ಯುವತಿಗೆ ನಂಬಿಸಿ ಪೊಲೀಸ್ನೋರ್ವ ಕೈ ಕೊಟ್ಟ..! ಯುವತಿ ಮುಂದೆ ಮಾಡಿದ್ದೇನು..?
ವಿಜಯಪುರ: ಯುವತಿಗೆ ನಂಬಿಸಿ ಪೊಲೀಸ್ನೋರ್ವ ಕೈ ಕೊಟ್ಟಿರುವ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ. ವಿಜಯಪುರದ ಗಾಂಧಿಚೌಕ್ ಪೊಲೀಸ್ ಠಾಣೆಯ ವಿನಾಯಕ ಟಕ್ಕಳಕಿ ಎಂಬ ಪೇದೆಯಿಂದ ಯುವತಿಗೆ ವಂಚನೆ ಮಾಡಿದ್ದಾನೆ. ಯುವತಿಯೊಂದಿಗೆ ಲೈಂಗಿಕ ಸಂಪರ್ಕ ಸಾಧಿಸಿ ಮದುವೆಗೆ ನಿರಾಕಾರಣೆ ಮಾಡಿದ್ದಾನೆ ಎಂದು FIR ನಲ್ಲಿ ಉಲ್ಲೇಖ ಮಾಡಲಾಗಿದೆ. ಆರೋಪಿ ವಿನಾಯಕ ಟಕ್ಕಳಕಿ ಕಳೆದ 20 ದಿನಗಳಿಂದ ಠಾಣೆಗೆ ಬಾರದೆ ನಾಪತ್ತೆಯಾಗಿದ್ದಾನೆ. ಈ ಕುರಿತು ವಿಜಯಪುರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.