ಇಂಡಿ ಪುರಸಭೆಗೆ ಜಿಲ್ಲಾಧಿಕಾರಿ ಬೇಟಿ..! ಕಾರಣ ಗೊತ್ತಾ..?
ಇಂಡಿ : ಪುರಸಭೆ ಅವರಿಗೆ ಪಟ್ಟಣದ ಸ್ವಚ್ಚತೆ ಕಾಪಾಡಿಕೊಳ್ಳಲು ಜಿಲ್ಲಾಧಿಕಾರಿ ಟಿ ಬೂಭಾಲನ್ ಸೂಚಿಸಿದರು. ಪ್ರತಿ ವಾರ್ಡಗಳಲ್ಲಿ ಫಾಗಿಂಗ್ ಮಾಡಬೇಕು, ವಾರದಲ್ಲಿ ೨ ದಿನ ಲಾರ್ವಾ ಸರ್ವೇ ಮಾಡಬೇಕು, ಸಾರ್ವಜನಿಕರಿಗೂ ಸ್ವಚ್ಚತೆ ಕಾಪಾಡಿಕೊಳ್ಳಲು ತಿಳಿಸಿದರು. ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಿ ಘನ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಿ ಪರಿಸರವನ್ನು ಸ್ವಚ್ಚವಾಗಿಡಬೇಕು. ತಪ್ಪದೇ ರಾತ್ರಿ ವೇಳೆಯಲ್ಲಿ ಸೊಳ್ಳೆ ಪರದೆ. ಸೊಳ್ಳೆ ಬತ್ತಿಗಳನ್ನು ಉಪಯೋಗಿಸಲು ಸಾರ್ವಜನಿಕರಿಗೆ ಸೂಚಿಸಿದರು.
ಬುಧವಾರ ಪಟ್ಟಣದ ಮಿನಿ ವಿಧಾನ ಸೌಧದ ಮುಂದೆ ಡೆಂಗ್ಯು ನಿಯಂತ್ರಣ ಜನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ತದನಂತರ ಪುರಸಭೆ ಕಾರ್ಯಾಲಯಕ್ಕೆ ಬೇಟಿ ನೀಡಿ ಜಾಗೃತಿ ವಹಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ಕಂದಾಯ ಉಪವಿಭಾಗಾಧಿಕಾರಿ ಅಭೀದ ಗದ್ಯಾಳ, ತಹಶೀಲ್ದಾರ ಸಂಜಯ ಇಂಗಳೆ, ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ವ್ಯವಸ್ಥಾಪಕ ಪ್ರವೀಣ ಸೋನಾರ, ಚಂದು ಕಾಲೆಬಾಗ, ಎಲ್ ಎಸ್ ಸೋಮನಾಯಕ ಉಪಸ್ಥಿತರಿದ್ದರು.


















