• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಸಹಕಾರ ಅಗತ್ಯ-ಅಲ್ಲಾಭಕ್ಷ ಮಕಾನದಾರ

    ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಸಹಕಾರ ಅಗತ್ಯ-ಅಲ್ಲಾಭಕ್ಷ ಮಕಾನದಾರ

    ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ವಿಮಾ ಮೊತ್ತ ನಿಗದಿ: ಬೆಳೆ ವಿಮೆ ನೊಂದಣಿಗೆ ಅವಕಾಶ

    ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ವಿಮಾ ಮೊತ್ತ ನಿಗದಿ: ಬೆಳೆ ವಿಮೆ ನೊಂದಣಿಗೆ ಅವಕಾಶ

    ನಾನಾ ಕ್ಷೇತ್ರಗಳ ಒಂಬತ್ತು ಜನರು ತಮ್ಮ ಕುಟುಂಬ ಸಮೇತ ಈ ಓಟದಲ್ಲಿ ಪಾಲ್ಗೋಳ್ಳಲು ನೋಂದಣಿ

    ನಾನಾ ಕ್ಷೇತ್ರಗಳ ಒಂಬತ್ತು ಜನರು ತಮ್ಮ ಕುಟುಂಬ ಸಮೇತ ಈ ಓಟದಲ್ಲಿ ಪಾಲ್ಗೋಳ್ಳಲು ನೋಂದಣಿ

    ಪೋಷಕ-ಶಿಕ್ಷಕರ ಮಹಾಸಭೆಯನ್ನು ಅರ್ಥಪೂರ್ಣವಾಗಿ ಆಯೋಜಿಸಿ,ಯಶಸ್ವಿಗೊಳಿಸಲು -ಜಿಪಂ ಸಿಇಒ ರಿಷಿ ಆನಂದ ಕರೆ

    ಪೋಷಕ-ಶಿಕ್ಷಕರ ಮಹಾಸಭೆಯನ್ನು ಅರ್ಥಪೂರ್ಣವಾಗಿ ಆಯೋಜಿಸಿ,ಯಶಸ್ವಿಗೊಳಿಸಲು -ಜಿಪಂ ಸಿಇಒ ರಿಷಿ ಆನಂದ ಕರೆ

    ಸೈನಿಕ ಶಾಲೆ ಬಿಜಾಪುರ ಸೈಬರ್ ಜಾಗೃತಿ ಕಾರ್ಯಕ್ರಮ

    ಸೈನಿಕ ಶಾಲೆ ಬಿಜಾಪುರ ಸೈಬರ್ ಜಾಗೃತಿ ಕಾರ್ಯಕ್ರಮ

    ಸ್ವಯಂ ಉದ್ಯೋಗದ ಮೂಲಕ ಮಹಿಳಾ ಉದ್ಯಮಿತ್ವ” ಕರ್ಯಾಗಾರ

    ಸ್ವಯಂ ಉದ್ಯೋಗದ ಮೂಲಕ ಮಹಿಳಾ ಉದ್ಯಮಿತ್ವ” ಕರ್ಯಾಗಾರ

    ಮಕ್ಕಳಿಗೆ ಚಿತ್ರಕಲೆ ಮತ್ತು ನಿಬಂಧ ಸ್ಪರ್ಧೆ..!

    ಮಕ್ಕಳಿಗೆ ಚಿತ್ರಕಲೆ ಮತ್ತು ನಿಬಂಧ ಸ್ಪರ್ಧೆ..!

    ಬಸರಕೋಡದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 12 ಸ್ಥಾನಗಳಿಗೆ  ಅವಿರೋಧವಾಗಿ ಆಯ್ಕೆ

    ಬಸರಕೋಡದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 12 ಸ್ಥಾನಗಳಿಗೆ  ಅವಿರೋಧವಾಗಿ ಆಯ್ಕೆ

    ಟಿಪ್ಪು ಸುಲ್ತಾನರ ಧೈರ್ಯ ಮತ್ತು ದೇಶಭಕ್ತಿಯ ಗುಣಗಳುಅಳವಡಿಸಿಕೊಳ್ಳಬೇಕು..!

