ಸೊಳ್ಳೆ ಕಡಿತಕ್ಕೆ ಒಳಗಾಗದಂತೆ ರಕ್ಷ ಣೆ
ಮಾಡಿಕೊಳ್ಳುವುದರಿಂದ ಮಲೇರಿಯಾ ರೋಗವನ್ನು ತಡೆಗಟ್ಟಬಹುದು
ಮಲೇರಿಯಾ ರೋಗವನ್ನು ಸಂಪೂರ್ಣ ನಿಯಂತ್ರಿಸುವಲ್ಲಿ ಪಣ ತೊಡೊಣ..!
ಅರೋಗ್ಯ ಇಲಾಖೆಯಿಂದ ವಿಶ್ವ ಮಲೇರಿಯಾ ದಿನಾಚರಣೆ ಆಚರಣೆ..!
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತ, ಮುತ್ತ ಕೊಳಚೆ ನೀರು ನಿಂತುಕೊಳ್ಳದಂತೆ ಜಾಗೃತಿವಹಿಸುವುದು. ಸೊಳ್ಳೆ ಉತ್ಪತ್ತಿಯಾಗದಂತೆ ನಿಗಾವಹಿಸುವುದು ಹಾಗೂ ಸೊಳ್ಳೆ ಕಡಿತಕ್ಕೆ ಒಳಗಾಗದಂತೆ ರಕ್ಷ ಣೆ ಮಾಡಿಕೊಳ್ಳುವುದರಿಂದ ಮಲೇರಿಯಾ ರೋಗವನ್ನು ತಡೆಗಟ್ಟಬಹುದು ಎಂದು ತಂಗಡಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸಂಗಮೇಶ ದಶವಂತ್ ಹೇಳಿದರು.
ಇಲ್ಲಿನ ಹೊರಪೇಟೆಗಲ್ಲಿಯಲ್ಲಿರುವ ತಾಲೂಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಶುಕ್ರವಾರ ವಿಶ್ವ ಮಲೇರಿಯಾ ದಿನಾಚರಣೆಯನ್ನು ಆಚರಿಸಲಾಯಿತು ದಿನಾಚರಣೆ ಅಂಗವಾಗಿ ಅವರು ಮಾತನಾಡಿ
ಹರಿಯದೆ ನಿಂತುಕೊಳ್ಳುವ ಕೊಳಚೆ ನೀರು, ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛತೆ ಇಲ್ಲದ ಸ್ಥಳಗಳಲ್ಲಿ ಮಲೇರಿಯಾ ಹರಡುವ ಸೊಳ್ಳೆಗಳು ಉತ್ಪಪತ್ತಿಯಾಗುತ್ತವೆ. ಸೊಳ್ಳೆ ಒಬ್ಬನಿಂದ ಮತ್ತೊಬ್ಬನಿಗೆ ಕಡಿಯುವ ಮೂಲಕ ಮಲೇರಿಯಾ ಸಾಂಕ್ರಾಮಿಕ ಕಾಯಿಲೆ ಬರುತ್ತದೆ. ಇಂತಹ ಸಂದರ್ಭದಲ್ಲಿ ವ್ಯಕ್ತಿಗೆ ಚಳಿ-ಜ್ವರ ಬರುವ ಲಕ್ಷ ಣ ಕಾಣಿಸಿಕೊಳ್ಳುತ್ತದೆ. ಕೂಡಲೇ ಹತ್ತಿರದಲ್ಲಿರುವ ಆಸ್ಪತ್ರೆಗೆ ಹೋಗಿ ವೈದ್ಯರಿಂದ ರಕ್ಷ ಪರೀಕ್ಷೆ ಮಾಡಿಸಿಕೊಳ್ಳುವುದರ ಜತೆಯಲ್ಲಿ ಅವರ ಸೂಚನೆಯಂತೆ ಚಿಕಿತ್ಸೆ ಗೆ ಒಳಗಾಗಬೇಕು ಎಂದು ಸಲಹೆ ನೀಡಿದರು.
ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷ ಣಾಧಿಕಾರಿ ಅನುಸೂಯಾ ತೇರದಾಳ ಮಾತನಾಡಿ, ಮಲೇರಿಯಾ ರೋಗವನ್ನು ಸಂಪೂರ್ಣ ನಿಯಂತ್ರಿಸುವಲ್ಲಿ ಪಣ ತೊಡೊಣ, ಮಲೇರಿಯಾ ನಮ್ಮೊಂದಿಗೆ ಕೊನೆಗೊಳ್ಳುತ್ತದೆ: ಮರುಹೂಡಿಕೆ ಮಾಡಿ, ಮರುಕಲ್ಪಿಸಿಕೊಳ್ಳಿ, ಪುನಃ ಪ್ರಜ್ವಲಿಸಿ ಎಂಬ ಈ ಸಾಲಿನ ಘೋಷಣೆ ಹೇಳುತ್ತಾ ಮನೆ ಸುತ್ತಲಿನ ಪರಿಸರ ಸ್ವಚ್ಚವಾಗಿಟ್ಟುಕೊಳ್ಳುವುದರ ಜೊತೆಗೆ ಮನೆಯಲ್ಲಿ ಮತ್ತು ಮನೆ ಸುತ್ತಮುತ್ತ ಸೊಳ್ಳೆಗಳು ನಿಂತ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಸೊಳ್ಳೆಗಳ ಸಂತತಿ ಕಡಿಮೆ ಮಾಡಲು ಪರಿಸರದಲ್ಲಿ ಹಾಗೂ ಮನೆಯ ಸುತ್ತಮುತ್ತಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸ್ವಯಂ ರಕ್ಷ ಣಾ ವಿಧಾನಗಳಾದ ಸೊಳ್ಳೆ ಪರದೆ, ಬೇವಿನ ಸೊಪ್ಪಿನ ಹೊಗೆ, ಸೊಳ್ಳೆ ಬತ್ತಿ ಹಾಗೂ ಸೊಳ್ಳೆ ಬ್ಯಾಟ್ ಮುಖಾಂತರ ಸೊಳ್ಳೆಗಳನ್ನು ನಿಯಂತ್ರಿಸಬಹುದೆಂದರು.
ತಾಲೂಕ ವ್ಹಿ ಬಿ ಡಿ ಮೇಲ್ವಿಚಾರಕ ಎಸ್ ಸಿ ರುದ್ರವಾಡಿ ಅವರು ಶ್ರೀ ಸಿದ್ದಗಂಗಾ ಪ್ಯಾರ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಿಂದ ಮಲೇರಿಯಾ ನಿಯಂತ್ರಣ ಕುರಿತು ವಸ್ತು ಪ್ರದರ್ಶನ ಹಾಗೂ ಚಿತ್ರವನ್ನು ಬಿಡಿಸಿವ ಸ್ಪರ್ಧೆಯನ್ನು ಏರ್ಪಡಿಸಿದ್ದರು ಸ್ಪರ್ಧೆಯಲ್ಲಿ 13 ವಿದ್ಯಾರ್ಥಿಗಳು ಭಾಗವಹಿಸಿದ್ದರು ಅದರಲ್ಲಿ ಮೂರು ಜನ ವಿದ್ಯಾರ್ಥಿಗಳು ಆಯ್ಕೆಯಾದರು ಪ್ರಥಮ ಸ್ಥಾನ ವಿದ್ಯಾರ್ಥಿ ಫಲಕನಾಜ್ ದಿತಿಯ ಸ್ಥಾನ ವಿದ್ಯಾರ್ಥಿ ರಾಜೇಶ್ವರಿ ತೃತೀಯ ಸ್ಥಾನ ವಿದ್ಯಾರ್ಥಿ ವೈಶಾಲಿ ಆಯ್ಕೆ ಆದರು ಈ ವಿದ್ಯಾರ್ಥಿನಿಯರಿಗೆ ಆರೋಗ್ಯ ಇಲಾಖೆಯಿಂದ ಸೂಕ್ತ ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು.
ಶ್ರೀ ಸಿದ್ದಗಂಗಾ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಮಲೇರಿಯಾ ದಿನಾಚರಣೆಯ ಕುರಿತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಲೇರಿಯಾ ನಿಯಂತ್ರಣ ಘೋಷಣೆಗಳನ್ನು ಕೂಗುತ್ತಾ ಜಾಥಾ ಮಾಡಿ ನಂತರ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದಲ್ಲಿ ಕಾರ್ಯಕ್ರಮ ಮಾಡಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಯಲ್ಲಪ್ಪ ಚಲವಾದಿ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎಂ ಎಸ್ ಗೌಡರ, ಎಸ್ ಎಸ್ ಸಜ್ಜನ, ಇಸ್ಮಾಯಿಲ್ ವಾಲಿಕಾರ, ಶ್ರೀ ಸಿದ್ದಗಂಗಾ ಕಾಲೇಜಿನ ಶಿಕ್ಷಕರಾದ ಮಲ್ಲಿಕಾರ್ಜುನ ಹೆಬ್ಬಾಳ, ಎಂ ಎಲ್ ನದಾಪ್, ಹಾಗೂ ಆಶಾ ಮೇಲ್ವಿಚಾರಕಿ ಪ್ರಶಿಭಾರಾಣಿ ಆಶಾ ಕಾರ್ಯಕರ್ತೆಯರು ಸೇರಿದಂತೆ ಉಪಸ್ಥಿತರಿದ್ದರು.