ವಿವೇಕಾನಂದರ ಭಾರತದಲ್ಲಿ ನಾವೆಲ್ಲರೂ ಜನಿಸಿದ್ದೇವೆ ಇದಕ್ಕಿಂತ ಹೆಮ್ಮೆ ಮತ್ತೊಂದಿಲ್ಲ..! ನಾಗೇಶ
ಇಂಡಿ : ಜಗತ್ತಿನಲ್ಲಿ ಭಾರತವು ಅತಿ ಹೆಚ್ಚು ಯುವಕರನ್ನು ಹೊಂದಿರುವ ದೇಶವಾಗಿದೆ. ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ತುಂಬಾ ಮಹತ್ವವಾಗಿದೆ ಎಂದು ಸ್ವಾಮಿ ವಿವೇಕಾನಂದರ 161ನೇ ಜಯಂತ್ಯೋತ್ಸವದಲ್ಲಿ ಸರ್ವಜ್ಞ ಕರಿಯರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ನಾಗೇಶ ಹೆಗಡ್ಯಾಳ ಹೇಳಿದರು.
ಪಟ್ಟಣದ ಅಗರಖೇಡ ರಸ್ತೆಯ ಸರ್ವಜ್ಞ ಕರಿಯರ್ ಅಕಾಡೆಮಿ ಸಂಸ್ಥೆ ಸಭಾಭವನದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದ 161 ನೇ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತಾನಾಡಿದರು.
ವಿವೇಕಾನಂದರು ಜನಿಸಿರುವ ಭಾರತದಲ್ಲಿ ನಾವೆಲ್ಲರೂ ಜನಿಸಿದ್ದೇವೆ ಇದಕ್ಕಿಂತ ಹೆಮ್ಮೆ ಮತ್ತೊಂದಿಲ್ಲ.
ಭಾರತವು ವಿಶ್ವಗುರು ಆಗಲು ನಾವೆಲ್ಲರೂ ರಾಷ್ಟ್ರಭಕ್ತಿಯಿಂದ ಒಂದಾಗಿ ಸಾಗೋಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭೀಮರಾಯ ಬಗಲಿ ಸರ್, ಸಿದ್ದು ಸಾಹುಕಾರ್, ಇರನಗೌಡ ಪಾಟೀಲ್, ವರುಣ್ ಸೋಲಾಪುರ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು