ಸುರೇಖಾ ಮಹಿಳಾ ರಾಜ್ಯಾಧ್ಯಕ್ಷೆಯಾಗಿ ಆಯ್ಕೆ
ಅಫಜಲಪುರ: ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘ(ರಿ) ರಾಜ್ಯ ಘಟಕದ ಮಹಿಳಾ ಸಾಹಿತ್ಯಕ ವೇದಿಕೆಗೆ ರಾಜ್ಯಾಧ್ಯಕ್ಷರಾಗಿ ಸುರೇಖಾ ಎಂ.ಜೇವರ್ಗಿ,ರಾಜ್ಯ ಉಪಾಧ್ಯಕ್ಷರಾಗಿ ಕಲ್ಯಾಣರಾವ್ ಬಿರಾದಾರ,ಕಲಬುರಗಿ ದಕ್ಷಿಣ ತಾಲೂಕಾಧ್ಯಕ್ಷ ಲಿಂಗರಾಜ ಪಾಟೀಲ್ ಇವರನ್ನು ನೇಮಕ ಮಾಡಿ ಸಂಸ್ಥಾಪಕ ಅಧ್ಯಕ್ಷ ಗುರುಪಾದ ಕೋಗನೂರ ಆದೇಶ ಹೊರಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಬೇಕೆಂದು ಈ ಮೂಲಕ ಸೂಚನೆ ನೀಡಿದ್ದಾರೆ.



















