ಸಮಾನತೆಯ ಸಮಾಜ ನಿರ್ಮಾನದಲ್ಲಿ
ಜಗಜೀವನರಾಮರ ಕೊಡುಗೆ ಅಪಾರ
ಇಂಡಿ : ಸಮಾನತೆಯ ಸಮಾಜ ನಿರ್ಮಾಣಗೊಳ್ಳುವಲ್ಲಿ ಡಾ. ಬಾಬು ಜಗಜೀವನರ ಕೊಡುಗೆ ಅಪಾರವಾಗಿದೆ.
ಸಮಾಜದಲ್ಲಿ ಸಮಾನತೆ ಇರಬೇಕು.ಅರ್ಥಿಕವಾಗಿ
ಮುಂದುವರೆದರೆ ಮಾನವ ಸ್ವಾವಲಂಬನೆ ಪಡೆಯಲು ಸಾದ್ಯ ಎಂದು ಕರೆ ನೀಡಿದ ಡಾ. ಬಾಬು ಜಗಜೀವನರಾಮರ ಕಾರ್ಯ ಶ್ರೇಷ್ಠವಾದುದು
ಎಂದು ಕಂದಾಯ ಉಪವಿಬಾಗಾಧಿಕಾರಿ ಅಬೀದ ಗದ್ಯಾಳ ಹೇಳಿದರು.
ಅವರು ಪಟ್ಟಣದ ಮಿನಿ ವಿಧಾನಸೌಧದಲ್ಲಿ ನಡೆದ ಡಾ.
ಬಾಬು ಜಗಜೀವನರಾಮದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತದ ಉಪಪ್ರಧಾನಿಯಾಗಿ, ಕೇಂದ್ರ ಸರಕಾರದಲ್ಲಿ ವಿವಿಧ ಮಂತ್ರಿಗಳಾಗಿ ದೇಶದಲ್ಲಿರುವ ಜಾತಿ ಪದ್ದತಿ ಕೆಡುಕುಗಳನ್ನು
ಶೋಧಿಸಿ ದೂರ ಮಾಡಿ ಬದಲಾವಣೆ ತರುವ ಕೆಲಸ
ಮಾಡಿದರು ಎಂದರು.
ತಹಸೀಲ್ದಾರ ಮಂಜುಳಾ ನಾಯಕ, ಸಮಾಜ ಕಲ್ಯಾಣ
ಅಧಿಕಾರಿ ಬಿ.ಜೆ.ಇಂಡಿ, ಚಂದ್ರಶೇಖರ ಹೊಸಮನಿ
ಮಾತನಾಡಿದರು. ಚುನಾವಣೆ ಶಿರಸ್ತೆದಾರ ಆರ್.ಬಿ. ಮೂಗಿ, ಎಂ.ಬಿ.ಕೊಡತೆ, ಎಸ್.ಆರ್.ಮುಜಗೊಂಡ, ಪ್ರದೀಪ ಡೊಳ್ಳಿನ, ಶಿವು ಬಗಲಿ ,ರಮೇಶ ಧರೆಣ್ಣನವರ, ಅಮರ ಬಾಸೂತಕರ,ದತ್ತಾ ಬಂಡೆನವರ, ರಾಜು
ಪಡಗಾನೂರ, ಮೀರಾ ವಾಘಮೋರೆ ಮತ್ತಿತರಿದ್ದರು.
ಇಂಡಿ ಪಟ್ಟಣದ ಮಿನಿ ವಿಧಾನಸೌಧದಲ್ಲಿ ಡಾ. ಬಾಬು ಜಗಜೀವನರಾಮ ಜಯಂತಿ ಕಾರ್ಯಕ್ರಮದಲ್ಲಿ ಎಸಿ
ಅಬೀದ ಗದ್ಯಾಳ ಮಾತನಾಡಿದರು.
ಯುಗ ಯುಗ ಕಳೆದರೂ ಮರಳಿ ಬರುವ ಯುಗಾದಿ ಭೂಮಿಗೆಲ್ಲ ಮುದ ನೀಡುವ, ಒಣಗಿದ ಮರಗಿಡಗಳಿಗೆಲ್ಲ ಹೊಸ ಚಿಗುರು,ಹೊಸ ಹುಮ್ಮಸ್ಸು ನೀಡುವ ನಿಸರ್ಗ ನಮ್ಮೆಲ್ಲರ ಬಾಳಿನಲ್ಲಿಯ ಕಹಿಯನ್ನೆಲ್ಲ ಕಳೆದು ಸಿಹಿಯನ್ನು ನೀಡಲಿ.
ಸುಖ,ಸಂತೋಷ, ಆಸೆಗಳೆಲ್ಲ ಚಿಗುರಿ ಹೆಮ್ಮರವಾಗಲಿ.
ಮರಳಿ ಬಂದಿದೆ ಯುಗಾದಿ ತಂದಿದೆ ಹೊಸ ವರುಷದ ಆದಿ ತೋರಲಿ ಹೊಸ ವರುಷಕ್ಕೆ ಹಾದಿ ನೀಡಲಿ ನಮ್ಮೆಲ್ಲರ ಬಾಳಿಗೂ ಭದ್ರ ಬುನಾದಿ ಯುಗಾದಿ.
ಯುಗಾದಿ ಹಬ್ಬದ ಶುಭಾಶಯಗಳು
Editor : ಶಂಕರಲಿಂಗ ಜಮಾದಾರ, ವೈಸ್ ಆಫ್ ಜನತಾ
MoB :9972400321/8618981392
🌹🌹💐🙏🏻🙏🏻💐🌹🌹