ಲಾರಿ ಅಪಘಾತ : ಚಾಲಕ ಪ್ರಾಣಪಾಯದಿಂದ ಪಾರು
ಹನೂರು: ತಾಲೂಕಿನ ಪಿಜಿ ಪಾಳ್ಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸ ದೊಡ್ಡಿ ಗ್ರಾಮದ ಸಮೀಪ ಲಾರಿ ಅಪಘಾತ ಸಂಭವಿಸಿ ಚಾಲಕ ಪರಾಗಿರುವ ಘಟನೆ ಜರುಗಿದೆ.
ಒಡೆಯರ್ ಪಾಳ್ಯ ದಿಂದ ಕೊಳ್ಳೇಗಾಲದ ಕಡೆಗೆ ಸಕ್ಕಿಂಗ್ ಯಂತ್ರದ ಲಾರಿ ಇಂದು ಮಧ್ಯಾಹ್ನ 2:00 ಗಂಟೆ ಸಮಯದಲ್ಲಿ ಹೊಸ ದೊಡ್ಡಿ ಗ್ರಾಮದ ಸಮೀಪದ ತಿರುವೊಂದರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಸಂಪೂರ್ಣ ಜಖಂಗೊಂಡಿದೆ. ಸದ್ಯ ಚಾಲಕ ಮತ್ತು ಅವನ ಸಹಾಯಕ ಇಬ್ಬರು ಸಹ ಪ್ರಾಣ ಅಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.