ಜಿಲ್ಲೆಯಲ್ಲೇ 3 ನೇ ಇಂಜಿನಿಯರಿಂಗ್ ಕಾಲೇಜ್ ಹಲಸಂಗಿಯಲ್ಲಿ
ಇಂಡಿ: ಹಲಸಂಗಿ ಗ್ರಾಮದಲ್ಲಿ ಸೋಲಾಪೂರ ಇಂಡಿ ಮುಖ್ಯರಸ್ತೆಗೆ ಹೊಂದಿಕೊAಡು ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಿ ಗ್ರಾಮೀಣ ಭಾಗದ ಜನರಿಗೆ ಕಡಿಮೆ ದುಡ್ಡಿನಲ್ಲಿ ಉತ್ತಮ ಇಂಜನಿಯರಿAಗ ಕೋರ್ಸ ಲಭಿಸುವಂತೆ ಮಾಡಲಾಗಿದ್ದು ಇಂಡಿ ಚಡಚಣ ತಾಲ್ಲೂಕಿನ ಜನತೆ ಇದರ ಲಾಭ ಪಡೆದುಕೊಳ್ಳಬೇಕು ಎಂದು ಶ್ರೀ ಸ್ವಾಮಿ ನಾಗಭೂಷಣ ಗುರುಕುಲ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಹಿರೇಮಠ ಹೇಳಿದರು.
ಅವರು ನಗರದ ಖಾಸಗಿ ಹೋಟೆಲ್ ಆವರಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಹಲಸಂಗಿ ಗ್ರಾಮದ ಸಮೀಪ ೨೦೧೩ -೧೪ ರಿಂzದ ಎಲ್‌ಕೆಜಿ ಯಿಂದ ಪಿಯುಸಿ ವರೆಗೆ ಶಾಲಾ ಕಾಲೇಜು ಪ್ರಾರಂಭ ಮಾಡಿ ಉತ್ತಮ ಶಿಕ್ಷಣ ನೀಡಿದ್ದೇವೆ.
ಸಧ್ಯ ಇಂಜನೀಯರಿAಗದಲ್ಲಿ ಮೆಕ್ಯಾನಿಕಲ್ ಇಂಜನೀಯರಿAಗ, ಸಿವಿಲ್ ಇಂಜನೀಯರಿAಗ್, ಇಲೆಕ್ಟಿçಕಲ್ & ಇಲೆಕ್ಟಾçನಿಕ್ಸ ಇಂಜನೀಯರಿAಗ್, ಇಲೆಕ್ಟಾçನಿಕ್ಸ & ಕಮ್ಯೂನಿಕೇಶನ್ ಇಂಜನೀಯರಿAಗ್, ಕಂಪ್ಯೂಟರ್ ಸೈನ್ಸ & ಇಂಜನೀಯರಿAಗ್, ಆರ್ಟಿಫಿಸಿಯಲಿ ಇಂಟಲೀಜನ್ಸ & ಮೆಕ್ಯಾನಿಕ್ ಲರ್ನಿಂಗ್ ಕೋರ್ಸಗಳನ್ನು ತರಲಾಗಿದೆ.
ನಮ್ಮ ಜಿಲ್ಲೆ ಹಾಗೂ ಇತರ ಜಿಲ್ಲೆಗಳಲ್ಲಿನ ದೊಡ್ಡ-ದೊಡ್ಡ ಕಾಲೇಜುಗಳಲ್ಲಿ ನಮ್ಮ ಎರಡರಿಂದ ಮೂರು ಪಟ್ಟು ಹೆಚ್ಚು ಹಣ ಪಡೆದು ನಮ್ಮಂತೆಯೇ ಶೀಕ್ಷಣ ನೀಡುತ್ತಾರೆ. ಹೀಗಾಗಿ ಈ ಭಾಗದ ಬಡ ಜನರಿಗೆ ಅನುಕೂಲ ಕಲ್ಪಿಸಲು, ಬಡ ಪಾಲಕರಿಗರೆ ಅನುಕೂಲ ಮಾಡಲು ಕಡಿಮೆ ದುಡ್ಡಿನಲ್ಲಿ ಉತ್ತಮ ಶಿಕ್ಷಣ ನೀಡುವುದೊಂದೇ ನಮ್ಮ ಉದ್ದೇಶವಾಗಿದ್ದು ಈ ಭಾಗದ ಜನ ಈ ಕಾಲೇಜಿನ ಉಪಯೋಗ ಪಡೆದುಕೊಳ್ಳಬೇಕೆಂದರು.
ಈ ಕಾಲೇಜಿನಲ್ಲಿ ಕೋರ್ಸ ಮುಗಿದ ಮೇಲೆ ಕ್ಯಾಂಪಸ್ ಸೆಲೆಕ್ಷನ್‌ಸಹ ಮಾಡಿ ಕೊಡಲಾಗುತ್ತದೆ ಎಂದು ವಿವರಿಸಿದರು.
ಸಂಸ್ಥೆಯ ನಿರ್ದೇಶಕ ಆರ್. ಸರವಣನ್, ಕಾಲೇಜು ಪ್ರಾಂಶುಪಾಲೆ ಡಾ. ಎಸ್. ಸೂರ್ಯಪ್ರಭಾ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಉತ್ತಮ ವ್ಯಾಸಂಗ ಮಾಡಬಹುದಾಗಿದೆ. ದೊಡ್ಡ ಕ್ಯಾಂಪಸ್ ಸಹ ಇದ್ದು ಈಗಿನ ತಂತ್ರಜ್ಞಾನದAತೆ ಪಾಠ ಭೋಧನೆ ಮಾಡಲಾಗುತ್ತದೆ ನುರಿತ ಸಿಬ್ಬಂದಿಗಳಿAದ ಪಾಠ ಭೋದನೆ ನಡೆಯುತ್ತದೆ ಎಂದರು.
ಮಾನವ ಹಕ್ಕುಗಳ ರಕ್ಷಣಾ ಸಮಿತಿ ತಾಲೂಕಾ ಅಧುಯಕ್ಷ ಶಿವಾನಂದ ಕಾಮಗೊಂಡ ಮಾತನಾಡಿ, ಗಡಿ ಭಾಗದ ಮಧುರಚೆನ್ನರಂತಹ ಕವಿಗಳು ಆಗಿ ಹೋದ ಹಲಸಂಗಿಯಲ್ಲಿ ಮಲ್ಲಿಕಾರ್ಜುನ ಹಿರೇಮಠ ಅವರು ಕಡಿಮೆ ಹಣ ಪಡೆದು ಉತ್ತಮ ಶಿಕ್ಷಣ ನೀಡಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಈ ಗುರುಕುಲದ ಮೂರನೆ ಶಾಖೆ ಇದಾಗಿದ್ದು ನಮ್ಮ ತಾಲ್ಲೂಕಿನಲ್ಲಿ ಇಂಜನೀಯರಿAಗ ಕಾಳೇಜು ಇರಲಿಲ್ಲ. ಹೀಗಾಗಿ ಈ ಕಾಲೇಜಿನ ಸದುಪಯೋಗ ನಮ್ಮ ಭಾಗದ ಜನತೆ ಪಡೆದುಕೊಳ್ಳಲು ಮನವಿ ಮಾಡಿದರು.


















