ಅಕ್ರಮವಾಗಿ ಗೃಹ ಬಳಕೆ ಗ್ಯಾಸ ಸಿಲಿಂಡರ್ ಸಂಗ್ರಹ ಕೇಂದ್ರದ ಆಹಾರ ಅಧಿಕಾರಿ ಹೂಗಾರ ದಾಳಿ..!
ಇಂಡಿ :ಗ್ಯಾಸ್ ರೀಫಲಿಂಗ್ಗಾಗಿ ಅಕ್ರಮವಾಗಿ ಗೃಹ ಬಳಕೆಯ ಗ್ಯಾಸ್ಗಳನ್ನು ಸಂಗ್ರಹಿಸಿ ಮನೆಯಲ್ಲಿಟ್ಟಿರುವ ಖಚಿತ ಮಾಹಿತಿ ಆಧರಿಸಿ ಆಹಾರ ನಿರೀಕ್ಷಕ ಪರಮಾನಂದ ಹೂಗಾರ ಹಾಗೂ ಪಿಐ ಪ್ರದೀಪ ಬಿಸೆ ನೇತೃತ್ವದಲ್ಲಿ ದಾಳಿ ನಡೆಸಿರುವ ಘಟನೆ ಇಂಡಿ ಪಟ್ಟಣದಲ್ಲಿ ನಡೆದಿದೆ.
ಶುಕ್ರವಾರ ಪಟ್ಟಣದ ಟಿಪ್ಪು ಸುಲ್ತಾನ್ ಸರ್ಕಲ್ ಹತ್ತೀರ ಇರುವ ಚಿಕ್ಕ ಮನೆಯಲ್ಲಿ ಗೃಹ ಉಪಯೋಗಿ ಗ್ಯಾಸಗಳನ್ನು ಸಂಗ್ರಹಿಸಿ ಅಕ್ರಮವಾಗಿ ರೀಫಲಿಂಗ್ಮಾಡುತ್ತೀರುವ ಸಂದರ್ಭದಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಪೋಲಿಸರು ದಾಳಿ ನಡೆಸಿದ್ದಾರೆ
ಅಮೀನ್ ಮುಲ್ಲಾ (27) ಬಂಧಿತ ಆರೋಪಿ. ಇನ್ನು ಗೃಹ ಬಳಕೆಯ ಸಿಲಿಂಡರ್ಗಳನ್ನು ಅಕ್ರಮವಾಗಿ ಚಿಕ್ಕ ಚಿಕ್ಕ ಗ್ಯಾಸ್ಗಳಿಗೆ ರೀಫಲಿಂಗ್ ಮಾಡುವಾಗ ಖಚಿತ ಮಾಹಿತಿ ಆಧರಿಸಿ, ದಾಳಿಗೈದು 62,100 ಮೌಲ್ಯದ 45 ಸಿಲಿಂಡರ್ ಜಪ್ತಿಗೈದಿದ್ದಾರೆ. ಈ ಕುರಿತು ಇಂಡಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.