ಪರವಾನಿಗೆ ಇಲ್ಲದೆ, ಪಟಾಕಿ ಮಾರುವುದನ್ನು ತಡೆಯಲು ಆಗ್ರಹಿಸಿ ಮನವಿ..!
ಇಂಡಿ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ದೊಡ್ಡ-
ದೊಡ್ಡ ಸ್ಟೇಷನರಿ ಅಂಗಡಿ ಹಾಗೂ ಕಿರಾಣಿ
ಅಂಗಡಿಗಳಲ್ಲಿಯೂ ಸಹ ನೆರೆಯ ಮಹಾರಾಷ್ಟ್ರದಿಂದ
ತರಿಸಿದ ಪಟಾಕಿಗಳು ಮಾರಲಾಗುತ್ತಿದೆ. ಅದನ್ನು
ತಡೆಗಟ್ಟಬೇಕು ಎಂದು ಆಗ್ರಹಿಸಿ ಕರ್ನಾಟಕ ಆದಿ ಜಾಂಬವ ಜನಸಂಘ (ರಿ) ಸಂಘಟನೆ ವತಿಯಿಂದ ಸೋಮವಾರ ಕಂದಾಯ ಉಪ ವಿಭಾಗಾಧಿüಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ದತ್ತಾ ಬಂಡೆನವರ್ ಮಾತನಾಡಿ, ಇಂಡಿ
ಪಟ್ಟಣ ಸೇರಿದಂತೆ ತಾಲೂಕಿನ ದೊಡ್ಡ ದೊಡ್ಡ ಹಳ್ಳಿಗಳಲ್ಲಿ
ಅಕ್ರಮವಾಗಿ ಮಹಾರಾಷ್ಟ್ರದಿಂದ ಕಡಿಮೆ ಬೆಲೆಯಲ್ಲಿ
ಪಟಾಕಿ ಖರೀದಿಸಿ ಇಲ್ಲಿಗೆ ತಂದು ಮಾರಾಟ ಮಾಡಲಾಗುತ್ತಿದೆ. ಪಟಾಕಿ ಮಾರಾಟಕ್ಕೆ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದು, ಕೂಡಲೇ ಸಂಬಂಧಿಸಿದ ಇಲಾಖೆಯವರು ಸ್ಟೇಷನರಿ ಅಂಗಡಿ ಹಾಗೂ ಕಿರಾಣಿ ಅಂಗಡಿಗಳ ಮೇಲೆ ದಾಳಿ ನಡೆಸಿ ಅಕ್ರಮ ಪಟಾಕಿ ಗಳನ್ನು ವಶಪಡಿಸಿಕೊಳ್ಳಬೇಕು.
ಪರವಾನಿಗೆ ಇಲ್ಲದೆ ಪಟಾಕಿ ಮಾರುತ್ತಿರುವವರ ವಿರುದ್ಧ
ಶಿಸ್ತು ಕಾನೂನು ಕ್ರಮ ಕೈಗೊಳ್ಳಬೇಕು ಎಂದು
ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸತೀಶ್ ಬೋಳೇಗಾವ್, ಚಂದ್ರಶೇಖರ್ ಹೊಸಮನಿ, ಮಲ್ಲು ವಾಲಿಕರ, ಈರಣ್ಣ ಸಾಗರ್, ಭಾಗಣ್ಣ, ಬಾವಿಕಟ್ಟಿ, ಅರ್ಜುನ್ ಪಾರಶಿ, ಸೇರಿದಂತೆ ಮತ್ತಿತರರು ಇದ್ದರು.
ಇಂಡಿ: ದತ್ತಾ ಬಂಡೇನವರ ಭಾವಚಿತ್ರ.