ಮುದ್ದೇಬಿಹಾಳ: 1979_80 ರಲ್ಲಿ ನಿರ್ಮಿತ ಜನತಾಪ್ಲಾಟ್ ಇಂದು ಇಂದಿರಾ ನಗರವೆಂದು ಗುರುತಿಸಿಕೂಂಡಿದೆ ಮತ್ತು 1993 ರಲ್ಲಿ ಇದನ್ನು ಕೊಳಚೆ ಪ್ರದೇಶವೆಂದು ಘೋಷಿಸಲಾಯಿತು ಆದರೆ ಇತ್ತಿಚಿಗೆ ಒಂದು ವರ್ಷದಿಂದ ಸ್ಥಳೀಯ ನಿವಾಸಿಗಳಿಗೆ ಮನೆ ಉತಾರೆಯನ್ನು ಪುರಸಭೆಯವರು ನೀಡುತ್ತಿಲ್ಲವೆಂದು ಆರೋಪಿಸಿ ಬುಧುವಾರ ಇಂದಿರಾ ನಗರ ನಿವಾಸಿಗಳು ಬಸವರಾಜ ಕೋಳೂರ ಅವರ ನೇತೃತ್ವದಲ್ಲಿ ಇಂದಿರಾ ನಗರದಿಂದ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ತಹಶಿಲ್ದಾರ ಕಚೇರಿಯ ವರಗೆ ಮಾಡಿ ತಾಲೂಕ ಆಡಳಿತ ಸೌಧ ಆವರಣದಲ್ಲಿ ಧರಣಿ ಸತ್ಯಾಗ್ರಹಕ್ಕೆ ಕುಳಿತರು.
ಈ ವೇಳೆ ಮಾತನಾಡಿದ ಇಂದಿರಾ ನಗರ ನಿವಾಸಿಗಳಾದ ನಾಗೇಶ ಜಾಧವ, ಬಸವರಾಜ ಕೋಳೂರ, ರಿಯಾಜಾಹ್ಮದ ಉಣ್ಣಿಬಾವಿ, ಮಹಿಬೂಬ ಮುಲ್ಲಾ, ಮಾತನಾಡಿ ನಾಲ್ಕು ದಶಕಗಳಿಂದಲೂ ಇಂದಿರಾ ನಗರದಲ್ಲಿ ವಾಸಿಸುತ್ತಿರುವ ಮೂಲ ನಿವಾಸಿಗಳಾದ ನಮಗೆ ಪುರಸಭೆಯವರು ಉತಾರೆ ನೀಡುತ್ತಿಲ್ಲ ಉತಾರೆ ಯಾಕೆ ನೀಡುತ್ತಿಲ್ಲವೆಂದು ಕೇಳಿದರೆ ಸರಿಯಾದ ಕಾರಣ ನೀಡದೆ ಅಲೆದಾಡಿಸುತ್ತಿದ್ದಾರೆ ಈ ಕುರಿತು ಅನೇಕ ಬಾರಿ ಮನವಿ ಅರ್ಜಿ ಸಲ್ಲಿಸಿದರು ಯಾವುದೇ ಪ್ರಯೋಜವಾಗಿಲ್ಲ ಮತ್ತು ಶಾಸಕರಾದ ಸಿ.ಎಸ್ ನಾಡಗೌಡರ ಗಮನಕ್ಕೆ ತಂದು ಮನವಿ ಮಾಡಿದರು ಪ್ರಯೋಜನವಾಗಿಲ್ಲ ಇದರಿಂದ ಮನೆಯ ಮೇಲೆ ಸಾಲ ಪಡೆಯಲು ಆಗುತ್ತಿಲ್ಲ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಾಲಪಡೆಯಲು ಉತಾರೆ ಬೇಕು , ಇತ್ತೀಚಿಗೆ ಇಂದಿರಾ ನಗರ ನಿವಾಸಿ ಓರ್ವ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದ ಆತನ ವೈದ್ಯಕೀಯ ಚಿಕಿತ್ಸೆ ಗೆ ಹಣದ ಅಗತ್ಯವಿತ್ತು ಮನೆ ಮಾರಿ ಆಸ್ಪತ್ರೆ ತೋರಿಸಬೇಕೆಂದರೆ ಉತಾರೆ ಇಲ್ಲ ಅಗತ್ಯ ಸಮಯದಲ್ಲಿ ಮನೆ ಮಾರಾಟವಾಗಲಿಲ್ಲ ಹಣದ ಸಮಸ್ಯೆಯಿಂದ ಸಾವನ್ನು ಅಪ್ಪಿದ ಇಂತಹ ಅನೇಕ ಸಮಸ್ಯೆಗಳನ್ನು ನಾವು ಉತಾರೆ ನೀಡದ ಕಾರಣ ಅನುಭವಿಸುತ್ತಿದ್ದೇವೆ ನಮಗೆ ಉತಾರೆ ನೀಡಬೇಕೆಂದು ತಹಶಿಲ್ದಾರರ ಕೀರ್ತಿ ಚಾಲಕ ಹಾಗೂ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಅವರ ಮುಂದೆ ತಮ್ಮ ಅಳಲನ್ನು ತೂಡಿಕೂಂಡರು ಮತ್ತು ಇಂದಿರಾ ನಗರದ ವಾರ್ಡ್ ನಂ13 ರಲ್ಲಿ ಮತದಾರರ ಪಟ್ಟಿಯಲ್ಲಿ ಬೇರೆ ವಾರ್ಡಿನ ಹಾಗೂ ಬೇರೆ ಊರಿನವರ ಹೆಸರುಗಳು ಸೇರಿವೆ ಇದರಿಂದ ಚುನಾವಣಾ ಅಕ್ರಮ ನಡೆಯುತ್ತಿದೆ ಎಂದು ಅಧಿಕಾರಿಗಳ ಗಮನಸಳೆದರು.
