ಅಫಜಲಪುರ: ತಾಲೂಕಿನ ಮಣ್ಣೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬೀಳ್ಕೊಡುಗೆ ಸಮಾರಂಭ ಜರುಗಿತು.
ಗ್ರಾಮ ಪಂಚಾಯತಿ ಅಧ್ಯಕ್ಷೆ ಆರತಿ ಬಸವರಾಜ ಜನ್ನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು
ಜೀವನದಲ್ಲಿ ಪ್ರಾಮಾಣಿಕವಾಗಿ ಶ್ರಮ ಪಟ್ಟು ಅಭ್ಯಾಸ ಮಾಡಿದರೆ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಎಸ್ ಎಸ್ ಎಲ್ ಸಿ, ಪರೀಕ್ಷೆಗಳಲ್ಲಿ ಒಳ್ಳೆಯ ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿ ಶಾಲೆಗೆ ಹಾಗೂ ಗ್ರಾಮಕ್ಕೆ ಕೀರ್ತಿ ತರಬೇಕು ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಹಾಲಯ್ಯ ಹಿರೇಮಠ ಮಾತನಾಡಿ ಪಾಲಕರು ತಮ್ಮ ಮಕ್ಕಳು ಎಲ್ಲದರಲ್ಲೂ ಅತ್ಯುತ್ತಮರಾಗಬೇಕೆಂದು ಕನಸು ಕಟ್ಟಿಕೊಂಡಿರುತ್ತಾರೆ. ಅವರ ಕನಸು ನನಸು ಮಾಡಲು ವಿದ್ಯಾರ್ಥಿಗಳು ನಿರಂತರ ಅಧ್ಯಯನ, ಕಠಿಣ ಪರಿಶ್ರಮದಿಂದ ಜೀವನದಲ್ಲಿ ಉತ್ತಮ ಸಾಧನೆ ಮಾಡಿದರೆ ಉಜ್ವಲ ಭವಿಷ್ಯ ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಿಕ್ಷಕ ಗೈಬುಸಾಬ ಆಳಂದ ಮಾತನಾಡಿ ಜೀವನದಲ್ಲಿ ಸಮಯ ಪಾಲನೆ ಬಹಳ ಮುಖ್ಯವಾಗಿದೆ.
ವಿದ್ಯಾರ್ಥಿಗಳು ಪ್ರತಿಯೊಂದು ಕ್ಷಣವನ್ನೂ ವ್ಯರ್ಥ ಮಾಡದೇ ವಿದ್ಯೆಯನ್ನು ಸಂಪಾದಿಸಬೇಕು.
ಶಾಲೆಯಲ್ಲಿ ಸಿಗುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಚೆನ್ನಾಗಿ ಅಭ್ಯಾಸ ಮಾಡಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಶಾಲೆ ಹಾಗೂ ಗ್ರಾಮಕ್ಕೆ ಕೀರ್ತಿ ತರಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಬಿ ರಾಜು ಬೆನಕನಹಳ್ಳಿ ಮುಖ್ಯೋಪಾಧ್ಯಾಯ, ಸುರೇಶ ಕೋರಚಗಾಂವ ಮುಖಂಡರಾದ ಅಪ್ಪಾಸಾಬ ಹೊಸೂರಕರ ಬಸವರಾಜ ಜನ್ನಾ ಮಲಕಣ್ಣ ಹೊಸೂರಕರ, ಮಹಾದೇವ ಪ್ಯಾಟಿ, ಶರಣಪ್ಪ ನಾವದಗಿ, ಶರಣು ತಾರಾಪುರ, ಶ್ರೀಕಾಂತ ಮುಜಗೊಂಡ ಸಂಗನಬಸವ ಆಲೂರ ನಂದೇಶ ಪ್ಯಾಟಿ,
ಬಶೀರ್ ಅಹ್ಮದ್ ಶೇಖ,ಗಂಗಾಧರ ಸಂಖ, ಶಿಕ್ಷಕರಾದ ಗೈಬುಸಾಬ ಆಳಂದ ಮಲ್ಲಪ್ಪ ಚಲವಾದಿ ಚನ್ನನಗೌಡ ಮಾಲಿಪಾಟೀಲ,ರಾಯಗೊಂಡಪ್ಪ ಅಂಜುಟಗಿ ಶ್ರೀಶೈಲ
ಸನದಿ, ದತ್ತಪ್ಪ ಡೊಂಬಾಳೆ,ಸಲೀಮ ಜಮಾದಾರ
ಅಲ್ಲಾಭಕ್ಷ ಚೌಧರಿ ಮರೆಪ್ಪ ಶಿಂಧೆ ನಾಗಣ್ಣ ಡಾಂಗೆ ಭಾಗೀರಥಿ ಬಿರಾದಾರ,ಶೈಲಾ, ಎಚ್ ಎಸ್, ವಿಜಯಲಕ್ಷ್ಮಿ ಭಾವಿ, ವಿಜಯಲಕ್ಷ್ಮಿ ವಿದ್ಯಾಸಾಗರ ಸೇರಿದಂತೆ ವಿದ್ಯಾರ್ಥಿಗಳಿದ್ದರು.
ವರದಿ: ಉಮೇಶ್ ಅಚಲೇರಿ
ವಾಯ್ಸ್ ಆಫ್ ಜನತಾ ಕಲಬುರಗಿ: