ನಿಂಬೆ ಬೆಳೆಗೆ ಸಮಗ್ರ ರೋಗ ನಿರ್ವಹಣಾ ಕ್ರಮ ಮುಖ್ಯ
ಇಂಡಿ : ಹಿಂಗಾರು ಹಂಗಾಮಿನಲ್ಲಿ ನಿಂಬೆ ಬೆಳೆಗೆ ಸೊರಗೆ ರೋಗ, ಕಜ್ಜಿ ರೋಗ, ಹಿಟ್ಟು ತಿಗಣೆಯ ಬಾಧೆ ಕಂಡು ಬರುತ್ತಿದ್ದು ಸಮಗ್ರ ನಿರ್ವಹಣಾ ಕ್ರಮ ಅನುಸರಿಸಲು ಡಾ.ಹೀನಾ ಹೇಳಿದರು.
ಕೃಷಿ ವಿಜ್ಞಾನ ಕೇಂದ್ರ ಇಂಡಿ ವತಿಯಿಂದ ಸಾಲೋಟಗಿ ಗ್ರಾಮದ ಬಾಬು ಅವಟಿಯವರ ತೋಟದಲ್ಲಿ ನಿಂಬೆ ಬೆಳೆಯಲ್ಲಿ ಬಹಾರ ಮತ್ತು ಪೋಷಕಾಂಶಗಳ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ನೀಡಿ ಮಾತನಾಡುತ್ತಿದ್ದರು.
ಸಮಗ್ರ ರೋಗ ನಿರ್ವಹಣೆಗೆ ಕೈ ಕೊಡರ್ಮ ಮತ್ತು ಸುಡಮನಾಸ್ ಜೈವಿಕ ರೋಗ ನಿರೋಧಕ ಇವುಗಳನ್ನು ತಿಪ್ಪಿ ಗೊಬ್ಬರ ದಲ್ಲಿ ಬೆರೆಸಿ ಮರದ ಬುಡಕ್ಕೆ ಬಿಡಬೇಕು. ಹಾಗೂ ಕಾಂಡಗಳಿಗೆ ಬೋರ್ಡೋ ಪೇಸ್ಟ ತಯಾರಿಕೆ ಮಾಡಿ ಲೇಪನ ಮಾಡುವದರಿಂದ ರೋಗವನ್ನು ಹತೋಟೆ ಮಾಡಬಹುದು ಎಂದರು.
ಡಾ. ಪ್ರೇಮಚಂದ್ರ, ಡಾ. ವೀಣಾ ಚಂದಾವರಿ ಮತ್ತು ಡಾ. ಬಾಲಾಜಿ ನಾಯ್ಕ ಮಾತನಾಡಿದರು.
ಶ್ರೀಕಾಂತ ಅವಟಿ, ಸೋಮಣ್ಣ ಕೆರುರ ಭೀಮಾಶಂಕರ ಅವರಾದಿ ಸೇರಿದಂತೆ ಸುಮಾರು ೨೦ ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.
ಕೃಷಿ ವಿಜ್ಞಾನ ಕೇಂದ್ರ ಇಂಡಿ ವತಿಯಿಂದ ಸಾಲೋಟಗಿ ಗ್ರಾಮದ ತೋಟದಲ್ಲಿ ನಿಂಬೆ ಬೆಳೆಯಲ್ಲಿ ರೋಗ ನಿರ್ವಹಣೆ ಕುರಿತು ಡಾ. ಹೀನಾ ಮಾತನಾಡಿದರು.



