ನಿವಾಸಿಗಳ ಅಳಲನ್ನು ಆಲಿಸಿ ಮಾತನಾಡಿದ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಪಿಲೇಕಮ್ಮ ನಗರ, ಇಂದಿರಾ ನಗರ ಹಾಗೂ ಗೂಲ್ಲರ ಓಣಿ ೩ ನಗರಗಳನ್ನು 1993 ರಲ್ಲಿ ಕೂಳಚೆಪ್ರದೇಶವೆಂದು ಘೋಷಿಸಲಾಗಿದೆ ಈ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಪುರಸಭೆ ಸಾಮಾನ್ಯ ಸಭೆಯಲ್ಲಿ ಮಂಡಿಸಿ ಕೊಳಚೆ ಅಭಿವೃದ್ಧಿ ಮಂಡಳಿ ಗೆ ಪ್ರಸ್ತಾವನೆ ಸಲ್ಲಿಸಿತ್ತು ಅದರಂತೆ ಇಂದಿರಾ ನಗರ ಸರ್ವೆನಂ 57 ರ ಆಸ್ತಿಯ ಕ್ಷೇತ್ರ 14 ಎಕರೆ 14 ಗುಂಟೆ ಜಮೀನಿನಲ್ಲಿ 5 ಎಕರೆ 10 ಗುಂಟೆ ಘೋಷಿಸಿದ ಪ್ರದೇಶ ಮಾತ್ರ ಸರ್ವೆ ಮಾಡಲು ತಿಳಿಸಿದ್ದೇವು ಕೊಳಚೆ ಅಭಿವೃದ್ಧಿ ಮಂಡಳಿ ಸಿಬ್ಬಂದಿ ಎಲ್ಲಾ 14 ಎಕರೆ 14 ಗುಂಟೆ ಜಮೀನು ಸರ್ವೆ ಮಾಡಿ ಹಕ್ಕು ಪತ್ರ ವಿತರಿಸಿದ್ದಾರೆ ಇದರಲ್ಲಿ ಬೇರೆ ಊರಿನವರು ಹಕ್ಕು ಪತ್ರಗಳು ಸೇರ್ಪಡೆ ಮಾಡಿ ತಯಾರಿಸಿ ಪುರಸಭೆ ಹಸ್ತಾಂತರಿಸಿದ್ದಾರೆ ನೇರವಾಗಿ ಹಕ್ಕುಪತ್ರ ನೀಡಿದ್ದು ಸದರಿ ಹಕ್ಕುಪತ್ರ ಬೇರೆ ಊರಿನ ಜನರ ಹೆಸರನ್ನು ಸೇರ್ಪಡೆ ಮಾಡಿ ಹಕ್ಕುಪತ್ರ ನೀಡಿದ್ದು ತಿಳಿದುಬರುತ್ತದೆ ಮತ್ತು ಇಂದಿರಾ ನಗರ ಸರ್ವೆನಂ 57 ರಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ ಶೆಡ್ ಗಳನ್ನು ತರೆವುಗೂಳಸಿದ್ದು ಅದರ ಬಗ್ಗೆ ಮಲ್ಲಮ್ಮ ಲಕ್ಷ್ಮಣ ಚಲವಾದಿ, ಮಾಳವ್ವ ನಿಂಗಪ್ಲ ಗುಂಡಕನಾಳ ಇತರರು ೨ ಪ್ರಕರಣಗಳನ್ನು ಕಲಬುರಗಿ ನ್ಯಾಯಾಲಯದಲ್ಲಿ ದಾಖಲು ಮಾಡಿದ್ದಾರೆ ಸದ್ಯ ಈ 2 ಪ್ರಕರಣಗಳು ಮುಕ್ತಾಯಹಂತದಲ್ಲಿವೆ ನ್ಯಾಯಾಲಯದ ಆದೇಶ ಅನುಸಾರ ಸೂಕ್ತ ಕ್ರಮಗಳನ್ನು ಕೈಗಳೂಳ್ಳುತ್ತೇವೆ ಎಂದು ವಿವರಿಸಿದರು ತಹಶಿಲ್ದಾರ ಕೀರ್ತಿ ಚಾಲಕ ಸಹ ನ್ಯಾಯಾಲಯದಲ್ಲಿ ಪ್ರಕರಣ ಇರುವುದರಿಂದ ಉತಾರೆ ನೀಡಲು ಆಗುವುದಿಲ್ಲ ಮತ್ತು ಸರಕಾರಿ ಅಧಿಕಾರಿಗಳು ಯಾವುದೇ ಪರ್ಯಾಯ ಕ್ರಮ ಅಸಾಧ್ಯವಾಗುತ್ತದೆ ನ್ಯಾಯಾಲಯದ ಅನುಸಾರ ಕ್ರಮ ಕೈಗೊಳ್ಳಬೇಕಾಗುತ್ತದೆ ಧರಣಿ ಕೈಬಿಡುವಂತೆ ತಹಶಿಲ್ದಾರ, ಮುಖ್ಯಾಧಿಕಾರಿಗಳು ಮನವೊಲಿಸಲು ಯತ್ನಿಸಿದರು ಫಲ ಸಿಗಲಿಲ್ಲ
ಸರಕಾರಿ ಆಸ್ತಿಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿರುವ 13 ಜನರು ನಮ್ಮ ಇಂದಿರಾ ನಗರ ನಿವಾಸಿಗಳೆ ಅಲ್ಲ ಅವರ ಮೇಲೆ ಶಿಸ್ತುಕ್ರಮಕೈಗೂಳ್ಳುವಂತೆ ಧರಣಿ ನಿರತರು ಆಗ್ರಹಿಸಿದರು ಮತ್ತು ಉತಾರೆ ನೀಡುವ ವರಗೆ ನ್ಯಾಯಾಲಯದ ಪ್ರಕರಣ ಮುಗಿಯುವವರೆಗೂ ಧರಣಿ ಮುಂದವರೆಸುವುದಾಗಿ ತಿಳಿಸಿದರು
ಈ ವೇಳೆ ಪಿಎಸೈ ಸಂಜಯ ತಿಪ್ಪರೆಡ್ಡಿ ಉಪಸ್ಥಿತರಿದ್ದರು.
ಇಂದಿರಾ ನಗರ ನಿವಾಸಿಗಳಾದ ಬಾಬು ಬಳಗಾನೂರ, ಮಹಿಬೂಬ ಪಡೆಕನೂರ, ಬುಡ್ಢಾಸಾಬ ನೀಡಗುಂದಿ, ರಮೇಶ ದಳವಾಯಿ, ಅಮರೇಶ ಉಪ್ಪಲದಿನ್ನಿ, ವಿಷ್ಣುಗಂಗಾಪೂರ, ಶೇಖರ ಢವಳಗಿ, ಮಂಜುನಾಥ ಚಲವಾದಿ, ಮುರಳಿಧರ ಹಾದಿಮನಿ, ರಾಜು ವಡ್ಡರ,ನಾರಾಯಣ ಮಿರಜಕರ,ಆಯುಬ್ ಮುಲ್ಲಾ,ಹನಿಫ್ ಮುಲ್ಲಾ,ಬಸೀರ ನಾಲತವಾಡ, ಆಸಿಫ್ ಕುಂಟೋಜಿ, ತೋಸಿಫ್ ಬಿಳಗಿಣ ಸೇರಿದಂತೆ ಮಹಿಳೆಯರು ವೃದ್ದರು ನೂರಾರು ಇಂದಿರಾ ನಿವಾಸಿಗಳು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.
ಸಾಯಂಕಾಲ ಪುರಸಭೆ ಮುಖ್ಯಾಧಿಕಾರಿ ಧರಣಿ ನಿರತರ ಮನವಿಗೆ ಹಿಂಬರಹ ನೀಡಿ ಧರಣಿ ಅಂತ್ಯಗೂಳಿಸುವಂತೆ ಮನವಿ ಮಾಡಿದರು.ಉತಾರೆ ನೀಡುವವರಗೆ ಧರಣಿ ಮುಂದುವರೆಸುವುದಾಗಿ ಧರಣಿ ನಿರತರು ಹೋರಾಟ ಮಾಧ್ಯಮಗಳಿಗೆ ತಿಳಿಸಿದ್ದಾರೆ.