“ನಮ್ಮ ಪಾಲು ನಮಗೆ ಕೊಡಿ!” ಸರ್ಕಾರಕ್ಕೆ ಮನವಿ
ಕಾಂಗ್ರೆಸ್ ಸರ್ಕಾರ ಮಾದಿಗ ಸಮುದಾಯಕ್ಕೆ ದ್ರೋಹ ಮಾಡಬೇಡಿ!
ಲಿಂಗಸಗೂರು: 56,432 ಹುದ್ದೆಗಳ ನೇಮಕಾತಿಯಲ್ಲಿ ಮಾದಿಗ ಸಮುದಾಯಕ್ಕೆ 6% ಒಳಮೀಸಲಾತಿ ತಕ್ಷಣ ಅನ್ವಯಿಸಿ ಎಂದು ಮಾದಿಗ ಸಮುದಾಯದ ಹೋರಾಟ ಸಮಿತಿ ಲಿಂಗಸುಗೂರು ಘಟಕದಿಂದ ಪ್ರತಿಭಟನೆ ನೆಡೆಸಲಾಯಿತು. “ನಾವು ಮತ ಕೊಟ್ಟಿದ್ದೇವೆ, ಹಕ್ಕು ಬಿಡುವುದಿಲ್ಲ!” ಎಂದು ಹೋರಾಟಗಾರರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.35 ವರ್ಷಗಳ ರಕ್ತಸಿಕ್ತ ಹೋರಾಟಕ್ಕೆ ನ್ಯಾಯ ಕೊಡಿ. ಕಾಂಗ್ರೆಸ್ ಸರ್ಕಾರ ಮಾದಿಗ ಸಮುದಾಯಕ್ಕೆ ದ್ರೋಹ ಮಾಡಬೇಡಿ!
“ಪ್ರವರ್ಗ ‘ಎ’ ಗೆ 6% ರೋಸ್ಟರ್ ಬಿಂದು ಜಾರಿಯಾಗಲಿ”
ಸದಾಶಿವ ಆಯೋಗದ ವರದಿ ಜಾರಿಗೆ ಈಗಲೇ ಅಧಿಸೂಚನೆ ಹೊರಡಿಸಿ.ನ್ಯಾಯಯುತವಾಗಿ ನಮ್ಮ ಪಾಲು ಕೇಳುತ್ತಿದ್ದೇವೆ.
ಬೇಕು ಬೇಕು ಒಳಮೀಸಲಾತಿ ಬೇಕು.
ಯಾರಪ್ಪನ ಮನೆ ಆಸ್ತಿ? ಇದು ನಮ್ಮ ಪಾಲಿನ ಮೀಸಲಾತಿ. 35 ವರ್ಷಗಳ ಹೋರಾಟ ನ ಧಿಕ್ಕಾರ ಧಿಕ್ಕಾರ ಮಾದಿಗರನ್ನು ವಂಚಿಸುವ ಸರ್ಕಾರಕ್ಕೆ ಧಿಕ್ಕಾರ ಎಂದು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದರು.
ಲಿಂಗಸಗೂರು ಸಹಾಯಕ ಆಯುಕ್ತರ ಮೂಲಕ ಸಿ. ಎಂ. ಸಿದ್ರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.


















