ಧ್ವಜಾರೋಹಣ ವೇಳೆ ವ್ಯಕ್ತಿಯೋರ್ವ ಗಾಳಿಯಲ್ಲಿ ಗುಂಡು..! ಗ್ರಾಪಂ. ಅಧ್ಯಕ್ಷಗೆ ಗಾಯ.! ಎಲ್ಲಿ..?
ವಿಜಯಪುರ : ಧ್ವಜಾರೋಹಣ ವೇಳೆ ವ್ಯಕ್ತಿಯೋರ್ವ ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇರೂಗಿ ಗ್ರಾಮದಲ್ಲಿ ನಡೆದಿದೆ. ಮಲ್ಲು ಗಿನ್ನಿ ಗುಂಡು ಹಾರಿಸಿದ ವ್ಯಕ್ತಿ. ಇನ್ನು ಧ್ವಜಾರೋಹಣ ವೇಳೆ ಗ್ರಾಮ ಪಂಚಾಯತಿ ಎದುರು ಗಾಳಿಯಲ್ಲಿ ಮಲ್ಲು ಗುಂಡು ಹಾರಿಸಿದ್ದಾನೆ. ಈ ವೇಳೆ ಒಂದು ಗಾಳಿಯಲ್ಲಿ ಗುಂಡು ಅಧ್ಯಕ್ಷೆ ಸೋಮವ್ವನ ತೊಡೆಗೆ ಬಡಿದು ಗಾಯಗೊಂಡಿದ್ದಾರೆ. ಇನ್ನು ಮಿಸ್ ಪೈರ್ ನಿಂದಾಗಿ ಗ್ರಾಮ ಪಂಚಾಯತಿ ಅಧ್ಯಕ್ಷೆಗೆ ತಗುಲಿದೆ. ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.