ವಿಜಯಪುರ : ಪಕ್ಷೇತರ ಮಹಿಳಾ ಅಭ್ಯರ್ಥಿ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೋಮವಾರ ಕಿಡಿಕಾರಿದರು. ವಿಜಯಪುರ ನಗರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಬಳಿಕ ಮಾತನಾಡಿದ ಅವರು, ಹಿಂದು ಸಮಾಜ ಒಂದಾದ್ರೇ ಮಾತ್ರ ವಿಜಯಪುರದಲ್ಲಿ ಬಾಳಲು ಆಗುತ್ತದೆ ಎಂದರು. ಇನ್ನು ವಿಜಯಪುರದಲ್ಲಿ ವ್ಯವಸ್ಥಿತವಾಗಿ ಹಿಂದು ಅಭ್ಯರ್ಥಿಗಳ ಬೀಳಬೇಕು ಎಂದು ಪ್ಲಾನ್ ಮಾಡಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ವಿಮಲಾ ರಫೀಕ್ಅಹ್ಮದ ಖಾನೆ ವಿರುದ್ಧ ಗುಡುಗಿದರು. ಇನ್ನೂ ವಿಮಲಾ ರಫೀಕ್ಅಹ್ಮದ ಖಾನೆ ಎಂದು ಎಲ್ಲಾದ್ರೂ ಹೆಸರು ಕೇಳಿದ್ರಾ.. ಮೆಹಬೂಬ್‌ಸಾಬ್ ಗಣಪತಿ ಸಿಂಗ್ ಹೆಸರು ಕೇಳಿದ್ರಾ ಎಂದು ರಫೀಕ್ಅಹ್ಮದ ಖಾನೆ ವಿರುದ್ಧ ವಾಗ್ದಾಳಿ ಮಾಡಿದರು.



