    ಟಿಪ್ಪು ಸುಲ್ತಾನರ ಧೈರ್ಯ ಮತ್ತು ದೇಶಭಕ್ತಿಯ ಗುಣಗಳುಅಳವಡಿಸಿಕೊಳ್ಳಬೇಕು..!

    ಮಕ್ಕಳಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕೆ : ಸಯಿದಾ ಅನೀಸ್

    ಮಕ್ಕಳಲ್ಲಿರುವ ಪ್ರತಿಭಾ ಪ್ರದರ್ಶನಕ್ಕೆ ಪ್ರತಿಭಾ ಕಾರಂಜಿ ಅತ್ಯುತ್ತಮ ವೇದಿಕೆ : ಸಯಿದಾ ಅನೀಸ್

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ಸುದ್ದಿ

      ಯೋಜನೆಗಳ ಸಮರ್ಪಕ ಅನುಷ್ಠಾನದ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆ ಮುಂದಾಗಿ -ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಸೂಚನೆ

      Voiceofjanata.in

      July 25, 2025
      0
      ಯೋಜನೆಗಳ ಸಮರ್ಪಕ ಅನುಷ್ಠಾನದ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆ ಮುಂದಾಗಿ -ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಸೂಚನೆ
      0
      SHARES
      39
      VIEWS
      Share on FacebookShare on TwitterShare on whatsappShare on telegramShare on Mail

      ಯೋಜನೆಗಳ ಸಮರ್ಪಕ ಅನುಷ್ಠಾನದ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆ ಮುಂದಾಗಿ
      -ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಸೂಚನೆ

      ವಿಜಯಪುರ ಜುಲೈ 25 : ಮಕ್ಕಳ ರಕ್ಷಣೆ ಮತ್ತು ಅವರ ಉಜ್ವಲ ಭವಿಷ್ಯಕ್ಕಾಗಿ ಸರ್ಕಾರ ವಿವಿಧ ಇಲಾಖೆಗಳ ಮೂಲಕ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದು ಈ ಯೋಜನೆಗಳನ್ನು ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಮಕ್ಕಳ ರಕ್ಷಣೆಗೆ ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಅವರು ಹೇಳಿದರು.

