ಇಂಡಿ : ತಾಲ್ಲೂಕಿನ 38 ಗ್ರಾ.ಪಂ ಗೆ ಒಟ್ಟು 671 ಸದಸ್ಯರಿದ್ದು, ಕೇವಲ 39 ಸದಸ್ಯರು ಮಾತ್ರ ಅಧ್ಯಕ್ಷರಾಗಲು ಸಾಧ್ಯ. ಹಾಗಂತ ಉಳಿದ ಸದಸ್ಯರು ನೀರಾಸೆಗೊಳ್ಳುವ ಅವಶ್ಯಕತೆಯೂ ಇಲ್ಲ. ಒಂದು ಮಾತು ಅರ್ಥ ಮಾಡಿಕೊಳ್ಳಬೇಕು. ಒಳ್ಳೆಯ ಕೆಲಸ ಮಾಡಲು ಅಧಿಕಾರ, ಹುದ್ದೆ ಬೇಕಾಗಿಲ್ಲ. ಒಳ್ಳೆಯ ಮನೋಭಾವನೆ ಜನರ ಸೇವೆ ಮಾಡುವ ಗ್ರಾಮವನ್ನು ಅಭಿವೃದ್ಧಿ ಮನಸ್ಥಿತಿ ಅವಶ್ಯಕ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಹೇಳಿದರು.
ಪಟ್ಟಣದ ಶಾಂತೇಶ್ವರ ಮಂಗಲ ಕಾರ್ಯಾಲಯದಲ್ಲಿ ಆಯೋಜನೆ ಗೊಳಿಸಿರುವ ಗ್ರಾ.ಪಂ ಅಧ್ಯಕ್ಷ & ಉಪಾಧ್ಯಕ್ಷ ಹುದ್ದೆಯ ಮೀಸಲಾತಿ ಪ್ರಕಟಿಸುವ ಸಂದರ್ಭದಲ್ಲಿ ಹೇಳಿದರು.ಈ ಸಂದರ್ಭದಲ್ಲಿ ಉಪವಿಭಾಗ ಅಧಿಕಾರಿ ರಾಮಚಂದ್ರ ಗಡಾದೆ, ತಹಶಿಲ್ದಾರ ನಾಗಯ್ಯ, ತಾ.ಪಂ ಅಧಿಕಾರಿ ಸುನೀಲ ಮದ್ದಿನ ಹಾಗೂ ಜಿಲ್ಲಾ ಅಧಿಕಾರಿ ಕಚೇರಿ ಸಿಬ್ಬಂದಿ, ಗ್ರಾ.ಪಂ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.