ಇಂಡಿ : ಎಸ್ ಎಸ್ ಪ್ಯಾರಾ ಮೆಡಿಕಲ್ ಕಾಲೇಜು ಹಾಗೂ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತಾಶ್ರದಲ್ಲಿ ಜರುಗುವ ವಾರ್ಷಿಕ ಸ್ನೇಹ ಸಮ್ಮೇಳನದ ಹಬ್ಬದ ನಿಮತ್ಯವಾಗಿ ಚಂದನ ವಾಹಿನಿಯ ಹಾಸ್ಯ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಹಾಗೂ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ ಎಂದು ಅಧ್ಯಕ್ಷ ಎಸ್.ಬಿ ಕೆಂಬೊಗಿ ಹೇಳಿದರು.
ಪಟ್ಟಣದ ಪ್ರತಿಷ್ಠಿತ ಎಸ್ ಎಸ್ ಪ್ಯಾರಾಮೆಡಿಕಲ್ ಕಾಲೇಜು ಕಛೇರಿಯಲ್ಲಿ ಸುದ್ದಿ ಗೋಷ್ಟಿ ಮಾತನಾಡಿ ಅವರು, ಫೆ- 24 ಸಾಯಂಕಾಲ 4 ಗಂಟೆಗೆ ಕಾಲೇಜು ಆವರಣದಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ಇನ್ನೂ ದಿವ್ಯ ಸಾನಿಧ್ಯ ಷ.ಬ್ರ. ಅಭಿನವ ರಾಚೋಟೇಶ್ವರ ಶಿವಾಚಾರ್ಯರು ಹಿರೇಮಠ ತಡವಲಗಾ,ಉದ್ಘಾಟನೆ ಶಾಸಕ ಯಶವಂತರಾಯಗೌಡ ಪಾಟೀಲ, ಉಪನ್ಯಾಸ ಎ.ಆರ್ ಹೆಗ್ಗಣದೊಡ್ಡಿ , ಹಿಂದುಳಿದ ವರ್ಗದ ಜಿಲ್ಲಾ ಅಧಿಕಾರಿ ಈರಣ್ಣ ಅಶಾಪುರ,ಮುಖ್ಯ ಅತಿಥಿ ಬಿಇಒ ವಸಂತ ರಾಠೋಡ,ಜಿಲ್ಲಾ ರೈತ ಮೂರ್ಚಾ ಅಧ್ಯಕ್ಷ ಕಾಸುಗೌಡ ಬಿರಾದಾರ, ಜೆಡಿಎಸ್ ಮುಖಂಡ ಬಿ.ಡಿ ಪಾಟೀಲ ಪಾಲ್ಗೊಳ್ಳಲಿದ್ದಾರೆ. ಇನ್ನೂ ವಿಶೇಷವಾಗಿ ವಾರ್ಷಿಕೋತ್ಸವ ಬಂತು ಅಂದ್ರೆ ಶಾಲಾ ಮಕ್ಕಳಿಗೆ ಶಿಕ್ಷಕರಿಗೆ ವಿಶೇಷ ಹಬ್ಬವಾಗಿರುತ್ತದೆ. ಸುಮಾರು ದಿನಗಳ ಕಾಲ ತರಬೇತಿ ಪಡೆದಿರುವ ಮಕ್ಕಳಲ್ಲಿ ಸೂಕ್ತ ಪ್ರತಿಭೆ ಹೊರ ಹಾಕುವ ಶ್ರಮದ ದೊಡ್ಡ ಹಬ್ಬವೇ ಆಗಿರುತ್ತದೆ. ಇಂಡಿ ಪಟ್ಟಣದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಕ್ಕಳ ವಾರ್ಷಿಕೋತ್ಸವ ಹಬ್ಬದಲ್ಲಿ ಪಾಲ್ಗೊಳ್ಳುಬೇಕು ಎಂದು ತಿಳಿಸಿದರು.