      ಮಕ್ಕಳ ನಿರ್ದೇಶನಾಲಯ ಬೆಂಗಳೂರು, ವಿಜಯಪುರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ವಿವಿಧ ಭಾಗಿದಾರ ಇಲಾಖೆಗಳು, ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ನಗರದ ಮಹಾನಗರ ಪಾಲಿಕೆ ಸಭಾಂಗಣದಲ್ಲಿ ನಡೆದ ಆರ್‍ಟಿಇ-2009 ಪೋಕ್ಸೋ-2012 ಹಾಗೂ ಬಾಲ ನ್ಯಾಯ ಕಾಯ್ದೆ 2015 ಅನುಷ್ಠಾನ ಹಾಗೂ ಮಕ್ಕಳಿಗೆ ಸಂಬಂಧಿಸಿದ ಕಾರ್ಯಕ್ರಮ-ಯೋಜನೆಗಳ ಕುರಿತು ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಇರುವ ಕಾಯ್ದೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ-1098 ಎದ್ದು ಕಾಣುವಂತೆ ಮಾಹಿತಿ ಫಲಕ ಅಳವಡಿಸಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಮಕ್ಕಳ ಸಭೆ ನಡೆಸಿ ನಡಾವಳಿಯನ್ನು ನಿರ್ವಹಿಸಬೇಕು. ಬಾಲ್ಯವಿವಾಹ, ಅಪೌಷ್ಠಿಕತೆ, ಬಾಲಕಾರ್ಮಿಕ ಪದ್ಧತಿ ಇಂತಹ ವಿಷಯಗಳಲ್ಲಿ ಮಕ್ಕಳಿಗೆ ಮತ್ತು ಪಾಲಕರಿಗೆ ಜಾಗೃತಿ ಮೂಡಿಸಬೇಕು. ಮಹಿಳೆಯರ ಮತ್ತು ಮಕ್ಕಳ ಕಾವಲು ಸಮಿತಿ ಕಾಲಕಾಲಕ್ಕ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಭೆ ನಡೆಸುವಂತೆ ಅವರು ಸೂಚನೆ ನೀಡಿದರು.
      ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಎಂಬುದು ಪತ್ರ ವ್ಯವಹಾರದಲ್ಲಿ ಅಳವಡಿಸಿಕೊಳ್ಳುವ ಮೂಲಕ ಬಾಲ್ಯ ವಿವಾಹ ಕುರಿತು ಜಾಗೃತಿ ಮೂಡಿಸಬೇಕು. ವಿಶೇಷವಾಗಿ ವೈದ್ಯಕೀಯ ಚೀಟಿಯಲ್ಲಿ ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧ ಕುರಿತು ಬಳಸುವಂತೆ ಒತ್ತು ನೀಡಬೇಕು. ಅನಿಮಿಯಾ ಮುಕ್ತ ಜಿಲ್ಲೆಯನ್ನಾಗಿಸಲು ಈಗಾಗಲೇ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದ್ದು, ಈ ಕುರಿತು ವ್ಯಾಪಕವಾಗಿ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ಅಪೌಷ್ಠಿಕತೆ, ತಾಯಿ-ಮಕ್ಕಳ ಮರಣ ಪ್ರಮಾಣ, ಪ್ರಸವಪೂರ್ವ ಭ್ರೂಣ ಪತ್ತೆ ನಿಷೇಧ ಕಾಯ್ದೆಯನ್ನು ಜಿಲ್ಲೆಯಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕಾಲಕಾಲಕ್ಕೆ ಸ್ಕ್ಯಾನಿಂಗ್ ಸೆಂಟರ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗಳ ಕೇಂದ್ರಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಜಿಲ್ಲೆಯ ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗವಾಡಿ ಕೇಂದ್ರಗಳಲ್ಲಿ ಅವಶ್ಯವಿದ್ದೆಡೆ ಮೂಲಭೂತ ಸೌಲಭ್ಯ, ಕಂಪೌಂಡ್ ಗೋಡೆ, ಶೌಚಾಲಯ ನಿರ್ಮಾಣಕ್ಕೆ ಕ್ರಮ ವಹಿಸಿ, ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಅವರು ಸೂಚನೆ ನೀಡಿದರು.
      ಬಾಲ್ಯ ವಿವಾಹಗಳು ಜಿಲ್ಲೆಯಲ್ಲಿ ನಡೆಯದಂತೆ ತಡೆಯಲು ಗ್ರಾಮ ಮಟ್ಟದಲ್ಲಿನ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು, ಸಂಬಂಧಿಸಿದ ಇಲಾಖೆಗಳು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚಿ ಬಾಲ್ಯವಿವಾಹಗಳು ನಡೆಯದಂತೆ ಅಗತ್ಯ ಕ್ರಮ ವಹಿಸಲು ಅವರು ಸೂಚನೆ ನೀಡಿದರು.

      ತಾಲೂಕಾ ಮಟ್ಟದಲ್ಲಿ ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ತಹಶೀಲ್ದಾರಗಳ ಜವಾಬ್ದಾರ ಅತ್ಯಂತ ಮಹತ್ವದ್ದಾಗಿದ್ದು, ಕಾಲಕಾಲಕ್ಕೆ ಸಭೆ ನಡೆಸಿ ಬಾಲ್ಯ ವಿವಾಹ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು. ಒಂದು ವಾರಕ್ಕಿಂತ ಹೆಚ್ಚಿನ ಅವಧಿಗೆ ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿ ಕಲೆ ಹಾಕಿ ಈ ಕುರಿತು ಪಾಲಕರಿಗೆ ತಿಳುವಳಿಕೆ ನೀಡಿ ಮರಳಿ ಮಕ್ಕಳಿಗೆ ಶಾಲೆಗೆ ಕರೆತರಲು ಕ್ರಮ ವಹಿಸುವಂತೆ ಅವರು ಸೂಚನೆ ನೀಡಿದರು.
      ಮಕ್ಕಳ ರಕ್ಷಣಾ ನೀತಿ-2016ಯನ್ವಯ ಕ್ರಮ ವಹಿಸಿ ಮಕ್ಕಳಿಗಿರುವ ಹಕ್ಕನ್ನು ರಕ್ಷಿಸಿ ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಈ ನೀತಿಯಲ್ಲಿರುವ ಅಂಶಗಳನ್ನು ಪಾಲನೆಯಾಗುತ್ತಿರುವ ಕುರಿತು ಅಧಿಕಾರಿಗಳು ಗಮನ ಹರಿಸಬೇಕು. ಮಕ್ಕಳ ಕಾಯ್ದೆ ಕುರಿತು ಅರಿವು ಮೂಡಿಸಬೇಕು. ವಿವಿಧ ವಸತಿ ನಿಲಯ, ವಸತಿ ಶಾಲೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಕಾಲಕಾಲಕ್ಕೆ ಭೇಟಿ ನೀಡಿ ನಿಲಯಗಳಲ್ಲಿ ಮಕ್ಕಳಿಗೆ ಕಲ್ಪಿಸಲಾಗುತ್ತಿರುವ ಆಹಾರ, ಮೂಲಭೂತ ಸೌಲಭ್ಯಗಳ ಪರಿಶೀಲನೆ ನಡೆಸಿ ಮಕ್ಕಳ ಹಕ್ಕು ರಕ್ಷಣೆಗೆ ಮುಂದಾಗಬೇಕು ಎಂದು ಅವರು ಹೇಳಿದರು.

      ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರು ಮಾತನಾಡಿ, ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕಾಲಕಾಲಕ್ಕೆ ಸಭೆಗಳನ್ನು ನಡೆಸಿ ಸೂಕ್ತ ಸೂಚನೆಗಳನ್ನು ನೀಡಲಾಗಿದೆ. ಶಿಕ್ಷಣ, ಆರೋಗ್ಯ, ಪೋಲಿಸ್ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯಿಂದ ವರ್ಷಪೂರ್ತಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ತಿಳುವಳಿಕೆ ನೀಡಲಾಗುತ್ತಿದೆ ಎಂದು ಹೇಳಿದರು.
      ಪ್ರತಿ ಶಾಲಾ ಕಾಲೇಜ್‍ಗಳಲ್ಲಿ ಅರಿವು ಮೂಡಿಸಲು ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಲಾಗುತ್ತಿದೆ. ಬಾಲ್ಯವಿವಾಹ, ಬಾಲಕಾರ್ಮಿಕ, ಮಕ್ಕಳಲ್ಲಿರುವ ಅಪೌಷ್ಠಿಕತೆ, ಅನಿಮಿಯಾ, ಶಾಲೆ ಬಿಟ್ಟ ಮಕ್ಕಳು ಸೇರಿದಂತೆ ಸಮಗ್ರ ಮಾಹಿತಿ ಪಡೆದು, ರೂಪರೇಷೆ ಸಿದ್ಧಪಡಿಸಿಕೊಂಡು ಯೋಜನಾಬದ್ಧವಾಗಿ ಕಾರ್ಯನಿರ್ವಹಿಸಲಾತ್ತಿದ್ದು, ಮಕ್ಕಳ ರಕ್ಷಣೆಗಾಗಿ ಆಯೋಗ ನೀಡಿರುವ ಸಲಹೆ-ಸೂಚನೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಅವರು ಹೇಳಿದರು.
      ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಮಾತನಾಡಿ, ಪಂಚಾಯತ್ ರಾಜ್ ಇಲಾಖೆಯು ಮಕ್ಕಳ ಹಿತದೃಷ್ಟಿಯಿಂದ ಆರೋಗ್ಯ, ಶಿಕ್ಷಣ ಭವಿಷ್ಯ ಇದನ್ನರಿತು ಮಕ್ಕಳ ಸ್ನೇಹಿಯಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ಮಕ್ಕಳ ಓದಿಗಾಗಿ ಗ್ರಾಮ ಪಂಚಾಯತ್ ಕರ ವಸೂಲಾತಿಯನ್ನು ಬಳಸಿಕೊಂಡು ಮಕ್ಕಳಿಗಾಗಿ ಗ್ರಂಥಾಲಯ ಸೇರಿದಂತೆ ಮಕ್ಕಳಿಗೆ ಪೂರಕ ಚಟವಟಿಕೆ, ವಾತಾವರಣ ನಿರ್ಮಿಸಲಾಗಿದೆ ಎಂದು ಹೇಳಿದರು.

