ಮುದ್ದೇಬಿಹಾಳ : ಹಲವು ಧಾರ್ಮಿಕ ಕಾರ್ಯಕ್ರಮ..ಏನು ಗೊತ್ತಾ..?
ಮುದ್ದೇಬಿಹಾಳ:ಶ್ರೀ ೧೦೦೮ ಸತ್ಯಪ್ರಮೋದ ತೀರ್ಥರ ಕರಸಂಜಾತರಾದ ಶ್ರೀ ೧೦೦೮ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಮುದ್ದೇಬಿಹಾಳ ನಗರದಲ್ಲಿ ಪುರಪ್ರವೇಶ ಮಾಡಿ ಎರಡು ದಿನಗಳ ಕಾಲ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನ, ಶ್ರೀ ಚಿದಂಬರ ದೇವಸ್ಥಾನ, ಭಕ್ತಾದಿಗಳ ಮನೆಗೆ ಭೇಟಿ ನೀಡಿ ದಿಗ್ವಿಜಯ ಮೂಲ ರಾಮದೇವರ ಪೂಜೆ, ಪಾದಪೂಜೆ ಸೇರಿ ಹಲವು ಧಾರ್ಮಿಕ ಕಾರ್ಯಕ್ರಮ ನಡೆಸಿಕೊಟ್ಟರು. ಮಂಗಳವಾರ ಪುರಪ್ರವೇಶ ಮಾಡಿದ ಶ್ರೀಪಾದಂಗಳವರು ಬುಧವಾರ ವಿಜಯೇಂದ್ರ ಪಾಟೀಲ ಅವರ ನಿವಾಸದಲ್ಲಿ ಮೂಲ ರಾಮದೇವರ ಪೂಜೆ ನಡೆಸಿಕೊಟ್ಟರು. ಭಕ್ತರ ಮನೆಗೆ ತೆರಳಿ ಪಾದಪೂಜೆ ನೆರವೇರಿಸಿಕೊಂಡರು. ಶ್ರೀ ರಾಘವೇಂದ್ರ ಬೃಂದಾವನ ಸನ್ನಿಧಿಗೆ ಆಗಮಿಸಿ ಭಕ್ತರಿಗೆ ಮುದ್ರೆ ಆಶಿರ್ವಾದ ನೀಡಿದರು. ಚಿದಂಬರ ದೇವಸ್ಥಾನಕ್ಕೆ ಆಗಮಿಸಿ ಮಹಾಮಂಗಳಾರತಿ ನಡೆಸಿಕೊಟ್ಟರು.