ಮಾ- 16 ರಂದು ಇಂಡಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ : ಎಇಇ ಮೆಂಡೆಗಾರ
ಇಂಡಿ : ವಿದ್ಯುತ್ ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಇಂಡಿ ಉಪ ವಿಭಾಗದಲ್ಲಿ ಮಾರ್ಚ್ 16 ರಂದು ಬೆಳಿಗ್ಗೆ 8 ಘಂಟೆಯಿಂದ 2 ಘಂಟೆಗೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಎಸ್ ಆರ್ ಮೆಂಡೆಗಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
110/33/11 ಕೆವ್ಹಿ ವಿ ವಿ ಕೇಂದ್ರ ಇಂಡಿ, 110/33/11 ಕೆವ್ಹಿ ವಿ ವಿ ಕೇಂದ್ರ ಹಿರೇಮಸಳಿ, 33/11 ಕೆವ್ಹಿ ವಿ ವಿ ಕೇಂದ್ರ ತಡವಲಗಾ, ತಾಂಬಾ ಮತ್ತು ನಾದ ಮೇಲೆ ಬರುವ 11ಕೆ.ವಿ ಮಾರ್ಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವುದರಿಂದ ಸಂಬಂಧಿಸಿದ ಗ್ರಾಹಕರು ಸಹಕರಿಸಲು ತಿಳಿಸಿದ್ದಾರೆ.