ಇಂಗಳಗಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಚುನಾವಣೆ
ಇಂಡಿ: ತಾಲೂಕಿನ ಇಂಗಳಗಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯು ರವಿವಾರರಂದು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಿತು.
ನೂತನ ಆಡಳಿತ ಮಂಡಳಿ ನಿರ್ದೇಶಕರಾಗಿ ಸಾಲಗಾರರ ಸಾಮಾನ್ಯ ೫ ಸ್ಥಾನಕ್ಕಾಗಿ ಜರುಗಿದ ಚುನಾವಣೆಯಲ್ಲಿ ಪ್ರಭು ಹೊಸಮನಿ, ಪಾಂಡುರಂಗ ಜಾಧವ, ಧರ್ಮೇಂದ್ರ ಚಾಬುಕಸವಾರ, ಶ್ರೀಮಂತ ಗುಂದವಾನ, ಸಿದ್ದಪ್ಪ ಪೂಜಾರಿ ಆಯ್ಕೆಯಾಗಿದ್ದಾರೆ.
ಇನ್ನೂ ಸಾಲಗಾರರ ಮಹಿಳಾ ಮಿಸಲು ೨ ಸ್ಥಾನಕ್ಕಾಗಿ ಜರುಗಿದ ಚುನಾವಣೆಯಲ್ಲಿ ಪುತಳಾಬಾಯಿ ಮುಚ್ಚಂಡಿ, ಶಿಲವಂತಿ ಪೂಜಾರಿ ಹಾಗೂ ಸಾಲಗಾರ ಹಿಂದುಳಿದ ಅ. ವರ್ಗದಿಂದ ಮೈಬೂಬ ಮಾದಾರ, ಸಾಲಗಾರ ಬ. ವರ್ಗದಿಂದ ಆನಂದ ಪವಾರ, ಪರಿಶಿಷ್ಟ ಜಾತಿ ಮಿಸಲು ಸ್ಥಾನದಿಂದ ವಿಠ್ಠಲ ಹರಿಜನ, ಬಿನ್ ಸಾಲಗಾರರ ಸ್ಥಾನದಿಂದ ಉಮೇಶ ಚವ್ಹಾಣ ಆಯ್ಕೆಯಾಗಿದ್ದಾರೆ.
ಇನ್ನೂ ಪ.ಜಾ ಮಿಸಲು ಸ್ಥಾನಕ್ಕೆ ಪ್ರಭು ವಾಲಿಕಾರ ಒಬ್ಬರೆ ನಾಮ ಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜಯರಾಮ ಚವ್ಹಾಣ ಘೋಷಣೆ ಮಾಡಿದ್ದಾರೆ.
ಇಂಡಿ: ತಾಲೂಕಿನ ಇಂಗಳಗಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಆಡಳಿತ ಮಂಡಳಿ ನಿರ್ದೇಶಕರನ್ನು ಗ್ರಾಮಸ್ಥರು ಸನ್ಮಾನಿಸಿದರು



















