ನವಜಾತ ಹೆಣ್ಣು ಶಿಶುವಿನ ಪಾಲಕರ ಪತ್ತೆಗೆ ಮನವಿ
ವಿಜಯಪುರ, ಸೆಪ್ಟೆಂಬರ್ 03 :ವಿಜಯಪುರ ನಗರದ ರಹೀಂ ನಗರದ ರೆಹಮಾನಿ ಮಸೀದಿ ಹತ್ತಿರ ಅಂದಾಜು 2 ದಿನದ ನವಜಾತ ಅನಾಮಧೇಯ ಹೆಣ್ಣು ಶಿಶುವೊಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಪತ್ತೆಯಾಗಿದ್ದು, ಸದರಿ ಹೆಣ್ಣು ಶಿಶುವಿನ ಜೈವಿಕ ಪಾಲಕರಿದ್ದರೆ, ಈ ಪ್ರಕಟಣೆಯ 60 ದಿನಗಳೊಳಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಬಿ4/3 ವಿವೇಕ ನಗರ ಪಶ್ಚಿಮ, ವಿಜಯಪುರ ದೂ: 08352-295261, ಮೊ: 9538940669 ಸಂಖ್ಯೆಗೆ ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



















