ರಾಜ್ಯ ಪ್ರಶಸ್ತಿ ವಿಜೇತ ಇಂಡಿಯ ಶಿಕ್ಷಕಿ ಶಶಿಕಲಾ
ಇಂಡಿ : ತಾಲೂಕಿನ ನಾದ ಕೆಡಿ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿಜ್ಞಾನ ವಿಷಯದ ಶಿಕ್ಷಕಿ ಶಶಿಕಲಾ ಲಕ್ಷö್ಮಣ ಬಡಿಗೇರ ರಾಜ್ಯ ಪ್ರಶಸ್ತಿ ದೊರೆತಿದೆ.
ಅವರಿಗೆ ಇಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ಶಶಿಕಲಾ ಇವರ ಮಾರ್ಗದರ್ಶನದಲ್ಲಿ ಮಾಡಿದ ಕ್ರಾಪ್ ಕಟರ್ ಮಾದರಿ ರಾಷ್ಟç ಮಟ್ಟದ ಇನ್ ಸ್ಪಾಯರ್ ಆವಾರ್ಡ ಸ್ಪರ್ಧೇಯಲ್ಲಿ ರಾಷ್ಟçಕ್ಕೆ ಪ್ರಥಮ ಸ್ಥಾನ ಪಡೆದು ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಅವರಿಗೆ ತಾಲೂಕು ಜಿಲ್ಲೆಯ ಶೈಕ್ಷಣ ಕ ಮತ್ತು ಕಸಾಪ ಪ್ರಶಸ್ತಿಗಳು ಮತ್ತು ಶಿಕ್ಷಣ ಇಲಾಖೆಯಿಂದ ತಾಲೂಕಾ ಮತ್ತು ಜಿಲ್ಲಾ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇವರು ಮಾಡಿದ ವಿಜ್ಞಾನದ ವಸ್ತು ಪ್ರದರ್ಶನಗಳು ತಾಲೂಕು,ಜಿಲ್ಲಾ, ರಾಜ್ಯ ಮಟ್ಟದಲ್ಲಿ ಪ್ರದರ್ಶನಗೊಂಡು ರಾಜ್ಯ ಮಟ್ಟಕ್ಕೆ ಪ್ರಶಸ್ತಿ ಪಡೆದಿವೆ.
ಅವರಿಗೆ ರಾಜ್ಯ ಮಟ್ಟದ ಸಾವಿತ್ರಿಬಾಯಿ ಫೂಲೆ ಪ್ರಶಸ್ತಿ ಲಭಿಸಿದೆ. ಸಧ್ಯ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಭಾಜನ ರಾಗಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯ ಚಿದಂಬರ ಬಂಡಗರ ಮತ್ತು ಸಿಬ್ಬಂದಿ ಅಭಿನಂದಿಸಿದ್ದಾರೆ.
ಫೋಟೋ- ೪ ಇಂಡಿ ೦೨ ಶಶಿಕಲಾ ಬಡಿಗೇರ