- ಶಿವಾ ಪಿಯು ವಾಣಿಜ್ಯ ಕಾಲೇಜಿಗೆ ಅತ್ಯುತ್ತಮ ಫಲಿತಾಂಶ| ಕಾಲೇಜಿಗೆ ಮೊದಲ ಸ್ಥಾನ – ರಾಜ್ಯಕ್ಕೆ 13ನೇ ಸ್ಥಾನ
ಕಲಬುರಗಿ: ನಗರದ ಗೋದುತಾಯಿ ಕಾಲೋನಿಯಲ್ಲಿರುವ ಶಿವಾ ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆಗೈದು ಕಾಲೇಜು ಹಾಗೂ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಒಟ್ಟು 10 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗುವ ಮೂಲಕ ಕಾಲೇಜು 100% ಫಲಿತಾಂಶ ದಾಖಲಿಸಿದೆ.
ಇವರಲ್ಲಿ 4 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಹಾಗೂ 4 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳ ವೈಯಕ್ತಿಕ ಫಲಿತಾಂಶಗಳು ಹೀಗಿವೆ:
ಭರತ್ ಬಸವರಾಜ – 588/600 (98%),
ನಿಶ್ಚಲ ಹೂಗಾರ – 577/600 (96.16%),
ಪುಜ್ಞಾ ಪ್ರಭುಗೌಡ – 568/600 (94.66%),
ಮನೋಜ ಮಲ್ಲಿಕಾರ್ಜುನ – 531/600,
ಅಭಿಷೇಕ ಮಹಾಂತೇಶ – 495/600,
ಸಮರ್ಥ ಅನಿಲಕುಮಾರ – 453/600,
ಅರುಣಕುಮಾರ ರಮೇಶ – 414/600,
ರೋಹಿತ ರವಿ – 363/600.
ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಾಂಶುಪಾಲರಾದ ಅರುಣಕುಮಾರ ಅವರು ಸಂತೋಷ ವ್ಯಕ್ತಪಡಿಸಿ,
ಉಪನ್ಯಾಸಕರಾದ ಎ.ಕೆ. ರಾಠೋಡ, ಚೆನ್ನವೀರಯ್ಯ, ಐಶ್ವರ್ಯ, ಭುವನೇಶ್ವರಿ ಹಾಗೂ ಸ್ವಾತಿ ರೆಡ್ಡಿ ಅವರ ಮಾರ್ಗದರ್ಶನವನ್ನು ಶ್ಲಾಘಿಸಿದರು.
ವಿದ್ಯಾರ್ಥಿಗಳ ಸಾಧನೆಗೆ ಪಾಲಕರು ಹಾಗೂ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾರೆ



















