• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

    ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

    ” ನಾಗಠಾಣ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ “

    ” ನಾಗಠಾಣ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ “

    ಕೃಷಿ‌ಯಲ್ಲಿ ಹಸಿವಿದ್ದಾಗ ಒಕ್ಕಲುತನದಲ್ಲಿ ಪ್ರಗತಿ ಸಾಧ್ಯ

    ಕೃಷಿ‌ಯಲ್ಲಿ ಹಸಿವಿದ್ದಾಗ ಒಕ್ಕಲುತನದಲ್ಲಿ ಪ್ರಗತಿ ಸಾಧ್ಯ

    ಅಬ್ಬರದ ಆಚರಣೆಗಿಂತ ಅಂಬೇಡ್ಕರ್ ವಿಚಾರಧಾರೆಗೆ ಒತ್ತು ನೀಡಿ: ಡಾ. ಚನ್ನವೀರ ಶ್ರೀ

    ಅಬ್ಬರದ ಆಚರಣೆಗಿಂತ ಅಂಬೇಡ್ಕರ್ ವಿಚಾರಧಾರೆಗೆ ಒತ್ತು ನೀಡಿ: ಡಾ. ಚನ್ನವೀರ ಶ್ರೀ

    ಲಿಂಗ ಭೇದವಿಲ್ಲದ ಸಮಸಮಾಜದ ಉನ್ನತ ಚಿಂತನೆಗಳನ್ನು ನಾಡಿಗೆ ನೀಡಿದ ಏಕೈಕ ವ್ಯಕ್ತಿತ್ವ ಬಸವಣ್ಣನವರದ್ದು : ಉದಯ ರಶ್ಮಿ ದಿನ ಪತ್ರಿಕೆ ಸಂಪಾದಕ ‌ಮಣ್ಣೂರ

    ಲಿಂಗ ಭೇದವಿಲ್ಲದ ಸಮಸಮಾಜದ ಉನ್ನತ ಚಿಂತನೆಗಳನ್ನು ನಾಡಿಗೆ ನೀಡಿದ ಏಕೈಕ ವ್ಯಕ್ತಿತ್ವ ಬಸವಣ್ಣನವರದ್ದು : ಉದಯ ರಶ್ಮಿ ದಿನ ಪತ್ರಿಕೆ ಸಂಪಾದಕ ‌ಮಣ್ಣೂರ

    ಬಡತನದಲ್ಲಿ ಅರಳಿದ ತೆಗ್ಗಿಹಳ್ಳಿ ಪ್ರತಿಭೆ..!

    ಬಡತನದಲ್ಲಿ ಅರಳಿದ ತೆಗ್ಗಿಹಳ್ಳಿ ಪ್ರತಿಭೆ..!

    APMCಗೆ ಅಲ್ಪಸಂಖ್ಯಾತರು,ದಲಿತರು ಅಧ್ಯಕ್ಷರಾಗಲಿ : ಮಾಲೀಕಯ್ಯಾ ಗುತ್ತೇದಾರ ಆಗ್ರಹ

    ಇಂಡಿಯಲ್ಲಿ ಬರ್ಬರ ಹತ್ಯೆ!

    ಇಂಡಿಯಲ್ಲಿ ಬರ್ಬರ ಹತ್ಯೆ!

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ಸದನದಲ್ಲಿ ಮೊಳಗಿದ ಮುದ್ದೇಬಿಹಾಳದ ಧ್ವನಿ: ಶಾಸಕ ಸಿ.ಎಸ್. ನಾಡಗೌಡರಿಂದ ಕ್ಷೇತ್ರದ ಸಮಸ್ಯೆಗಳ ಹಕ್ಕೊತ್ತಾಯ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    ​ಮುದ್ದೇಬಿಹಾಳ: ವಿಶ್ವ ಕ್ಷಯ ರೋಗ ದಿನಾಚರಣೆ; ಉಚಿತ ತಪಾಸಣೆ ಹಾಗೂ ಚಿಕಿತ್ಸೆಗೆ ಆರೋಗ್ಯ ಇಲಾಖೆ ಕರೆ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ತಂಗಡಗಿಯ ಹಡಪದ ಅಪ್ಪಣ್ಣ ಮಹಾಸಂಸ್ಥಾನ ಪೀಠದಲ್ಲಿ ರಾಜ್ಯ ಪದಾಧಿಕಾರಿಗಳ ಸಭೆ: ಜಾತಿ ಕಾಲಂನಲ್ಲಿ ಹಡಪದ ಎಂದೇ ಬರೆಸಲು ಶ್ರೀಗಳ ಕರೆ.

