ARSI ಶ್ರೀಶೈಲ ಬಳೂತಿ ಅವರಿಗೆ ತಳವಾರ ಸಮಾಜದ ವತಿಯಿಂದ ಸನ್ಮಾನ..!
ವಿಜಯಪುರ : ಪೋಲಿಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಶೈಲ ಬಳೂತಿ ಅವರು Assistant Reserve Sub-Inspector (ಎ ಆರ್ ಎಸ್ ಐ) ಹುದ್ದೆಗೆ ಮುಂಬಡ್ತಿ ಪಡೆದ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾ ತಳವಾರ ಸಮಾಜ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಮುಖಂಡ ವಿವೇಕ ಡಬ್ಬಿ ಮಾತನಾಡಿದ ಅವರು, ಶ್ರೀಶೈಲ ಬಳೂತಿ ಅತ್ಯಂತ ಪ್ರಾಮಾಣಿಕ ಮತ್ತು ದಕ್ಷ ಆಡಳಿತಗಾರರು. ಇಲ್ಲಿಯವರೆಗೆ ಸುಮಾರು ವಿಚಾರಗಳಲ್ಲಿ ಅವರನ್ನು ಗಮನಿಸಿದ್ದು , ಅತೀ ಹೆಚ್ಚಾಗಿ ಸಾಮನ್ಯ ಜನರ ಪರ ಮತ್ತು ನ್ಯಾಯಾದ ಪರವಾಗಿ ನಿಲ್ಲುವ ಹೃದಯವಂತರು. ಅವರು ಇಂದು ಮುಂಬಡ್ತಿ ಪಡೆದಿದ್ದು ನಮ್ಮಲ್ಲರಿಗೂ ಅತೀವ ಸಂತಸ ತಂದಿದೆ. ಅವರು ಇನ್ನಿಷ್ಟು ಪೋಲೀಸ್ ಇಲಾಖೆಯಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಿಸಿ ಜನಮನ್ನಣೆ ಪಡೆಯಬೇಕು. ಅವರು ಸಮುದಾಯ ಹಾಗೂ ಸಮಾಜವನ್ನು ಎರಡು ಒಬ್ಬ ವ್ಯಕ್ತಿಯ ಕಣ್ಣುಗಳು ಎಂದು ತಿಳಿದು ಉತ್ತಮವಾಗಿ ಕರ್ತವ್ಯ ನಿರ್ವಹಣೆಯ ಮಾಡುತ್ತೀರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಸಾಯಬಣ್ಣ ಬಾಗೇವಾಡಿ, ಶಂಕರ್ ವಾಲಿಕಾರ, ಸೋಮು ಜಮಾದಾರ, ಸಂಜೀವ ತಳವಾರ, ರಮೇಶ್ ದಳವಾಯಿ, ಶ್ರೀಶೈಲ ತಳವಾರ್, ರೇವಣ್ಣ ಹತ್ತಳ್ಳಿ, ಸಂತೋಷ ಸಂಗೋಗಿ, ಸಂತೋಷ ವಾಲಿಕಾರ, ನಿಂಗಣ್ಣ ತಿಳಗೋಳ, ಆನಂದ ಗೊರಗುಂಡಗಿ, ಸಂತೋಷ ಕೋಳಿ, ಈಶ್ವರ ಮಣಗಿರಿ, ಸುರೇಶ ಡೊಂಗ್ರೊಜ್, ಅಭಿಶೇಕ ಜಮಾದಾರ, ಅರ್ಜುನ ಆಲಮೇಲ, ನವೀನ ರೂಗಿ,ಆನಂದ ತಳವಾರ, ಹುಲೆಪ್ಪ ಆಲಗೂರ, ಈರಣ್ಣ ಹಡಲಸಂಗ, ಭೀಮರಾಯ ಬಿಲಕರ, ಚಂದ್ರಾಮ ತಳವಾರ, ಬಿ.ಟಿ ನಾಯ್ಕೊಡಿ, ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.


















