ವಿಜಯಪುರ : ಮಹಿಳೆಯನ್ನು ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ ಎಂದು ಎಸ್ಪಿ ಎಚ್‌ಡಿ ಆನಂದಕುಮಾರ ಗುರುವಾರ ಮಾಹಿತಿ ನೀಡಿದರು. ವಿಜಯಪುರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ತಲೆಯ ಭಾಗದ ಬಳಿ ಹಲ್ಲೆಯ ಗಾಯಗಳಿವೆ. ಅಲ್ಲದೇ, ಬೇರೆಯ ಕಡೆಗೆ ಹತ್ಯೆಗೈದು ನಗರದ ವಜ್ರಹನುಮಾನ್ ಗೇಟ್ ಬಳಿಯ ಮುಳ್ಳಿನ ಕಂಠಿಯಲ್ಲಿ ಎಸೆದು ಪರಾರಿಯಾಗಿದ್ದಾರೆ. ಮಹಿಳೆಯ ಗುರುತು ಪತ್ತೆಯಾಗಿಲ್ಲ ಎಂದರು.



















