ST ಹಕ್ಕಿಗಾಗಿ ಮತ್ತೆ ಹೋರಾಟಕ್ಕೆ ಸಜ್ಜುಗೊಳ್ಳುತ್ತಿರಿವ ತಳವಾರರು
*ಅಫಜಲಪೂರದಲ್ಲಿ ಬೃಹತ್ ಹೋರಾಟ ಘೋಷಣೆ ಮೇ.11*
ಅಫಜಲಪೂರ:ಸಂವಿಧಾನ ನೀಡಿರುವ ಹಕ್ಕುಗಳನ್ನು ಉಲಂಘಗಿಸಿ, ಸರ್ಕಾರದ ಸ್ಪಷ್ಟ ಆದೇಶಗಳನ್ನು ಕಡೆಗಣಿಸುತ್ತಿರುವ ಅಧಿಕಾರಿಗಳ ವಿರುದ್ಧ ತಳವಾರ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿ ಅಖೀಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘ ಹಾಗೂ ತಳವಾರ ಮಹಾಸಭಾ ಮತ್ತು ಪರಿಶಿಷ್ಟ ಸಮಾಜ ಸೇವಾ ಸಾಂಸ್ಕೃತಿಕ ಸಂಘ ಜಂಟಿಯಾಗಿ ಪಟ್ಟಣದಲ್ಲಿ ಶಾಸಕ ಎಂವೈ ಪಾಟೀಲ ಹಾಗೂ ತಹಸೀಲ್ದಾರ ಸಂಜೀವಕುಮಾರ ದಾಸರವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ತಳವಾರ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿ ಅಖೀಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘ ಅಧ್ಯಕ್ಷ ಸಂತೋಷ ತಳವಾರ ಮಾತನಾಡಿ “Naikada/Nayak (including Parivar and Talawar)” ಸಮುದಾಯವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಿ 2020ರ ಫೆಬ್ರವರಿ 20ರಂದು ಕೇಂದ್ರ ಸರ್ಕಾರ ರಾಜ್ಯಪತ್ರ ಪ್ರಕಟಿಸಿದೆ. ಅದನ್ನೇ ಅನುಸರಿಸಿ ಕರ್ನಾಟಕ ಸರ್ಕಾರವೂ 2020ರ ಫೆಬ್ರವರಿ 28ರಂದು ಸುತ್ತೋಲೆ ಹೊರಡಿಸಿ, 2022ರ ಅಕ್ಟೋಬರ್ 29ರಂದು ಹಿಂದುಳಿದ ವರ್ಗಗಳ ಪಟ್ಟಿಯಿಂದ ತಳವಾರ ಜಾತಿಯನ್ನು ತೆಗೆದು ST ಪಟ್ಟಿಗೆ ಸೇರಿಸಿರುವುದಾಗಿ ಅಧಿಕೃತ ಆದೇಶ ನೀಡಿದೆ ಎಂದರು.
