ಹೊಸ ವಿಚಾರ ತಿಳಿಯಲು ಉಪನ್ಯಾಸಗಳು ಸಹಕಾರಿ
ಇಂಡಿ :ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಜ್ಞಾನ ಪಸರಿಸುವಲ್ಲಿ ಉಪನ್ಯಾಸ ಗೋಷ್ಠಿಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಸರಕಾರಿ ನೌಕರರ ಸಂಘ ಇಂಡಿ ಘಟಕದ ಮಾಜಿ ಅಧ್ಯಕ್ಷ ಮತ್ತು ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಅಂಬಣ್ಣ ಸುಣಗಾರ ಹೇಳಿದರು.
ಪಟ್ಟಣದ ಶ್ರೀ ಹಡಪದ ಅಪ್ಪಣ್ಣ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ತಾಲೂಕಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.ಕದಳಿ ವೇದಿಕೆ ಅಧ್ಯಕ್ಷೆ ಗಂಗಾ ಗಲಗಲಿ ಮಾತನಾಡಿ ಜ್ಞಾನ ಪಸರಿಸುವಲ್ಲಿ ದತ್ತಿ ಉಪನ್ಯಾಸಗಳ ಪಾತ್ರ ದೊಡ್ಡದು, ಉಪನ್ಯಾಸಗಳು ಹೊಸ ವಿಚಾರ ವಿಷಯಗಳನ್ನು ತಿಳಿಯಲು ಹಾಗೂ ಅಧ್ಯಯನ ಮಾಡಲು ಅನುಕೂಲವಾಗುತ್ತದೆ ಎಂದರು.
ತಾಲೂಕಾ ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಅಧ್ಯಕ್ಷ ಎಸ್.ಆಯ್. ಸುಗೂರ ಮಾತನಾಡಿ ದತ್ತಿ ಉಪನ್ಯಾಸಗಳು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದು ಅತ್ಯಂತ ಸಂತಸದ ವಿಷಯ ಎಂದರು. ಎಚ್.ಎಸ್.ಎಳೆಗಾಂವ, ಕುಮಾರಿ ಜಯಶ್ರೀಗೌಡ, ರಾಜಶ್ರೀ ಕ್ಷತ್ರಿ,ಐ.ಎಸ್.ರೂಗಿ ಮಾತನಾಡಿದರು.
ದತ್ತಿ ಸ್ಮರಣೆಯಲ್ಲಿ ಭೌರಮ್ಮ ಗಿರಿಮಲ್ಲಪ್ಪ ಗಲಗಲಿಯವರ ಕುರಿತು ಶ್ರೀಮತಿ ಗಂಗಾ ಗಲಗಲಿ, ಚಂದ್ರಕಾAತ ಗಲಗಲಿ ಕುರಿತು ಶ್ರೀಮತಿ ಭವಾನಿ ಗುಳೆದಗುಡ್ಡ ಮಾತನಾಡಿದರು.
ವೇದಿಕೆಯ ಮೇಲೆ ಶ್ರೀ ಹಡಪದ ಅಪ್ಪಣ್ಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಂತೋಷ ಗವಳಿ, ಕಾರ್ಯದರ್ಶಿ ಸಿದರಾಯ ಅಪ್ತಾಗಿರಿ,ಆಡಳಿತಾಧಿಕಾರಿ ಎಸ್.ಟಿ.ಬಿರಾದಾರ, ಎಸ್.ಎಸ್.ಈರನಕೇರಿ ಮತ್ತಿತರಿದ್ದರು.


















