ವಕೀಲರ ಸಂಘಕ್ಕೆ ಅರ್ಜುನ ಕೇರೂರ ನೂತನ ಅಧ್ಯಕ್ಷ
ಅಫಜಲಪುರ:ತಾಲೂಕು ವಕೀಲರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಅರ್ಜುನ್ ಕೇರೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಸಿ.ಎಸ್.ಹಿರೇಮಠ ಘೋಷಣೆ ಮಾಡಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಇಬ್ಬರೂ ನಾಮಪತ್ರ ಸಲ್ಲಿಸಿದ್ದರು.ಆದರೆ ಒಂದು ನಾಮಪತ್ರ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಅರ್ಜುನ್ ಕೇರೂರ ಅವಿರೋಧವಾಗಿ ಆಯ್ಕೆಗೊಂಡರು.ಘೋಷಣೆ ಆಗುತ್ತಿದಂತೆ ನೂತನ ಅಧ್ಯಕ್ಷರಿಗೆ ಶಾಲು ಹೊದಿಸಿ, ಸಿಹಿ ತಿನ್ನಿಸಿ ಶುಭ ಹಾರೈಸಿದರು.
ಬಳಿಕ ನೂತನ ಅಧ್ಯಕ್ಷ ಅರ್ಜುನ್ ಕೇರೂರ ಮಾತನಾಡಿ,ನನ್ನ ಮೇಲೆ ಭರವಸೆ ಇಟ್ಟು ಹಿರಿಯರು ಮತ್ತು ಯುವಕರು ಒಂದಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಕ್ಕೆ ಎಲ್ಲರಿಗೂ ಚಿರಋಣಿಯಾಗಿದ್ದೇನೆ.ಮುಂದಿನ ದಿನಗಳಲ್ಲಿ ವಕೀಲರ ಸಂರಕ್ಷಣೆ ಮತ್ತು ಸಂಘದ ಬೆಳವಣಿಗೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ವಕೀಲರಾದ ಕೆ.ಜಿ.ಪೂಜಾರಿ,ವಾಸೀಮ್ ಜಾಗಿರದಾರ, ನಾಗೇಶ್ ಕೊಳ್ಳಿ,ಎಸ್.ಜಿ.ಹುಲ್ಲೂರ, ಮಂಜುನಾಥ್ ಕೊಳ್ಳಿ,ಬಿ.ಎಚ್.ದಾನಮಗುಡಿ,ಎಸ್.ಟಿ.ರಾಠೋಡ,ಎಸ್.ಜೆ.ಗುತ್ತೇದಾರ, ರಾಜೇಂದ್ರ ಸರ್ದಾರ್,ಎಂ.ಕೆ.ಪಟೇಲ್,ಅನೀತಾ ದೊಡ್ಮನಿ,ಪಿ.ಬಿ.ಪಾಟೀಲ್,ಅನೀಲ ಜಮಾದಾರ,ದತ್ತು ಪೂಜಾರಿ,ಎಂ.ಎಂ.ಸುತಾರ, ಸಂತೋಷ ಸುಜುಳೆ,ಡಿ.ಎಸ್.ಕುಂಬಾರ,ಗುರುದೇವ ಪೂಜಾರಿ,ಗೊಲ್ಲಾಳ್ ಪೂಜಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


















