ಸ್ವಾರ್ಥಕ್ಕಾಗಿ ನಾಡು, ನುಡಿ, ಗಡಿ, ಜಲ ರಕ್ಷಕರನ್ನು ಬಂದಿಸುವುದು ಸರಿನಾ..? ಕನ್ನಡ ರಕ್ಷಣೆಗಾಗಿ ರಾಜಕಾರಣಿ ಪಾತ್ರ ಅರ್ಥವಾಗುತ್ತೆ..! ಶ್ರೀಶೈಲ ಮುಳಜಿ
ಇಂಡಿ: ರಾಜ್ಯದಲ್ಲಾಗುವ ಪ್ರತಿಯೊಂದು ಅನ್ಯಾಯದ
ಕಾರ್ಯಗಳಿಗೆ ಧ್ವನಿ ಎತ್ತುವ ಕಾರ್ಯ ಮೊದಲು
ಮಾಡುವುದು ಕರ್ನಾಟಕ ರಕ್ಷಣಾ ವೇದಿಕೆಯ
ಕಾರ್ಯಕರ್ತರು ಎಂದು ಕರವೇ ರಾಜ್ಯ ಸಂಚಾಲಕ
ಶ್ರೀಶೈಲ ಮುಳಜಿ ಹೇಳಿದರು. ಗುರುವಾರ ಪಟ್ಟಣದ ಶಂಕರ ಪಾರ್ವತಿ ಮಂಗಲ ಕಾರ್ಯಾಲಯದ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳ ಸಂಘಟನಾ ಸಭೆಯ ನೇತೃತ್ವವಹಿಸಿ
ಅವರು ಮಾತನಾಡಿದರು.
ಕನ್ನಡ ನಾಡು-ನುಡಿಗೆ ಅನ್ಯಾಯವಾಗುತ್ತದೆ ಎಂಬ ಶಬ್ದ
ಕಿವಿಗೆ ಬಿದ್ದರೆ ಸಾಕು ಕರವೇ ಕಾರ್ಯಕರ್ತರು
ಆಕ್ರೋಶಗೊಂಡು ಹೋರಾಟಕ್ಕೆ ಇಳಿಯುತ್ತಾರೆ.
ಹಲವು ರಾಜಕಾರಣಿಗಳು ಹೋರಾಟ ಹತ್ತಿಕ್ಕುವ
ಕೆಲಸಗಳನ್ನೂ ಮಾಡುತ್ತಾರೆ. ಕರವೇ ಕಾರ್ಯಕರ್ತರ ಬಂಧನವೂ ಆಗುತ್ತದೆ. ಆದರೂ ಹೋರಾಟ ನಿಲ್ಲಲ್ಲ. ಈ ನಾಡು ನುಡಿಗಾಗಿ ಕರವೇ ಕಾರ್ಯಕರ್ತರು ಜೀವ ನೀಡಲು ಸಹ ಮುಂದಾಗುತ್ತಾರೆ ಎಂದರು.
ಅನ್ಯಾಯದ ವಿರುಧ್ಧ ಹೋರಾಡಲು ಕರವೇ
ಕಾರ್ಯಕರ್ತರು ಸಂಘಟನಾತ್ಮಕವಾಗಿ ಹೋರಾಟ
ಮಾಡಬೇಕಾಗುತ್ತದೆ. ನಾರಾಯಣಗೌಡ್ರು ಹಾಗೂ
ಪ್ರವೀಶೆಟ್ಟಿ ಅವರ ಸಂಘಟನೆಗಳು ಎರಡಿರಬಹುದು
ಆದರೆ ಇಬ್ಬರ ಆಶಯ ಒಂದೇ ಆಗಿದೆ. ಆ ದಿಸೆಯಲ್ಲಿ
ಮೊದಲು ನಾವೆಲ್ಲ ಸಂಘಟಿತರಾಗಬೇಕಾಗಿದೆ. ಅಕ್ರಮ
ಮರಳು ಗಣಿಗಾರಿಕೆ, ನಾಡದ್ರೋಹಿ ಹೇಳಿಕೆ
ಕೊಡುವವರಿಗೆ, ಕನ್ನಡ ನಾಡನ್ನು ಅತಿಕ್ರಮಣ
ಮಾಡುವವರಿಗೆ, ಕನ್ನಡ ಭಾಷೆಗೆ ಮಸಿ ಬಳೆಯುವವರಿಗೆ
ನಾವೆಲ್ಲ ಹೊರಾಟದ ಮೂಲಕ ತಕ್ಕ ಪಾಠ ಕಲಿಸಲು
ಮುಂದಾಗಬೇಕಿದೆ ಎಂದರು.
ಇಂಡಿ ಒಂಕಾರಾಶ್ರಮದ ಡಾ. ಸ್ವರೂಪಾನಂಧ ಶ್ರೀಗಳು
ಆಶೀರ್ವಚನ ನೀಡಿ, ನಾಡು-ನುಡಿಗಾಗಿ ಕರವೇ
ಕಾರ್ಯಕರ್ತರು ಹೋರಾಟ ನಡೆಸುತ್ತಾರೆ. ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ ಕನ್ನಡಪರ ಹೋರಾಟ
ಮಾಡುವವರನ್ನು ಬಂಧಿಸುವುದು ಸರಿಯಲ್ಲ.
ಕನ್ನಡಪರ ಹೋರಾಟಗಾರರನ್ನು ಸರಕಾರ ಈ
ಕೂಡಲೆ ಬಿಡುಗಡೆಗೊಳಿಸಬೇಕೆಂದರು.
ಕರವೇ ಜಿಲ್ಲಾಧ್ಕ್ಷ ಬಸವರಾಜ ತಾಳಿಕೋಟಿ, ಬಸವರಾಜ
ಮಾರನಭಾವಿ, ಶಿವಾನಂದ ಮಲಕಗೊಂಡ, ಅಶೋಕ
ಭೂಸನೂರ, ಸದ್ದಾಂ ಆಗೂರ, ಶಿವು ಬಗಲಿ, ಆನಂದ
ಪವಾರ, ದಯಾನಂದ ಉಮರಾಣಿ, ಮಾದೇವ
ರಾಮಗೊಂಡ, ಮಂಜು ತೇಲಿ, ಫಯಾಜ ಬಾಗವಾನ,
ಮಹೇಶ ಹಾರಿವಾಳ, ಆನಂದ ಓಜಿ, ಗಂಗಾಧರ ಗುಳೇದ,
ಶ್ರೀಕಾಂತ ರಾಠೋಡ, ಶಂಕರ ಕಾಂಬಳೆ ಮತ್ತಿತರರಿದ್ದರು.
ಇಂಡಿ: ಪಟ್ಟಣದ ಶಂಕರ ಪಾರ್ವತ ಮಂಗಲ ಕಾರ್ಯಾಲಯದ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳ ಸಂಘಟನಾ ಸಭೆಯ ನೇತೃತ್ವವಹಿಸಿ ಕರವೇ ರಾಜ್ಯ ಸಂಚಾಲಕ ಶ್ರೀಶೈಲ ಮುಳಜಿ ಮಾತನಾಡಿದರು.

ಇಂಡಿ: ಪಟ್ಟಣದ ಶಂಕರ ಪಾರ್ವತಿ ಕಾರ್ಯಾಲಯದ
ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳ ಸಂಘಟನಾ ಸಭೆಯನ್ನು ಗಣ್ಯರು ಉದ್ಘಾಟಿಸಿದರು.



