      Voiceofjanata.in

      September 10, 2025
      0
      ತಂಗಡಗಿಯ ಹಡಪದ ಅಪ್ಪಣ್ಣ ಮಹಾಸಂಸ್ಥಾನ ಪೀಠದಲ್ಲಿ ರಾಜ್ಯ ಪದಾಧಿಕಾರಿಗಳ ಸಭೆ: ಜಾತಿ ಕಾಲಂನಲ್ಲಿ ಹಡಪದ ಎಂದೇ ಬರೆಸಲು ಶ್ರೀಗಳ ಕರೆ.
      0
      SHARES
      182
      VIEWS
      Share on FacebookShare on TwitterShare on whatsappShare on telegramShare on Mail

      ತಂಗಡಗಿಯ ಹಡಪದ ಅಪ್ಪಣ್ಣ ಮಹಾಸಂಸ್ಥಾನ ಪೀಠದಲ್ಲಿ ರಾಜ್ಯ ಪದಾಧಿಕಾರಿಗಳ ಸಭೆ:

      ಜಾತಿ ಕಾಲಂನಲ್ಲಿ ಹಡಪದ ಎಂದೇ ಬರೆಸಲು ಶ್ರೀಗಳ ಕರೆ.

      ಮುದ್ದೇಬಿಹಾಳ: ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಹಾಗೂ ಕೇಂದ್ರ ಸರ್ಕಾರದ ಜನಗಣತಿ ವೇಳೆ ರಾಜ್ಯಾದ್ಯಂತ ಇರುವ ಸಮಾಜ ಬಾಂಧವರೆಲ್ಲರೂ ಧರ್ಮದ ಕಾಲಂನಲ್ಲಿ ಹಿಂದು, ಜಾತಿಯ ಕಾಲಂನಲ್ಲಿ ಹಡಪದ ಎಂದೇ ಬರೆಸುವ ಮೂಲಕ ಕರ್ನಾಟಕದಾದ್ಯಂತ ನಾವೆಲ್ಲರೂ ಒಂದೇ ಸಮಾಜ ಎನ್ನುವುದನ್ನು ತೋರಿಸಿಕೊಡಬೇಕು ಎಂದು ಸಮಾಜದ ಗುರುಗಳಾಗಿ ನಾವು ಕರೆ ನೀಡುತ್ತಿದ್ದೇವೆ ಎಂದು ತಂಗಡಗಿಯ ಹಡಪದ ಅಪ್ಪಣ್ಣ ಮಹಾಸಂಸ್ಥಾನದ ಪೀಠಾಧ್ಯಕ್ಷ ಅನ್ನದಾನಭಾರತಿ ಅಪ್ಪಣ್ಣ ಶ್ರೀ ತಿಳಿಸಿದರು.
      ಕೃಷ್ಣಾ ನದಿ ತೀರದಲ್ಲಿರುವ ತಂಗಡಗಿಯ ಹಡಪದ ಅಪ್ಪಣ್ಣ ಮಹಾಸಂಸ್ಥಾನ ಪೀಠದಲ್ಲಿ ಮಂಗಳವಾರ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಪದಾಧಿಕಾರಿಗಳ ಸಭೆಯ ನಂತರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
      ಕರ್ನಾಟಕದಲ್ಲಿ ಹಡಪದ ಎನ್ನುವ ಒಂದೇ ಹೆಸರಿನಲ್ಲಿ ಸಮಾಜದವರೆಲ್ಲರೂ ಒಗ್ಗಟ್ಟು ತೋರಿಸಬೇಕಿದೆ. ಇದರಲ್ಲಿ ಮಕ್ಕಳ ಭವಿಷ್ಯವೂ ಅಡಗಿದೆ. ನಮ್ಮ ಸಮಾಜಕ್ಕೆ ೨ಎ ಮೀಸಲಾತಿ ಸಿಗಬೇಕು ಎನ್ನುವ ದೃಷ್ಟಿಯಿಂದಲೂ ಇದು ಅಗತ್ಯವಾಗಿದೆ. ಲಿಂಗಾಯತರು ಎಂದು ೭೦ ಸಾವಿರ, ಹಡಪದ ಎಂದು ೮೦ ಸಾವಿರದಿಂದ ಲಕ್ಷದವರೆಗೆ ಜನಸಂಖ್ಯೆ ಇದೆ ಎನ್ನುವುದು