      ಸಭೆಯಲ್ಲಿ ಆಯೋಗದ ಸದಸ್ಯರುಗಳಾದ ಶೇಖರಗೌಡ ರಾಮತ್ನಾಳ, ಶಶಿಧರ ಕೋಸಂಬೆ, ಡಾ.ಕೆ.ಟಿ. ತಿಪ್ಪೇಸ್ವಾಮಿ, ಶ್ರೀಮತಿ ಮಂಜು ವೆಂಕಟೇಶ, ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಡಿವೈಎಸ್‍ಪಿ ಬಸವರಾಜ ಯಲಿಗಾರ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಬದ್ರೂದ್ದಿನ ಸೌದಾಗರ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹೇಶ ಪೋತದಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಶ್ರೀಮತಿ ದೀಪಾಕ್ಷಿ ಜಾನಕಿ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

      Tags: #indi / vijayapur#Protection of children's rights through adequate implementation of projects -The President K. Naganna Gowda notice#Public News#Today News#Voice Of Janata#Voiceofjanata.in#ಯೋಜನೆಗಳ ಸಮರ್ಪಕ ಅನುಷ್ಠಾನದ ಮೂಲಕ ಮಕ್ಕಳ ಹಕ್ಕುಗಳ ರಕ್ಷಣೆ ಮುಂದಾಗಿ -ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಸೂಚನೆ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      ಕಾರ್‌ನಲ್ಲಿ ಬೆಂಕಿ ಅವಘಡ, ಮೂವರು ಜಸ್ಟ್ ಪಾರು

      0
      ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಸಹಕಾರ ಅಗತ್ಯ-ಅಲ್ಲಾಭಕ್ಷ ಮಕಾನದಾರ

      ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೋಷಕರ ಸಹಕಾರ ಅಗತ್ಯ-ಅಲ್ಲಾಭಕ್ಷ ಮಕಾನದಾರ

      November 14, 2025
      ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ವಿಮಾ ಮೊತ್ತ ನಿಗದಿ: ಬೆಳೆ ವಿಮೆ ನೊಂದಣಿಗೆ ಅವಕಾಶ

      ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ವಿಮಾ ಮೊತ್ತ ನಿಗದಿ: ಬೆಳೆ ವಿಮೆ ನೊಂದಣಿಗೆ ಅವಕಾಶ

      November 13, 2025
      ನಾನಾ ಕ್ಷೇತ್ರಗಳ ಒಂಬತ್ತು ಜನರು ತಮ್ಮ ಕುಟುಂಬ ಸಮೇತ ಈ ಓಟದಲ್ಲಿ ಪಾಲ್ಗೋಳ್ಳಲು ನೋಂದಣಿ

      ನಾನಾ ಕ್ಷೇತ್ರಗಳ ಒಂಬತ್ತು ಜನರು ತಮ್ಮ ಕುಟುಂಬ ಸಮೇತ ಈ ಓಟದಲ್ಲಿ ಪಾಲ್ಗೋಳ್ಳಲು ನೋಂದಣಿ

      November 13, 2025
      • About Us
      • Contact Us
      • Privacy Policy

      © 2025 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2025 VOJNews - Powered By Kalahamsa Infotech Private Limited.