ಆದೇಶ ಆದ ನಂತರ ಎರಡು ವರ್ಷದವರಿಗೆ ಅಫಜಲಪುರ ತಾಲೂಕಿನಲ್ಲಿ ತಳವಾರ ಜಾತಿ ಜನರಿಗೆ ನಿರಂತರವಾಗಿ ಸುಮಾರು ಸಾವಿವಾರಾರು ಜನರಿಗೆ ಪ್ರಮಾಣ ಪತ್ರ ನೀಡಿದ್ದಾರೆ ಆದರೆ ಕಳೆದ ಒಂದು ವರ್ಷದಿಂದ ಎಲ್ಲಾ ದಾಖಾಲೆಗಳು ಸರಿಯಾಗಿ ಇದ್ದರೂ ಕೂಡ ಇಲ್ಲ ಸಲ್ಲದ ನೆಪಯೊಡ್ಡಿ ತಾಲೂಕ ಗ್ರೇಡ್ 2 ತಹಸೀಲ್ದಾರವರು ಪ್ರಮಾಣ ಪತ್ರ ಕೊಡುವುದುದನ್ನು ಸ್ಥಗಿತಗೊಳಿಸಿದ್ದಾರೆ ಅಲ್ಲದೇ
ಸ್ಪಷ್ಟ ಕಾನೂನುಬದ್ಧ ದಾಖಲೆಗಳಿದ್ದರೂ, ಅಫಜಲಪೂರ ತಾಲೂಕಿನಲ್ಲಿ ಅಧಿಕಾರಿಗಳು ಇನ್ನೂ ತಳವಾರ ಸಮುದಾಯಕ್ಕೆ ST ಪ್ರಮಾಣ ಪತ್ರ ನೀಡದೇ ವಿಳಂಬ ಮಾಡುತ್ತಿರುವುದು ಸಂವಿಧಾನದ ಆತ್ಮವನ್ನೇ ಉಲ್ಲಂಘಿಸುವ ಗಂಭೀರ ಅಪರಾಧವಾಗಿದೆ ಎಂದು ಆಕ್ರೋಶ ಹೊರ ಹಾಕಿದ ಅವರು ಶೀಘ್ರದಲ್ಲೇ ನೈಜ ತಳವಾರ ಜಾತಿಯವರಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡಬೇಕು ನೀಡದೆ ಇದ್ದಲ್ಲಿ ಪರಿಶಿಷ್ಟ ಪಂಗಡ (ST) ಜಾತಿ ಪ್ರಮಾಣ ಪತ್ರಕ್ಕಾಗಿ ಮೇ 11ರಂದು ಅಫಜಲಪೂರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಈಗಾಗಲೆ ಪೂರ್ವ ತಯ್ಯಾರಿ ನಡಿದಿದೆ ಅಲ್ಲದೇ
ಹೋರಾಟದ ವೇಳೆ ಯಾವುದೇ ಅಹಿತಕರ ಘಟನೆಗಳು ಸಂಭವಿಸಿದರೆ ತಾಲೂಕು ಆಡಳಿತ, ಪೊಲೀಸ್ ಇಲಾಖೆ, ಸ್ಥಳೀಯ ಶಾಸಕರು ಹಾಗೂ ಜಿಲ್ಲಾಡಳಿತವೇ ನೇರ ಹೊಣೆಗಾರರಾಗುತ್ತಾರೆ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸುವಂತೆ ಮನವಿ ಸಲ್ಲಿಸಲಾಗಿದೆ. ಈ ಹೋರಾಟಕ್ಕೆ ಅಖಿಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘ, ಕರ್ನಾಟಕ ರಾಜ್ಯ ತಳವಾರ ಮಹಾಸಭಾ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂದರು.
ಶಾಸಕ ಎಂವೈ ಪಾಟೀಲ ಅವರು ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಅವರು ತಳವಾರ ಜನಾಂಗದವರ ಪರ ನ್ಯಾಯಕ್ಕಾಗಿ ಅಧಿವೇಶನದಲ್ಲಿ ಧ್ವನಿ ಎತ್ತಿ ನೈಜ ತಳವಾರರಿಗೆ ಎಸ್ಟಿ ಪ್ರಮಾಣ ಪತ್ರ ಕೊಡಿ ಎಂದು ಒತ್ತಾಯಿಸಿದ್ದೇನೆ ಅಲ್ಲದೇ ತಾಲೂಕಿನ ತಹಸೀಲ್ದಾರಿಗೆ ನೈಜ ತಳವಾರರಿಗೆ ಪ್ರಮಾಣ ಪತ್ರ ನೀಡಿ ಎಂದು ಸೂಚಿಸುವೆ ಎಂದು ಬರವಸೆ ನೀಡಿದರು.