ತಿಳಿದು ಬಂದಿದೆ. ಉಳಿದವರು ಎಲ್ಲಿ ಹೋದರು ಎನ್ನುವ ಗೊಂದಲ ಮೂಡಿದೆ. ಇದನ್ನು ನಿವಾರಿಸಲು ಹಡಪದ ಎನ್ನುವ ಒಂದೇ ಹೆಸರಿನಿಂದ ಗುರ್ತಿಸಿಕೊಳ್ಳಲು ಎಲ್ಲರೂ ಮನಸ್ಸು ಮಾಡಬೇಕು. ೯೦೦ ವರ್ಷಗಳ ಹಿಂದಿನಿಂದಲೂ ಹಡಪದ ಸಮಾಜವು ನಲುಗಿ ಹೋಗಿದೆ. ಈಗ ಎಲ್ಲರೂ ಜಾಗೃತರಾಗುವ ಕಾಲ ಕೂಡಿಬಂದಿದೆ. ರಾಜ್ಯದ ಎಲ್ಲ ಗ್ರಾಮಗಳ ಸಮಾಜದ ಹಿರಿಯರು ಈಗ ಬಂದಿರುವ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಲು ಮುಂದಾಗಬೇಕು ಎಂದರು.
      ಸಂಘದ ರಾಜ್ಯಾಧ್ಯಕ್ಷ ಸಿದ್ದಪ್ಪ ಹಡಪದ ಅವರು ಮಾತನಾಡಿ, ರಾಜ್ಯದ ಹಡಪದ (ಕ್ಷೌರಿಕ, ನಾವಿಂದ, ನಾವಿ) ಸಮಾಜದವರೆಲ್ಲರೂ ಜಾತಿ ಕಾಲಂನಲ್ಲಿ ಹಡಪದ ಎಂದೇ ಬರೆಸಬೇಕು ಎನ್ನುವ ನಿರ್ಣಯವನ್ನು ಇಂದಿನ ರಾಜ್ಯಮಟ್ಟದ ಸಭೆಯಲ್ಲಿ ಸ್ವಾಮೀಜಿಗಳ ಸಮ್ಮುಖ ಕೈಕೊಳ್ಳಲಾಗಿದೆ. ನಮ್ಮ ಮೇಲೆ ನಡೆಯುವ ದಬ್ಬಾಳಿಕೆಗೆ ಬಲಿಯಾಗದೆ ಹಡಪದ ಜಾತಿ ಎಂದೇ ಬರೆಸಬೇಕು. ೧೭ ಉಪನಾಮಗಳು ನಮ್ಮ ಸಮಾಜಕ್ಕೆ ಸೇರಿದ್ದು ಉಳಿದಿರುವ ಇನ್ನೆರಡನ್ನು ಸೇರಿಸುವಂತೆ ಕೋರಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗದ ಆಯೋಗ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದೇವೆ. ಇವೆರಡು ಸೇರಿದರೆ ಬರುವ ಎಲ್ಲ ೧೯ ಉಪನಾಮದವರು ಧರ್ಮದಲ್ಲಿ ಹಿಂದು, ಜಾತಿಯಲ್ಲಿ ಹಡಪದ ಎಂದೇ ಬರೆಸಬೇಕು ಎಂದರು.
      ಮುಂದುವರಿದು ಮಾತನಾಡಿದ ರಾಜ್ಯಾಧ್ಯಕ್ಷರು ಕ್ಷೌರಿಕ ಎಂದ ತಕ್ಷಣ ಗೊಂದಲ ಮೂಡುತ್ತದೆ. ನಮ್ಮ ಮೂಲಪದ ನಾಯಿಂದ, ಹಡಪದ ಎಂದಿದೆ. ನಾವು ಮೂಲ ಕನ್ನಡಿಗರು. ೧೯೪೬ರಲ್ಲಿ ಉದ್ಯೋಗ ಅರಸಿ ಆಂಧ್ರದಿಂದ ಕರ್ನಾಟಕಕ್ಕೆ ವಲಸೆ ಬಂದ ಸವಿತಾ ಸಮಾಜದವರು ಕ್ಷೌರಿಕ ವೃತ್ತಿ, ನಾಗಸ್ವರ ಎರಡನ್ನೂ ಬಳಸಿ ಸರ್ಕಾರದ ಮಟ್ಟದಲ್ಲಿ ಬೆಳೆದು ಎಲ್ಲ ಸೌಲಭ್ಯ ಪಡೆಯುತ್ತಿದ್ದಾರೆ. ಹಡಪದ ಸಮಾಜದವರು ಹಳ್ಳಿಗಳಲ್ಲಿರುವುದರಿಂದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಗೆಜೆಟ್‌ನ ೮ಎ ಕಾಲಂನಲ್ಲಿ ೨೮ ಒಳಪಂಗಡ ಬಂದರೆ ಅದರಲ್ಲಿ ಕೇವಲ ೧೯ ಒಳಪಂಗಡ ಮಾತ್ರ ಹಡಪದ ಜಾತಿಗೆ ಸಂಬಂಧಿಸಿವೆ. ಕ್ಷೌರಿಕ ವೃತ್ತಿ ಮಾಡುವವರೆಲ್ಲರೂ ಹಡಪದ ಸಮಾಜದವರಲ್ಲ. ಮುಸ್ಲೀಂ, ಮರಾಠಾ ಸಮಾಜದವರೂ ನಮ್ಮ ವೃತ್ತಿಯಲ್ಲಿದ್ದಾರೆ. ಅವರೆಲ್ಲರನ್ನೂ ಹಡಪದ ಜಾತಿ ಎನ್ನಲಿಕ್ಕಾಗುವುದಿಲ್ಲ ಎಂದರು.
      ಈ ಸಂದರ್ಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಫ್.ನಾವಿ, ಧಾರವಾಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಫಕೀರೇಶ ಹಡಪದ, ಎಂ.ಎಸ್.ನಾವಿ, ಈರಣ್ಣ ಸಣ್ಣೂರ, ಮಲ್ಲಣ್ಣ ಹಡಪದ, ಹಣಮಂತ ಗುಡದಿನ್ನಿ, ಮುತ್ತಣ್ಣ ಹಡಪದ, ಶಂಕರ ಹಡಪದ, ಸಂತೋಷ್ ಹಡಪದ, ಅಶೋಕ್ ನಾವಿ ಸೇರಿದಂತೆ ಉಪಸ್ಥಿತರಿದ್ದರು.
      ಸವಿತಾ ಮತ್ತು ಹಡಪದ ಎರಡೂ ಒದೇ ಜಾತಿ ಅಲ್ಲ. ಎರಡಕ್ಕೂ ಯಾವುದೇ ಸಂಬಂಧ ಇಲ್ಲ. ಸವಿತಾ ಸಮಾಜದವರು ತೆಲುಗು ಮಾತನಾಡುತ್ತಾರೆ, ಹಡಪದ ಸಮಾಜದವರಾದ ನಾವು ಕನ್ನಡ ಮಾತನಾಡುತ್ತೇವೆ. ಸವಿತಾ ಸಮಾಜದವರನ್ನು ಹಡಪದ ಜಾತಿ ಎನ್ನಲಿಕ್ಕಾಗುವುದಿಲ್ಲ.
      –ಸಿದ್ದಪ್ಪ ಹಡಪದ, ರಾಜ್ಯಾಧ್ಯಕ್ಷ, ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ, ಬೆಂಗಳೂರು.
      Tags: #indi / vijayapur#Meeting of State Officers at the Appanna Mahasasthanam seat of the Thangadagi ship: Mr. Sree's call to write as a ship in the caste column.#Public News#State News#Today News#Voice Of Janata#Voiceofjanata.in#ತಂಗಡಗಿಯ ಹಡಪದ ಅಪ್ಪಣ್ಣ ಮಹಾಸಂಸ್ಥಾನ ಪೀಠದಲ್ಲಿ ರಾಜ್ಯ ಪದಾಧಿಕಾರಿಗಳ ಸಭೆ: ಜಾತಿ ಕಾಲಂನಲ್ಲಿ ಹಡಪದ ಎಂದೇ ಬರೆಸಲು ಶ್ರೀಗಳ ಕರೆ.
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಇಂಡಿಯಲ್ಲಿ ಮಿತಿಮಿರಿದ ಡೋನೇಷನ್ ಹಾವಳಿ..! ತಡೆಗಟ್ಟಲು ಕರ್ನಾಟಕ ಯುವ ರಕ್ಷಣಾ ವೇದಿಕೆ ಆಗ್ರಹ

