ಡಿ-30 ದೇವರಹಿಪ್ಪರಗಿಯಲ್ಲಿ ಎಸಿ ನೇತೃತ್ವದಲ್ಲಿ ಜನಾಭಿಪ್ರಾಯ ಸಂಗ್ರಹಣೆ..! ಜನರ ಅಭಿಪ್ರಾಯವೇನು ಗೊತ್ತಾ..!
ದೇವರಹಿಪ್ಪರಗಿ : ಇಂಡಿ ಪ್ರತ್ಯೇಕ ಜಿಲ್ಲೆ ಸೃಜಿಸುವ ಹಿನ್ನೆಲೆಯಲ್ಲಿ ದೇವರಹಿಪ್ಪರಗಿ ತಾಲ್ಲೂಕಿನಲ್ಲಿ ಕಂದಾಯ ಇಲಾಖೆ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಅವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ ಜನಾಭಿಪ್ರಾಯ ಸಂಗ್ರಹದಲ್ಲಿ ಜನರ ಅಭಿಪ್ರಾಯವೇನು ಗೊತ್ತಾ..?
ಹೌದು ಶನಿವಾರ ದೇವರ ಹಿಪ್ಪರಗಿ ಪಟ್ಟಣದಲ್ಲಿ ನಡೆದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ತಾಲ್ಲೂಕಿನ ಹಾಗೂ ವಿವಿಧ ಗ್ರಾಮದ ಮುಖಂಡರು, ರಾಜಕೀಯ ಮುಖಂಡರು, ಚಿಂತಕರು ಸಾಹಿತಿಗಳು, ಹಿತೈಷಿಗಳು ಸಭೆಯಲ್ಲಿ ಭಾಗವಹಿಸಿ ಹೊಸ ಜಿಲ್ಲೆಯಾಗುವುದಾದರೆ ದೇವರಹಿಪ್ಪರಗಿ ತಾಲ್ಲೂಕನ್ನೇ ಜಿಲ್ಲಾ ಕೇಂದ್ರ ಮಾಡಲಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ, ದೇವರಹಿಪ್ಪರಗಿ ವಿಧಾನ ಸಭಾ ಮತಕ್ಷೇತ್ರದ ಕಾಂಗ್ರೆಸ್ ಪರಾಜೀತ ಅಭ್ಯರ್ಥಿ ಶರಣಪ್ಪ ಸುಣಗಾರ ಮಾತಾಡಿದ ಅವರು,
ಇಂಡಿ ಜಿಲ್ಲಾ ಕೇಂದ್ರ ಮಾಡಲು ಸರಕಾರದ ಪ್ರಸ್ತಾವನೆ ಬಂದಿದ್ದು, ಅದಕ್ಕೆ ತಾಲ್ಲೂಕಿನ ಹಿತೈಷಿಗಳು, ಚಿಂತಕರು ಮತ್ತು ನಾಗರಿಕರು ಸೂಕ್ತ ಸಲಹೆ ಮತ್ತು ದೇವರಹಿಪ್ಪರಗಿ ಜಿಲ್ಲಾ ಕೇಂದ್ರ ಮಾಡಲು ಮನವರಿಕೆ ಮಾಡಿದ್ದು ಯೋಗ್ಯವಾಗಿದೆ ಎಂದು ಹೇಳಿದರು.