ಅನಿಸಿಕೆ 1
ಸರಕಾರದ ಗೆಜೆಟ್ ಪ್ರಕಾರವೇ ಕಾನೂನಾತ್ಮಕವಾಗಿ “ಶಾಲಾ ದಾಖಲಾತಿಗಳು, ಗ್ರಾಮ ಲೆಕ್ಕಾಧಿಕಾರಿಗಳ ಪಂಚನಾಮೆ ವರದಿಗಳು ತಳವಾರ ಎಂದು ಸ್ಪಷ್ಟಪಡಿಸುತ್ತಿದ್ದರೂ ಪ್ರಮಾಣ ಪತ್ರ ನೀಡದೇ ಇರುವುದೇ ಕರ್ತವ್ಯ ಲೋಪ ಹಾಗೂ ಅಧಿಕಾರ ದುರುಪಯೋಗ ಮತ್ತು ಕಾನೂನು ವಿರೋಧಿ ಕ್ರಮವಾಗಿದೆ..
ಅಂಬಣ್ಣ ನಾಯ್ಕೋಡಿ( ಅಧ್ಯಕ್ಷರು ಪರಿಶಿಷ್ಟ ಪಂಗಡ ಸಮಾಜ ಸೇವಾ ಸಾಂಸ್ಕೃತಿಕ ಸಂಘ ಅಫಜಲಪುರ)
ಅನಿಸಿಕೆ 2
ಈ ಅನ್ಯಾಯದ ವಿರುದ್ಧ ಮೇ 11ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಬಸವೇಶ್ವರ ವೃತ್ತದಿಂದ ತಹಸೀಲ್ದಾರರ ಕಚೇರಿವರೆಗೆ ಭಾರೀ ಮೆರವಣಿಗೆ ನಡೆಸಿ ಕಚೇರಿಯನ್ನು ಬಂದ್ ಮಾಡುತ್ತೇವೆ ಹೋರಾಟಗಾರರನ್ನು ಬಂಧಿಸಿದರೆ, ಪೊಲೀಸ್ ಠಾಣೆಯಲ್ಲಿಯೇ ಉಪವಾಸ ಸತ್ಯಾಗ್ರಹ ಆರಂಭಿಸಿ ಮನೆಗೆ ತೆರಳದೆ ನಿರಂತರ ಹೋರಾಟ ಮುಂದುವರಿಸಲಾಗುವುದು ಎಚ್ಚರಿಕೆ.
ಸಂತೋಷ ತಳವಾರ( ಅಧ್ಯಕ್ಷರು ಅಖೀಲ ಕರ್ನಾಟಕ ಮಹರ್ಷಿ ವಾಲ್ಮೀಕಿ ತಳವಾರ ಸಮಾಜ ಸಂಘ ಅಫಜಲಪುರ)
ಅನಿಸಿಕೆ 3
ತಳವಾರ ಸಮುದಾಯಕ್ಕೆ ತನ್ನದೇಯಾದ ಇತಿಹಾಸವಿದೆ ಅತ್ಯಂತ ಶೋಷಣೆಗೊಳಾದ ಈ ಸಮುದಾಯವಾಗಿದೆ “ನಮ್ಮ ಪ್ರಾಣ ಹೋದರೂ ಸರಿ ನಮ್ಮ ಸಂವಿಧಾನಬದ್ದ ಹಕ್ಕಿಗಾಗಿ ನ್ಯಾಯಕ್ಕಾಗಿ ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲುವುದಿಲ್ಲ”
ಗುರು ಹಾವನೂರ ( ಅಧ್ಯಕ್ಷರು ತಳವಾರ ಮಹಾಸಭಾ ಅಫಜಲಪುರ)
ಈ ಸಂದರ್ಭದಲ್ಲಿ ತಳವಾರ ಸಮಾಜದ ಮುಖಂಡರಾದ ದತ್ತು ಶಿವಣಗಿ , ಶ್ರೀಕಾಂತ ದಿವಾಣಜಿ, ಶರಣು ದಿವಾಣಜಿ, ರವಿ ಜಮಾದಾರ, ಬೋಗೇಶ ಜಮಾದಾರ, ದಿಗಂಬರ ಕಾಡಹುಲಿ, ಚೆನ್ನು ಬಡದಾಳ,ಬೋಗೇಶ ತಳವಾರ ಸೇರಿದಂತೆ ಅನೇಕರಿದ್ದರು.
.



















