ಬೆನಕನಹಳ್ಳಿ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷರಾಗಿ ರಾಜಶೇಖರ ಹೊಸಮನಿ, ಉಪಾಧ್ಯಕ್ಷರಾಗಿ ಚನಬಸಪ್ಪ ಮಸಳಿ ಅವಿರೋಧ ಆಯ್ಕೆ
ಬೆನಕನಹಳ್ಳಿ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಅವಿರೋಧ ಆಯ್ಕೆ
ಇಂಡಿ : ತಾಲ್ಲೂಕಿನ ಬೆನಕನಹಳ್ಳಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕ್ದೃಷಿ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ರಾಜಶೇಖರ ಬಸವಂತಪ್ಪಾ ಹೊಸಮನಿ, ಉಪಾಧ್ಯಕ್ಷರಾಗಿ ಚನಬಸಪ್ಪ ರೇವಣಸಿದ್ದಪ್ಪ ಮಸಳಿ, ನಿದೇಶಕರಾಗಿ ಬಾಬಾಗೌಡ ರುದ್ರಗೌಡ ಪಾಟೀಲ, ಭೀರಪ್ಪ ಪೂಜಪ್ಪ ಪೂಜಾರಿ, ಶರಣಪ್ಪ ಮಲ್ಲಪ್ಪ ಹೊಸಮನಿ, ಸಿದರಾಯ ಘಂಟೆಪ್ಪ ಲೋಣ , ಅಂಬಿಕಾ ಸುನೀಲ ಬಿರಾದಾರ, ಮಹಾದೇವಿ ಜಟ್ಟೆಪ್ಪ ಗೌಡಗಾವಿ, ಶ್ರೀಮಂತ ನಾಗಪ್ಪ ಲೋಣ , ದಯಾನಂದ ಸದಪ್ಪ ಹಟ್ಟಿ ಉರ್ಫ ಹಿರೋಳಿ, ನಿಂಗಪ್ಪ ಯಮನಪ್ಪ ಸಮಗಾರ, ಬಾಲಪ್ಪ ಪೂಜಪ್ಪ ನಾಯಿಕೊಡಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಿಟರ್ನಿಂಗ ಆಫೀಸರ್ ಕಲ್ಲನಗೌಡ ಪಾಟೀಲ ಮತ್ತು ಮಖ್ಯ ಕಾರ್ಯನಿರ್ವಾಕ ಉಮೇಶ ಹೊಸಮನಿ ಘೋಷಿಸಿದರು.


















