ನಾಯಕತ್ವ ನಮಗೆಲ್ಲ ಇದ್ದೆ ಇರುತ್ತದೆ ಎಂದರು.
ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ ಮಾತನಾಡಿ, ಸದಸ್ಯತ್ವ ಅಭಿಯಾನ ನಮ್ಮ ಕಾರ್ಯಕರ್ತರಿಗೆ ಹೊಸ ಚೈತನ್ಯವನ್ನು ನೀಡುವಂತಾಗಿದೆ. ಬರಲಿರುವ ಜಿಲ್ಲಾ ಪಂಚಾಯತ್ ತಾಲೂಕಾ ಪಂಚಾಯತ ಚುನಾವಣಾಗೆ ಬೂತ್ ಮಟ್ಟದಲ್ಲಿ ಪಕ್ಷವನ್ನು ಗಟ್ಟಿ ಮುಟ್ಟಾದ ಕಾರ್ಯಕರ್ತರ ಪಡೆಯನ್ನು ಕಟ್ಟೋಣ ಎಂದರು.
ವೇದಿಕೆಯ ಮೇಲೆ ಅಯೂಬ್ ನಾಟೀಕಾರ, ಶ್ರೀಶೈಲಗೌಡ ಪಾಟೀಲ, ಶಿವುಕುಮಾರ ದೇವರ, ಬಸನಗೌಡ ಪಾಟೀಲ್, ರಮೇಶ ರಾಠೋಡ, ಮಹಿಬೂಬ ಬೇವನೂರ, ನಾನಾಗೌಡ ಪಾಟೀಲ, ಬಸನಗೌಡ ಬಿರಾದಾರ, ನಿಯಾಝ್ ಅಗರಖೇಡ, ಮೌಲಾಸಾಬ ಅತನೂರ, ಸುನಂದಾ ವಾಲಿಕಾರ, ಯಶವಂತ ಕಾಡೆಗೋಳ, ಸಿದ್ದಪ್ಪ ಗುನ್ನಾಪೂರ, ಶಂಕರಗೌಡ ಬಿರಾದಾರ, ದುಂಡು ಬಿರಾದಾರ, ಸಿದ್ದಾರಾಮ ಹಂಜಗಿ, ಮಾಳು ಮ್ಯಾಕೇರಿ, ಶಿವಾಜಿ ಭೀರಪ್ಪಗೋಳ, ವಿಠ್ಠಲ ಹಳ್ಳಿ, ಪದ್ಮಣ್ಣ ರೂಗಿ ಉಪಸ್ಥಿತರಿದ್ದರು.
ಇಂಡಿ: ಪಟ್ಟಣದಲ್ಲಿ ಜೆಡಿಎಸ್ ಪಕ್ಷದ ಸದಸ್ಯತ್ವ ಅಭಿಯಾನ ಹಾಗೂ ಬೂತ್ ಮಟ್ಟದ ಕಾರ್ಯಕರ್ತರ ಅಭಿಯಾನದ ಉದ್ಘಾಟನೆ ನೆರವೇರಿಸಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ನಾನಾಗೌಡ ಬಿರಾದಾರ ಮಾತನಾಡಿದರು.