ಮುದ್ದೇಬಿಹಾಳ; ಯುಗಾದಿ ಹಬ್ಬದ ಶುಭದಿನದಂದು ಮುದ್ದೇಬಿಹಾಳ ಪಟ್ಟಣದ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಎಡಮುರಿ ಶ್ರೀ ಗಣಪತಿಯ ಮೂರ್ತಿ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನೆರವೇರಿತು. ಈ ಪವಿತ್ರ ಕಾರ್ಯವು ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳು ಹಾಗೂ ಪಟ್ಟಣದ ಗಣ್ಯರ ಸಮ್ಮುಖದಲ್ಲಿ ಭಕ್ತಿ ಭಾವದಿಂದ ನೆರವೇರಿಸಲಾಯಿತು.
ಈ ಮೂರ್ತಿ ಪ್ರತಿಷ್ಠಾಪನೆ ವೇಳೆ, ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ. ಅನಿಲ್ ಕುಮಾರ್ ಶೇಗುಣಸಿ ಅವರ ಧರ್ಮಪತ್ನಿ ಅನುಪಮ, ವಿಜಯಮಹಾಂತೇಶ ಪವಾಡಶೆಟ್ಟಿ ಹಾಗೂ ಶ್ರೀಮತಿ ಪಾರ್ವತಿ ಪವಾಡಶೆಟ್ಟಿ ವಿಶೇಷ ಹೋಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ತಾಲೂಕ ವೈದ್ಯಾಧಿಕಾರಿ ಸತೀಶ ತಿವಾರಿ, ಮುದ್ದೇಬಿಹಾಳ ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸದಸ್ಯರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಪ್ರತಿಭಾ ಅಂಗಡಗೇರಿ, ಕರ್ನಾಟಕ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ಸಿ.ಎಲ್. ಬಿರಾದಾರ, ನಿರ್ದೇಶಕರಾದ ಸತೀಶ ಓಸ್ವಾಲ್, ಪ್ರಭುದೇವ ಕಲಬುರಗಿ, ಸಂಗಮಗೌಡ ಬಿರಾದಾರ, ಶೇಖರ ಸಜ್ಜನ, ಅಶೋಕ ನಾಡಗೌಡ, ವಿಕ್ರಮ ಓಸ್ವಾಲ್, ಡಾ. ವಿರೇಶ ಪಾಟೀಲ್ ದಂಪತಿಗಳು, ಡಾ. ಇಟಗಿ ದಂಪತಿಗಳು, ಮಹೇಶ ಕಲ್ಯಾಣಮಠ, ವಿಜಯ ಬಡಿಗೇರ,ಗೋವಿಂದರಡ್ಡಿ ಮೆದಕಿನಾಳ, ವೈದ್ಯಕೀಯ ತಂಡ ಹಾಗೂ ಪಟ್ಟಣದ ಗಣ್ಯರು ಭಾಗವಹಿಸಿದ್ದರು.
ಡಾ. ಅನಿಲ್ ಕುಮಾರ್ ಶೇಗುಣಸಿ, ನ್ಯಾಯವಾದಿ ವಿಜಯಮಹಾಂತೇಶ ಸಾಲಿಮಠ, ಜಿಓಸಿಸಿ ಬ್ಯಾಂಕ್ ಜಿಲ್ಲಾ ಅಧ್ಯಕ್ಷ ಆನಂದಗೌಡ ಬಿರಾದಾರ, ಶೂಷ್ರಕಧಿಕಾರಿ ಎಂ.ಎಸ್. ಗೌಡರ್ ಮಾತನಾಡಿ, “ಆಸ್ಪತ್ರೆಯಲ್ಲಿ ಶ್ರದ್ಧೆ ಮತ್ತು ಭಕ್ತಿಯ ಸಂಕೇತವಾಗಿ ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪನೆಯ ಬೇಡಿಕೆ ಹಲವಾರು ದಿನಗಳಿಂದ ನಾಗರಿಕರು ಹಾಗೂ ಆಸ್ಪತ್ರೆ ಸಿಬ್ಬಂದಿಗಳಿಂದ ಕೇಳಿಬರುತ್ತಿತ್ತು. ಅವರ ಸಹಕಾರದಿಂದ ಇಂದು ಈ ಮಹತ್ವದ ಕಾರ್ಯ ನೇರವೇರಲು ಸಾಧ್ಯವಾಯಿತು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಪರಶುರಾಮ ವಡ್ಡರ, ಡಾ. ಹರಿರಾಮ್, ಡಾ. ಬಸವರಾಜ ಚೌಧರಿ ಸೇರಿದಂತೆ ಆಸ್ಪತ್ರೆ ಸಿಬ್ಬಂದಿಗಳಾದ ವಿಠ್ಠಲ ಕಿಲಾರಹಟ್ಟಿ, ರಾಜ್ಮದ ಖಾಜಿ, ಎಸ್.ಎಸ್. ಮಾಗಿ, ಸಂತೋಷ ಅಂಗಡಗೇರಿ, ಶಿವಕುಮಾರ್ ಒಣರೂಳ್ಳಿ, ರಾಜೇಶ್ವರಿ ಹೊಕ್ರಾಣಿ, ಬಸಮ್ಮ ಸಾರವಾಡ, ರೇಶ್ಮಾ ಚವ್ಹಾಣ, ಬಸವರಾಜ ಬಡಿಗೇರ ಭಾಗವಹಿಸಿದ್ದರು.