ರಾಜ್ಯಮಟ್ಟದ ನಾಯಕರನ್ನು ಕರೆಸಿ ಅಂಬೇಡ್ಕರ್ ಜಯಂತಿ ಆಚರಣೆ : ಎಂವೈ ಪಟೀಲ
ಅಫಜಲಪುರ:ಯುವಕರ ಒತ್ತಾಸೆಯಂತೆ ರಾಜ್ಯಮಟ್ಟದ ನಾಯಕರನ್ನು ಕರೆಸಿ ಅಫಜಲಪುರ ಪಟ್ಟಣದಲ್ಲಿ ಬೃಹತ್ ಮಟ್ಟದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಮಾಡಲಾಗುವುದು ಎಂದು ಶಾಸಕ ಎಂ.ವೈ.ಪಾಟೀಲ್ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ 135ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಈ ಕಾಲದಲ್ಲಿ ನಡೆದಾಡುವ ದೇವರೆಂದೇ ಪ್ರಸಿದ್ಧವಾದ ಬಸವಣ್ಣ ಮತ್ತು ಅಂಬೇಡ್ಕರ್ ಕೊಡುಗೆ ಅಪಾರವಾದದ್ದು,ಸಂವಿಧಾನದ ಆಶಯದಂತೆ 140 ಕೋಟಿ ಜನ ನಡೆದುಕೊಳ್ಳುತ್ತಿದ್ದಾರೆ ಎಂದರು.
ಪಂಚಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಪ್ರಕಾಶ್ ಜಮಾದಾರ ಪ್ರಾಸ್ತಾವಿಕವಾಗಿ ಮಾತನಾಡಿ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಅಣ್ಣ ಬಸವಣ್ಣನವರನ್ನು ನಾವು ಗೌರವದಿಂದ ಸ್ಮರಿಸುತ್ತೇವೆ, ಏಕೆಂದರೆ ಅವರು ತಮ್ಮ ಇಡೀ ಜೀವನವನ್ನು ದೇಶದ ಜನರ ಉದ್ಧಾರಕ್ಕಾಗಿ ಸಮರ್ಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಮಹಾನ್ ಮಾನವತಾವಾದಿಗಳೆಂದು ಕರೆಯಲಾಗುತ್ತದೆ
ಈ ದೇಶದಲ್ಲಿ ಒಂದು ಕಡೆ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆದಿದ್ದರೆ, ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಸಮಾನತೆಗಾಗಿ ಹೋರಾಟ ನಡೆಸಿದರು. ಅಲ್ಲದೆ, ಬಡವರು ಮತ್ತು ಶೋಷಿತರ ಪರ ನಿಂತು ಅವರ ಧ್ವನಿಯಾಗಿ ಕಾರ್ಯನಿರ್ವಹಿಸಿದರು ಎಂದರು.
ಜಿಪಂ ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ್ ಮಾತನಾಡಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ ನಾಟೀಕಾರ ಮಾತನಾಡಿ,ಮೇಲ್ವರ್ಗದ ಜನ ಅಧಿಕಾರದಲ್ಲಿದ್ದು ಕೆಳವರ್ಗದ ಜನರಿಗೆ ನಿರಂತರವಾಗಿ ಅನ್ಯಾಯ ಮಾಡುತ್ತಿದ್ದಾರೆ.ಆದರೆ ಚುನಾವಣೆಯಲ್ಲಿ ತಮ್ಮ ರಾಜಕೀಯ ಲಾಭಕ್ಕಾಗಿ ಕೆಳವರ್ಗದವರನ್ನು ಬಳಸಿಕೊಳ್ಳುತ್ತಿದ್ದಾರೆ ಅಷ್ಟೇ.ಕೆಳವರ್ಗದ ಜನರನ್ನು ಉದ್ದಾರ ಮಾಡಲು ಇವರಿಗೆ ಇಚ್ಛಾಶಕ್ತಿ ಇಲ್ಲ,ಸಂವಿಧಾನದ ಆಶಯದಂತೆ ಎಲ್ಲಾ ಸಮುದಾಯಗಳಿಗೂ ಸಮನಾದ ಅವಕಾಶಗಳು ಸಿಗಬೇಕಾಗಿದೆ.ಶಿಕ್ಷಣ ಜತೆಗೆ ಆರ್ಥಿಕವಾಗಿ ಸದೃಢರಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಪಿಯುಸಿ ಪರೀಕ್ಷೆ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ, ರಕ್ತದಾನ ಶಿಬಿರ,ಅನ್ನದಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.ತಹಶೀಲ್ದಾರ್ ಸಂಜೀವಕುಮಾರ ದಾಸರ,ಚಂದ್ರಶೇಖರ ಕರಜಗಿ, ಪಪ್ಪು ಪಟೇಲ್,ಶಿವರಾಜ್ ಬಾದನಳ್ಳಿ,ರವಿ ಶೇಟ್ಟಿ,ಸಿದ್ದಾರ್ಥ್ ಬಸರಗಿಡ, ಸಿದ್ದು ಸಿರಸಗಿ,ಪ್ರಭಾವತಿ ಮೇತ್ರಿ, ರಮೇಶ್ ಪೂಜಾರಿ, ಮಲ್ಲಿಕಾರ್ಜುನ ಖರ್ಗೆ, ಸುಭಾಷ್ ರೂಗಿ,ಎಸ್.ಎಸ್.ಪಾಟೀಲ್,ಶರಣು ಕುಂಬಾರ ,ಶಿವಾನಂದ ಗಾಡಿ ಸಾಹುಕಾರ, ಮಹಾಂತೇಶ ಬಡದಾಳ,ಮಹಾನಿಂಗ ಅಂಗಡಿ, ಭೀಮರಾಯ ಗೌರ, ಶ್ರೀಕಾಂತ ಮಾಶಾಳಕರ,ಗುಂಡಪ್ಪ ಹೊಸಮನಿ,ರಾಜು ಆರೇಕರ,ಮಾಜೀದ ಪಟೇಲ್, ಪ್ರವೀಣ್ ಕಲ್ಲೂರ,ಸಚೀನ್ ಲಿಂಗಶೆಟ್ಟಿ,ವಿಶ್ವನಾಥ್ ಮಲಘಾಣ,ಶರಣು ಈಶ್ವರಗೊಂಡ,ಅಂಬಣ್ಣಾ ನಾಯಕೋಡಿ,ಬಿ.ಎಂ.ರಾವ್,ಗೌತಮ್ ಸಕ್ಕರಗಿ,ಭಾಗಣ್ಣ ಕೊಳ್ಳಿ, ಕಲ್ಯಾಣಿ ಸಿಂದಗೇರಿ,ಅಧಿಕಾರಿಗಳಾದ ವೀರಣ್ಣ ಕೌಲಗಿ,ಲಕ್ಷ್ಮಿಕಾಂತ್ ಬಿರಾದಾರ,ಅಶೋಕ್ ನಾಯಕ,ಶರಣಬಸಪ್ಪ ಹೊಸಮನಿ,ಬಿ.ವೈ.ಗುಡಮಿ,ಕೆ.ಎಂ.ಕೋಟೆ,ಶಿವಗೊಂಡ ತಾವರಖೇಡ,ಎಸ್.ಎಚ್.ಗಡಗಿಮನಿ,ಶಂಕರಗೌಡ ಪಾಟೀಲ್, ಪ್ರವೀಣ್ ಹೇರೂರ ಉಪಸ್ಥಿತರಿದ್ದರು.



















