ಚಿಕ್ಕ ಬೇವನೂರ ಸರಕಾರಿ ಆಸ್ವತ್ರೆಯಲ್ಲಿ ಸ್ವಚ್ಛತ ಅಭಿಯಾನ”
ಇಂಡಿ: ನಿಂತ ನೀರಿನಿಂದ ಮಲೇರಿಯಾ ರೋಗ ಹರಡುತ್ತದೆ. ಕಾರಣ ತಮ್ಮ ಮನೆಯ ಹಾಗೂ ಪರಿಸರ ಸುಂದರವಾಗಿ ಇರುವಂತೆ ನೋಡಿಕೊಳ್ಳಬೇಕು. ಆರೋಗ್ಯವನ್ನು ಉತ್ತಮಪಡಿಸಿ ಕೊಳ್ಳಲು ಸುತ್ತಮುತ್ತ ಉತ್ತಮವಾದ ಪರಿಸರ ನಿರ್ವಹಣೆ ಮಾಡುವುದು ಅತ್ಯವಶ್ಯಕವಾಗಿದೆ ಎಂದು ಹಿರಿಯ ಆರೋಗ್ಯ ನಿರಕ್ಷಣಾಧಿಕಾರಿ ಶಿವಪುತ್ರ ಅತನೂರ (ಅಂತಗಂಗಿ) ಹೇಳಿದರು.
ತಾಲೂಕಿನ ಚಿಕ್ಕಬೇವನೂರ ಗ್ರಾಮದ ಸರಕಾರಿ ಆಸ್ಪತ್ರೆಯಲ್ಲಿ ಸ್ವಚ್ಛ ಭಾರತ್ ಅಭಿಯಾನ ಅಂಗವಾಗಿ ಶ್ರಮಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಸ್ಪತ್ರೆಯ ಹೊರಾಂಗಣ ಮತ್ತು ಆಸ್ಪತ್ರೆಯಲ್ಲಿ ಸ್ವಚ್ಛತೆಯನ್ನು ಪ್ರತಿಯೊಬ್ಬರು ಕಾಪಡಬೇಕು. ಆಸ್ವತ್ರೆ ಸ್ವಚ್ಛಯಾಗಿ ನಿರ್ಮಾಣ – ವಾಗಬೇಕು ಎಂಬ ಗುರಿಯನ್ನು ಇನ್ನೂ ತಲುಪಬೇಕಾಗಿದೆ ಎಂದರು.
ವೈದ್ಯಾಧಿಕಾರಿ ಡಾ. ಪ್ರಶಾಂತ ದುಮಗೊಂಡ ಮಾತನಾಡಿದ ಅವರು, ಮನೆಯ ಹಾಗೂ ನಮ್ಮ ಸೂತ್ತಮುತ್ತಲಿನ ಸ್ವಚ್ಚತೆ ಮತ್ತು ಪರಿಸರ ನೈರ್ಮಲ್ಯದ ಕುರಿತು ಆಗಾಗ್ಗೆ ಚರ್ಚೆಗಳನ್ನು ಆಗಬೇಕು.
ಆರೋಗ್ಯ ಇಲಾಖೆಯ ಸಿಬ್ಬಂದಿವರಿಗೆ ಸ್ವಚ್ಛತೆ ಕಡೆ ಗಮನ ಹರಿಸಬೇಕು ಎಂದರು.
ಹೆಚ್ ಆಯ್ ಓ ಅಧಿಕಾರಿ ರಾಜು ದಸವಂತ ಹಾಗೂ ಪ್ರದೀಪ ಬೂದಿಹಾಳ ಮಾತನಾಡಿದ ಅವರು, ಸ್ವಚ್ಛತೆ ಇದ್ದ ಆ ಕಡೆ ದೇವರು ಇರುತ್ತಾನೆ ಎಂದು ಹಿರಿಯರ ಮಾತು ಆದರೆ ತಮ್ಮ ಸುತ್ತಮುತ್ತಲಿ ಪರಿಸರ ಸ್ವಚ್ಛತೆ ಇದ್ದರೆ ಸಂಪೂರ್ಣ ಆರೋಗ್ಯವಂತರಾಗಿರಲು ಸಾಧ್ಯ ಎಂದರು.
ಆರೋಗ್ಯ ಅಧಿಕಾರಿ ಮಾರುತಿ ರಾಠೋಡ ಹಾಗೂ ಮಾಂತೇಶ ಅವರಸಂಗ ಶಂಕರ ಸಿ ಹೆಚ್ ಓ ಅವರು ಮಾತನಾಡಿ ಕುಡಿಯುವ ನೀರಿನ ಟ್ಯಾಂಕ್, ಆಹಾರ ತಯಾರಿಸುವ ಪಾತ್ರೆಗಳು, ಅಡುಗೆಮನೆ, ಇತರೆ ಕೊಠಡಿ, ಊಟಕ್ಕೂ ಮುನ್ನ ಮತ್ತು ನಂತರ ಕೈ ತೊಳೆಯುವ ವಿಧಾನ, ಶೌಚಾಲಯಗಳನ್ನು ಜೊತೆ ಸೇರಿ ಸಕಾಲಕ್ಕೆ ಸ್ವಚ್ಛ ಮಾಡುತ್ತಿರಬೇಕು. ಸುತ್ತ ಮುತ್ತಲು ಅಕ್ಕಪಕ್ಕದಲ್ಲಿ ಗಿಡಗಳನ್ನು ನೆಟ್ಟು ನೀರು ಗೊಬ್ಬರ ಹಾಕಿ ಪೋಷಿಸುವ ಕೆಲಸ ಮಾಡಬೇಕು ಎಂದರು.
ಸಿ ಹೆಚ್ ಓ. ಶಿವಾನಂದ, ಸಿ ಹೆಚ್ ಓ . ಪ್ರೀಯಾಂಕ, ವಿದ್ಯಾ, ಪಾರ್ವತಿ, ಎಸ್.ಎ. ಶೇಖ, ಟಿ.ಎ.ಶೇಖ, ಕಲ್ಪನ , ಸಂಜೀವಕುಮಾರ, ಅಕ್ಷಯ, ಸಿಬ್ಬಂದಿಯವರು ಸೇರಿದಂತೆ ಆಸ್ಪತ್ರೆ ಸ್ವಚ್ಛಗೊಳಿಸಿದರು. ಬಸಲಿಂಗ ಅಂಜುಟಗಿ ಸ್ವಾಗತಿಸಿ .