      ಇಂಡಿಯಲ್ಲಿ ಮಿತಿಮಿರಿದ ಡೋನೇಷನ್ ಹಾವಳಿ..! ತಡೆಗಟ್ಟಲು ಕರ್ನಾಟಕ ಯುವ ರಕ್ಷಣಾ ವೇದಿಕೆ ಆಗ್ರಹ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಇಂಡಿಯಲ್ಲಿ ಮಿತಿಮಿರಿದ ಡೋನೇಷನ್ ಹಾವಳಿ..! ತಡೆಗಟ್ಟಲು ಕರ್ನಾಟಕ ಯುವ ರಕ್ಷಣಾ ವೇದಿಕೆ ಆಗ್ರಹ

      ಇಂಡಿಯಲ್ಲಿ ಮಿತಿಮಿರಿದ ಡೋನೇಷನ್ ಹಾವಳಿ..! ತಡೆಗಟ್ಟಲು ಕರ್ನಾಟಕ ಯುವ ರಕ್ಷಣಾ ವೇದಿಕೆ ಆಗ್ರಹ

      June 3, 2026
      ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಇಂಡಿ ನಗರದಲ್ಲಿ ಬೃಹತ್ ಪ್ರತಿಭಟನೆ

      ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವಂತೆ ಇಂಡಿ ನಗರದಲ್ಲಿ ಬೃಹತ್ ಪ್ರತಿಭಟನೆ

      June 1, 2026
      ಪ್ರಿಯಾಂಕ್ ಖರ್ಗೆಗೆ ಉಪಮುಖ್ಯಮಂತ್ರಿ ಪಟ್ಟ, ಎಂ.ವೈ. ಪಾಟೀಲರಿಗೆ ಸಚಿವ ಸ್ಥಾನಕ್ಕೆ  ಮನವಿ

      ಪ್ರಿಯಾಂಕ್ ಖರ್ಗೆಗೆ ಉಪಮುಖ್ಯಮಂತ್ರಿ ಪಟ್ಟ, ಎಂ.ವೈ. ಪಾಟೀಲರಿಗೆ ಸಚಿವ ಸ್ಥಾನಕ್ಕೆ  ಮನವಿ

      May 31, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.