ಇಂಡಿ : ವೃದ್ಧೆಯ ಮನೆಯಲ್ಲಿ ಕಳ್ಳನೋರ್ವ ಕಳ್ಳತನಗೈದು ಎಸ್ಕೇಪ್ ಆಗಿರುವ ಘಟನೆ ಇಂಡಿ ತಾಲೂಕಿನ ಇಂಗಳಗಿ ಗ್ರಾಮದಲ್ಲಿ ಬುಧವಾರ ನಡೆದಿದೆ. ಇಂಗಳಗಿ ಗ್ರಾಮದ ಮಲ್ಲಮ್ಮ ಎಂಬ 65 ವರ್ಷದ ಮನೆಯಲ್ಲಿದ್ದ 1.5 ತೊಲಿ ಚಿನ್ನಾಭರಣ ಹಾಗೂ 30 ಸಾವಿರ ನಗದು ದೋಚಿ ಪರಾರಿಯಾಗಿದ್ದಾನೆ. ಅಲ್ಲದೇ, ಎದುರು ಮನೆಯ ರಾಕೇಶ್ ಶಿಂಧೆ ಕಳ್ಳತನ ಮಾಡಿದ್ದಾನೆ ಎಂದು ಮಲ್ಲಮ್ಮನ ಆರೋಪ ಆಗಿದೆ. ಮನೆಯೊಳಗೇ ನುಗ್ಗಿದ ಕಳ್ಳ ವೃದ್ಧೆಗೆ ಬಟ್ಟೆಯಿಂದ ಬಾಯಿಗೆ ಕಟ್ಟಿ ಅಲೆಮಾರಿನಲ್ಲಿನ ಹಣ ಚಿನ್ನ ದೋಚಿದ್ದಾರೆ. ಮುಖಕ್ಕೆ ಕಟ್ಟಿದ ಬಟ್ಟೆಯನ್ನು ಸರಿಸಿ ವೃದ್ಧೆ ಕೂಗಲು ಪ್ರಯತ್ನಿಸಿದಾಗ ಮಾರಕಾಸ್ತ್ರ ತೋರಿಸಿ ಬೆದರಿಸಿ ಕೊನೆಗೆ ಹೊಟ್ಟೆ ಮೇಲೆ ಕಾಲಿಟ್ಟು ಓಡಿ ಹೋಗಿದ್ದಾನೆ ಎಂದು ಮಹಿಳೆಯ ಆರೋಪ ಆಗಿದೆ. ಇಂಡಿ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.