ಬೆಂಗಳೂರು :ರಾಜ್ಯದ ಜನತೆ ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದರು. ಆದರೆ ಇದೀಗ ವಿದ್ಯುಚ್ಛಕ್ತಿ ಆಯೋಗ ಪ್ರತಿ ಯೂನಿಟ್ಗೆ 35 ಪೈಸೆ ಹೆಚ್ಚಳ ಮಾಡಿ ಮತ್ತೊಂದು ಶಾಕ್ ನೀಡಿದೆ.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಬೆಲೆ ಏರಿಕೆಯ ಬರೆ ಎಳೆದಿದೆ. ಏಪ್ರಿಲ್ 1ರಿಂದ ಅನ್ವಯವಾಗುವಂತೆ ಬೆಸ್ಕಾ, ಮೆಸ್ಕಾಂ, ಚೆಸ್ಕಾಂ, ಜೆಸ್ಕಾಂ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿ ಪ್ರತಿ ಯೂನಿಟ್ಗೆ 35 ಪೈಸೆ ಹೆಚ್ಚಳಗೊಳಿಸಿ ಆದೇಶ ಹೊರಡಿಸಲಾಗಿದೆ. ವಿದ್ಯುತ್ ದರದ ಜೊತೆಯಲ್ಲಿ ವಿದ್ಯುತ್ ನಿಗದಿತ ದರದಲ್ಲಿಯೂ ಏರಿಕೆ ಮಾಡಲಾಗಿದ್ದು ಮುಂಚೆ 10 ರೂಪಾಯಿಯಿದ್ದ ಫಿಕ್ಸೆಡ್ ಚಾರ್ಜ್ನ್ನು 30 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಪ್ರತಿ ಯೂನಿಟ್ಗೆ 1 ರೂಪಾಯಿ 85 ಪೈಸೆ ಹೆಚ್ಚ ಮಾಡುವಂತೆ ಎಸ್ಕಾಂಗಳು ಮನವಿ ಸಲ್ಲಿಸಿದ್ದವು.
ಸಾಧಕ ಬಾಧಕಗಳನ್ನು ಪರಿಶೀಲಿಸಿದ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಪ್ರತಿ ಯೂನಿಟ್ಗೆ 35 ಪೈಸೆ ಹೆಚ್ಚಳ ಮಾಡಿ ಆದೇಶ
ಹೊಡಿಸಿದೆ.
ಇದಲ್ಲದೆ ಹೋಟೆಲ್ಗಳಲ್ಲಿಯ ಉಪಹಾರ ಹಾಗೂ ಊಟದ ಬೆಲೆಯಲ್ಲಿ 5 ರೂ ವರೆಗೆ ಹೆಚ್ಚಳವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.