ಪಕ್ಷ ವಿರೋಧಿ ಚಟುವಟಿಕೆ : ಪುರಸಭೆ ಸದಸ್ಯ ಭೀಮನಗೌಡ ದಾದಾಗೌಡ ಪಾಟೀಲನ್ನು ಪಕ್ಷದಿಂದ ಉಚ್ಚಾಟನೆ..!
ಇಂಡಿ : ಪುರಸಭೆ ಸದಸ್ಯ ಭೀಮನಗೌಡ ದಾದಾಗೌಡ ಪಾಟೀಲನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ಇಂಡಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇಂಡಿ ಪುರಸಭೆ ಸದಸ್ಯರಾಗಿ ಭೀಮನಗೌಡ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಆದ್ರೇ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾರೆ. ಅಲ್ಲದೇ, ಕಾಂಗ್ರೆಸ್ ಪಕ್ಷ ಸೇರ್ಪಡೆ ಹಿನ್ನೆಲೆ ತಕ್ಷಣದಿಂದ ಬಿಜೆಪಿ ಪ್ರಾಥಮಿಕ ಸದಸ್ಯದಿಂದ ಉಚ್ಚಾಟನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.