ಅಕಾಲಿಕ ಮಳೆಯಿಂದ ಸರಿಯಾದ ಬೆಳೆ ಬರುತ್ತಿಲ್ಲ ಮರಗಳನ್ನು ಬೆಳೆಸಬೇಕು ಮರಗಳ ಮಾರಣಹೋಮ ನಿಲ್ಲಬೇಕು
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ ; ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನಕ್ಕೆವ ಮತಕ್ಷೇತ್ರದ ಶಾಸಕರಾದ ಅಪ್ಪಾಜಿ ನಾಡಗೌಡರು 37 ಎಕರೆ ಕಂದಾಯ ಜಮೀನು ಅರಣ್ಯ ಇಲಾಖೆಗೆ ನೀಡಿ ವೃಕ್ಷೋದ್ಯಾನ ಮೂಲಕ ಆರೋಗ್ಯಕರ ವಾತಾವರಣ ನಿರ್ಮಿಸಲು ಯೋಜನೆ ಹೊಂದಿದ್ದಾರೆ ಇದಕ್ಕೆ ನಾನು 2 ಕೋಟಿ ಅನುದಾನ ನೀಡಿದ್ದೇನೆ ಎಂದು ಅರಣ್ಯ ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದರು.
ಮುದ್ದೇಬಿಹಾಳ ತಾಲ್ಲೂಕಿನ ಬಿದರಕುಂದಿ ವ್ಯಾಪ್ತಿಯಲ್ಲಿ ಬರುವ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನಕ್ಕೆ ಸೋಮುವಾರ ಶುಂಕುಸ್ಥಾಪನೆ ನೇರವೆರಿಸಿ ಧಾರವಾಡ ರೆಡ್ಡಿ ಸಹಕಾರ ಬ್ಯಾಂಕ್ ನಿಯಮಿತ ಮುದ್ದೇಬಿಹಾಳ ಶಾಖೆ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮದರಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು ಈ ಉದ್ಯಾನವನದಲ್ಲಿ ಅನೇಕ ಪ್ರಬೇದದ ಮರಗಳು ಔಷಧಿ ಸಸಿಗಳನ್ನು ನಡೆಸಲಾಗಿದ್ದು ವಿದ್ಯಾರ್ಥಿಗಳಿಗೆ ಅದರ ಪರಿಚಯ ಈ ಉದ್ಯಾನವು ನೀಡಲಿದೆ ೬ ತಿಂಗಳಲ್ಲಿ ಈ ವೃಕ್ಷೋದ್ಯಾನ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಕಾನೂನು ಸಂಸದೀಯ ಸಚಿವ ಹೆಚ್ ಕೆ ಪಾಟೀಲ್ ಮಾತನಾಡಿ ಅಕಾಲಿಕ ಮಳೆಯಿಂದ ಸರಿಯಾದ ಬೆಳೆ ಬರುತ್ತಿಲ್ಲ ಮರಗಳನ್ನು ಬೆಳೆಸಬೇಕು ಮರಗಳ ಮಾರಣಹೋಮ ನಿಲ್ಲಬೇಕು ಈಶ್ವರ ಖಂಡ್ರೆ ಅವರು ಅರಣ್ಯ ಸಚಿವರಾದ ಮೇಲೆ ಅರಣ್ಯನಾಶಕರಲ್ಲಿ ಭಯಹುಟ್ಟಿಸಿದ್ದಾರೆ ಎಂದರು.
ಶಾಸಕ ಕೆ ಎಸ್ ಡಿ ನಿಗಮದ ಅಧ್ಯಕ್ಷ ಸಿ.ಎಸ್ ನಾಡಗೌಡ ಅಪ್ಪಾಜಿ ಮಾತನಾಡಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ಕ್ಕೆ 2 ಕೋಟಿ ರೂ ಅರಣ್ಯ ಸಚಿವರು ನೀಡಿದ್ದಾರೆ ನಾನು ಶಾಸಕರ ವೈಯಕ್ತಿಕ ನಿಧಿಯಿಂದ 50 ಲಕ್ಷ ರೂ ಸೇತುವೆ ನಿರ್ಮಾಣಕ್ಕೆ ನೀಡಿದ್ದೇನೆ ಮತ್ತು ಇನ್ನೂ 25 ಲಕ್ಷ ರೂ ನೀಡುವ ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಬೃಹತ್ ಹಾಗೂ ಉದ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ್ ಸಂಸದ ರಮೇಶ ಜಿಗಜಿಣಗಿ, ಮಹಾಯೋಗಿ ವೇವನ ಸಂಸ್ಥಾನಮಠ ಶ್ರೀ ವೇಮಾನಂದ ಮಹಾಸ್ವಾಮಿಗಳು, ಇಳಕಲ್ ಚಿತ್ತರಗಿಮಠದ ಶ್ರೀ ಗುರಮಹಾಂತ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವನ್ನು ವಹಿಸಿದ್ದರು ,ಗಣ್ಯರಾದ ಬಿ.ಎಸ್ ಪಾಟೀಲ್ ಯಾಳಗಿ, ಬಿದರಕುಂದಿ ಗ್ರಾಪಂ ಅಧ್ಯಕ್ಷೆ ರೂಪ ಚಲವಾದಿ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಕೆ ಎಲ್ ಪಾಟೀಲ್, ಎಸ್ ಎನ್ ನಾಡಗೌಡ, ಸಿ.ಬಿ ಅಸ್ಕಿ, ಬಿ ಎಂ ಮುದರೆಡ್ಡಿ, ಅರಣ್ಯ ಸಂರಕ್ಷಣಾ ಅಧಿಕಾರಿ ಸಿಸಿಎಫ್ ಮಂಜುನಾಥ ಚವ್ಹಾಣ, ಮಲ್ಲಿನಾಥ ಕುಸನಾಳ, ರಾಯನಗೌಡ ತಾತರೆಡ್ಡಿ, ಗುರು ತಾರನಾಳ, ಸಂಗಮೇಶ ಅಪ್ಪಾಜಿ ಬಬಲಾದಿ, ಶಿವಶಂಕರಗೌಡ ಹಿರೆಗೌಡರ,ಎಂ.ಬಿ ನಾವದಗಿ, ಸತೀಶ ಓಸ್ವಾಲ್, ಕಾಮರಾಜ ಬಿರಾದಾರ, ನಾಗಭೂಷಣ ನಾವದಗಿ, ಅರಣ್ಯ ಇಲಾಖೆಯ ಭಾಗ್ಯವಂತ ಮಸೂದಿ, ಬಸನಗೌಡ ಬಿರಾದಾರ, ಗಿರೀಶ ಹುಲಕುಡೆ ಸೇರಿದಂತೆ ಅನೇಕ ಗಣ್ಯಮಾನ್ಯರು ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.
ಸಂಗಮೇಶ ಶಿವಣಗಿ ತಂಡ ಪ್ರಾರ್ಥಿಸಿದರು, ಮಹಾಬಲೇಶ್ವರ ಗಡೇದ ಸ್ವಾಗತಿಸಿದರು ಪ್ರಾಧ್ಯಾಪಕ ಬಸವರಾಜ ಹಂಚಲಿ ಹಾಗೂ ಬಿ ಎಸ್ ಮುಜಗೂಂಡ ನಿರೂಪಿಸಿ ವಂದಿಸಿದರು.