ಸಿಂಧನೂರು : ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಸರ್ಕಾರದಿಂದ ಆಚರಿಸುತ್ತಿರುವುದು ಸ್ವಾಗತರ್ಹ. ಈ ಜಯಂತಿಯ ಮೂಲಕ ನಾಡಪ್ರಭು ಕೆಂಪೇಗೌಡರ ಜೀವನ ಚರಿತ್ರೆ, ಅವರ ಸಾಧನೆ ಕುರಿತು ಯುವ ಸಮೂಹಕ್ಕೆ ಸಂದೇಶ ತಿಳಿಸಲು ಸಾಧ್ಯವಾಗುತ್ತದೆ. ಎಂದು ಸಂಸದ ಪ್ರಜ್ವಲ್ ರೇವಣ್ಣ ಹೇಳಿದರು.
ಜೆಡಿಎಸ್ ಪಕ್ಷದ ವತಿಯಿಂದ ರಾಜ್ಯದಾದ್ಯಂತ ಜೆಡಿಎಸ್ ಪಕ್ಷದ ಕಾರ್ಯ ಚಟುವಟಿಕೆ ಜನ ಸಮೂಹಕ್ಕೆ, ಮತದಾರರಿಗೆ, ತ್ವರಿತ ಗತಿಯಲ್ಲಿ ಸಾಮಾಜಿಕ ಜಾಲತಾಣದ ಮುಖಾಂತರ ತಿಳಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲು ರಾಯಚೂರು ಜಿಲ್ಲಾ ಪ್ರವಾಸ ಕೈಗೊಂಡ ಅವರು ಸಿಂಧನೂರಿಗೆ ಭೇಟಿ ನೀಡಿ, ತಾಲೂಕು ಆಡಳಿತ ವತಿಯಿಂದ ತಹಶೀಲ್ ಕಛೇರಿಯಲ್ಲಿ ಹಮ್ಮಿಕೊಂಡ ಕೆಂಪೇಗೌಡರ ಜಯಂತಿಯಲ್ಲಿ ಭಾಗವಹಿಸಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ಅರ್ಚನೆ ಮಾಡಿ, ನಂತರ ಮಾತನಾಡಿದರು.
ಈ ಸಂದರ್ಭದಲ್ಲಿ ಶಾಸಕ ವೆಂಕಟರಾವ್ ನಾಡಗೌಡ ತಹಶೀಲ್ದಾರ ಮಂಜುನಾಥ ಭೋಗವತಿ, ನಗರಸಭೆಯ ಪೌರಾಯುಕ್ತ ಮಂಜುನಾಥ ಗುಂಡೂರು ಸೇರಿದಂತೆ ಅನೇಕರು ಇದ್ದರು.